KSRTC, BMTC ಸಂಸ್ಥೆಗಳಿಗೆ ಉತ್ತಮ ಪದ್ಧತಿಗಳ ದಾಖಲೀಕರಣ ಪ್ರಶಸ್ತಿ ಪ್ರದಾನ
KSRTC, BMTC: ಕೆಎಸ್ಆರ್ಟಿಸಿಗೆ ಲಭಿಸಿರುವ ಪ್ರಶಸ್ತಿಯನ್ನು ನಿಗಮದ ಸಿಬ್ಬಂದಿ, ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಿಸಲಾಗಿದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ.
ಬೆಂಗಳೂರು: ಸಿಮ್ಯಾಕ್ ಸಂಸ್ಥೆಯ ಉತ್ತಮ ಪದ್ಧತಿಗಳ ದಾಖಲೀಕರಣ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗಮಕ್ಕೆ 2018-19 ಮತ್ತು 2019-20 ಕ್ಕೆ ಸಂಬಂಧಿಸಿದಂತೆ ಫ್ಲೈಬಸ್ ಸೇವೆ ಮತ್ತು ಸ್ವಚ್ಛತೆಯೇ ಸೇವೆ ಅಭಿಯಾನ ಉಪಕ್ರಮಗಳಿಗೆ ಪ್ರಶಸ್ತಿಗಳು ಲಭಿಸಿದೆ. ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸಿಟಿ ಮ್ಯಾನೇಜರ್ಸ್ ಅಸೋಸಿಯೇಷನ್ ಕರ್ನಾಟಕ ಪೌರಾಡಳಿತ ನಿರ್ದೇಶನಾಲಯದ ಉತ್ತಮ ಪದ್ಧತಿಗಳ ದಾಖಲೀಕರಣ ಪ್ರಶಸ್ತಿ ಲಭಿಸಿದೆ.
ಫ್ಲೈಬಸ್ ಸೇವೆ ಉಪಕ್ರಮಕ್ಕೆ 2018-19ನೇ ಸಾಲಿನಲ್ಲಿ ಹಾಗೂ ಸ್ವಚ್ಛತೆಯೇ ಸೇವೆ ಉಪಕ್ರಮಕ್ಕೆ 2019-20ನೇ ಸಾಲಿನಲ್ಲಿ ಕ್ರಮವಾಗಿ ಮೊದಲನೇ ಮತ್ತು ಎರಡನೇ ಬಹುಮಾನವನ್ನು ದೊರಕಿದೆ. ಇದು 1 ಲಕ್ಷ ಮತ್ತು 75,000 ರೂಪಾಯಿಗಳನ್ನು ಬಹುಮಾನ ಮೊತ್ತವನ್ನು ಹೊಂದಿದೆ. ಅದೇ ರೀತಿ, ಬಿಎಂಟಿಸಿ ಸಂಸ್ಥೆಯನ್ನು ಉತ್ತಮ ಪದ್ಧತಿಗಳ ದಾಖಲೀಕರಣ ವರ್ಗ ಅಡಿಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬಿಎಂಟಿಸಿಗೆ 2018-19ನೇ ಸಾಲಿನಲ್ಲಿ ಲೈನ್ ಡಿಪಾರ್ಟ್ಮೆಂಟ್ ವರ್ಗ ಅಡಿಯಲ್ಲಿ ಸ್ಮಾರ್ಟ್ ಸ್ಟೂಡೆಂಟ್ ಪಾಸ್ ಉಪಕ್ರಮ ಅಳವಡಿಕೆಗಾಗಿ ಟ್ರೋಫಿ ಮತ್ತು ನಗದು ಬಹುಮಾನ ರೂಪಾಯಿ 75,000 ಮೊತ್ತ ಹೊಂದಿರುವಂತೆ ದ್ವಿತೀಯ ಬಹುಮಾನ ನೀಡಲಾಗಿದೆ. ಹಾಗೂ 2019-20 ನೇ ಸಾಲಿನಲ್ಲಿ ಲೈನ್ ಡಿಪಾರ್ಟ್ಮೆಂಟ್ ವರ್ಗ ಅಡಿಯಲ್ಲಿ ಬಸ್ ಪ್ರಿಯಾರಿಟಿ ಲೇನ್ ಉಪಕ್ರಮ ಅಳವಡಿಕೆಗಾಗಿ ಟ್ರೋಫಿ ಮತ್ತು ನಗದು ಬಹುಮಾನ 1,00,000 ರೂಪಾಯಿ ಮೊತ್ತದ ಬಹುಮಾನ ಲಭಿಸಿದೆ.
ಕೆಎಸ್ಆರ್ಟಿಸಿಗೆ ಲಭಿಸಿರುವ ಪ್ರಶಸ್ತಿಯನ್ನು ನಿಗಮದ ಸಿಬ್ಬಂದಿ, ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಿಸಲಾಗಿದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ. ಪ್ರಶಸ್ತಿಯನ್ನು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ನೀಡಿದ್ದಾರೆ.
ಇದನ್ನೂ ಓದಿ: ನೀವೆ ನಮ್ಮ ಪಾಲಿಗೆ ಕೆಎಸ್ಆರ್ಟಿಸಿ ಎಂಡಿ ಎಂದು ಸಿದ್ದರಾಮಯ್ಯಗೆ KSRTC ನೌಕರ ಗೋಗರೆದಿದ್ದು ಏಕೆ?
ಇದನ್ನೂ ಓದಿ: ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್; ಬಿಎಂಟಿಸಿ ಖಾಸಗಿಕರಣದ ಮೊದಲ ಹೆಜ್ಜೆ? ಕಾರ್ಮಿಕರ ಆತಂಕ