28 ಐಎಎಸ್ ಅಧಿಕಾರಿಗಳ ವರ್ಗಾವಣೆ, ಮತ್ತೊಂದೆಡೆ ಡಿಸಿ, ಎಸಿ, ತಹಶೀಲ್ದಾರ್ಗಳಿಗೆ ತುಷಾರ್ ಗಿರಿನಾಥ್ ಖಡಕ್ ಎಚ್ಚರಿಕೆ

ತಹಶೀಲ್ದಾರ್ಗಳು ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳ‌ ದೂರವಾಣಿ ಕರೆಗಳನ್ನು ಸ್ವೀಕರಿಸದೇ ಇರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.

28 ಐಎಎಸ್ ಅಧಿಕಾರಿಗಳ ವರ್ಗಾವಣೆ, ಮತ್ತೊಂದೆಡೆ ಡಿಸಿ, ಎಸಿ, ತಹಶೀಲ್ದಾರ್ಗಳಿಗೆ ತುಷಾರ್ ಗಿರಿನಾಥ್ ಖಡಕ್ ಎಚ್ಚರಿಕೆ
ವಿಧಾನಸೌಧ
Updated By: ಆಯೇಷಾ ಬಾನು

Updated on: Oct 11, 2021 | 8:50 PM

ಬೆಂಗಳೂರು: 28 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ ಸಚಿವಾಲಯದ 9 ಅಧೀನ ಕಾರ್ಯದರ್ಶಿಗಳಿಗೆ ಉಪ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ.

28 ಐಎಎಸ್ ಅಧಿಕಾರಿಗಳ ವರ್ಗಾವಣೆ
ಅನಿಲ್ ಕುಮಾರ್-ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಬೆಂ.
ಕಪಿಲ್ ಮೋಹನ್-ಎಸಿಎಸ್, ಆಹಾರ ಇಲಾಖೆ
ಉಮಾ ಶಂಕರ್-ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ
ಸೆಲ್ವ ಕುಮಾರ್-ಕಾರ್ಯದರ್ಶಿ, ಪ್ರಾಥಮಿಕ ಶಿಕ್ಷಣ ಇಲಾಖೆ
ನವೀನ್ ರಾಜ್ ಸಿಂಗ್-ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ
ಜೆ.ರವಿಶಂಕರ್-ಕಾರ್ಯದರ್ಶಿ, ವಸತಿ ಇಲಾಖೆ, ಬೆಂಗಳೂರು
ಡಾ.ರಂದೀಪ್-ಆಯುಕ್ತರು, ಆರೋಗ್ಯ ಇಲಾಖೆ
ಕೆ.ಬಿ.ತ್ರಿಲೋಕ ಚಂದ್ರ-ವಿಶೇಷ ಆಯುಕ್ತರು, ಬಿಬಿಎಂಪಿ
ಕೆ.ಪಿ.ಮೋಹನ್ ರಾಜ್-ಎಂಡಿ, ಕೆಎಸ್ಐಐಡಿಸಿ
ಬಿ.ಬಿ.ಕಾವೇರಿ-ಎಂಡಿ, ಕೆಎಸ್ಎಂಸಿಎಲ್
ಟಿ.ಹೆಚ್.ಎಂ.ಕುಮಾರ್-ಆಯುಕ್ತರು, ಜವಳಿ ಇಲಾಖೆ
ಪ್ರಿಯಾಂಕಾ ಮೇರಿ ಫ್ರಾನ್ಸಿಸ್-ನಿರ್ದೇಶಕರು
ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು
ಕನಗವಲ್ಲಿ-ನಿರ್ದೇಶಕರು, ಸಮಗ್ರ ಮಕ್ಕಳ ರಕ್ಷಣೆ ಯೋಜನೆ
ಬಿ.ರಾಮ್ಪ್ರಸಾತ್-ನಿರ್ದೇಶಕರು, ಗಣಿ ಇಲಾಖೆ
ವೆಂಕಟೇಶ್ ಕುಮಾರ್-ಕಾರ್ಯದರ್ಶಿ, ಕೆಕೆಆರ್ಡಿಬಿ
ಚಾರುಲತಾ ಸೋಮಲ್-ಜಿಲ್ಲಾಧಿಕಾರಿ, ರಾಯಚೂರು
ಶಿಲ್ಪಾನಾಗ್-ಆಯುಕ್ತರು, ಪಂಚಾಯತ್ ರಾಜ್ ಇಲಾಖೆ
ಲಕ್ಷ್ಮೀ ಪ್ರಿಯಾ-ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಸಂಸ್ಥೆ
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ
ಬಿ.ಹೆಚ್.ನಾರಾಯಣ ರಾವ್-ಸಿಇಒ, ವಿಜಯನಗರ ಜಿ.ಪಂ
ಉಕೇಶ್ ಕುಮಾರ್‌, ಕೋಲಾರ ಜಿ.ಪಂ ಸಿಇಒ
ಬಿ.ಸಿ.ಸತೀಶ್‌-ಕೊಡಗು ಜಿಲ್ಲಾಧಿಕಾರಿ
ಹೆಚ್‌.ಎನ್.ಗೋಪಾಲ ಕೃಷ್ಣ-ಎಂಡಿ, ಕೆಪಿಎಲ್‌ಸಿಎಲ್‌
ಶಿವಾನಂದ-ಆಹಾರ ನಿಗಮದ ಎಂಡಿ
ಎಂ.ಎಸ್.ಅರ್ಚನಾ-ನಿರ್ದೇಶಕರು

ಇನ್ನು ಮತ್ತೊಂದೆಡೆ ಸಚಿವಾಲಯದ 9 ಅಧೀನ ಕಾರ್ಯದರ್ಶಿಗಳಿಗೆ ಉಪ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. 4 ಉಪ ಕಾರ್ಯದರ್ಶಿಗಳಿಗೆ ಸ್ಥಳ ನಿಯೋಜಿಸಿ ಆದೇಶ ನೀಡಿದ್ದು 3 ಕೆಎಎಸ್ ಅಧಿಕಾರಿಗಳನ್ನ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಉಪ ಕಾರ್ಯದರ್ಶಿಗಳಿಬ್ಬರ ಸೇವೆ ಹಿಂಪಡೆದು ಡಿಪಿಎಆರ್ಗೆ ವರದಿ ಮಾಡಿಕೊಳ್ಳಲು ಸರ್ಕಾರ ಸೂಚಿಸಿದೆ.

ಡಿಸಿ, ಎಸಿ, ತಹಶೀಲ್ದಾರ್ ಉಪ ತಹಶೀಲ್ದಾರ್ ಖಡಕ್ ಎಚ್ಚರಿಕೆ
ತಹಶೀಲ್ದಾರ್ಗಳು ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳ‌ ದೂರವಾಣಿ ಕರೆಗಳನ್ನು ಸ್ವೀಕರಿಸದೇ ಇರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಡಿಸಿ, ಎಸಿ, ತಹಶೀಲ್ದಾರ್, ಉಪ ತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಮತ್ತು ವಿಎ ದೂರವಾಣಿ ಕರೆ ಸ್ವೀಕರಿಸುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ಕರೆ ಸ್ವೀಕರಿಸಿ ಅಪೇಕ್ಷಿತ ಮಾಹಿತಿ ನೀಡಬೇಕು. ಜನಪ್ರತಿನಿಧಿಗಳಿಗೆ ಅಗೌರವ ತೋರಿರುವುದು ಕಂಡುಬಂದಲ್ಲಿ‌ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸುತ್ತೋಲೆ ಹೊರಡಿಸಿದ್ದಾರೆ.

ಇದನ್ನೂ ಓದಿ: ಆರ್​ಎಸ್​ಎಸ್​ನ ನಾಲ್ಕು ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ; ಹೆಚ್​ಡಿ ಕುಮಾರಸ್ವಾಮಿ