Covid 19 Karnataka Update: ಕರ್ನಾಟಕದಲ್ಲಿ 373 ಹೊಸ ಪ್ರಕರಣ, 10 ಮಂದಿ ಸಾವು

ರಾಜ್ಯದಲ್ಲಿ ಪ್ರಸ್ತುತ 9906 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 0.45, ಸೋಂಕಿತರ ಸಾವಿನ ಪ್ರಮಾಣ ಶೇ 2.68 ಇದೆ

Covid 19 Karnataka Update: ಕರ್ನಾಟಕದಲ್ಲಿ 373 ಹೊಸ ಪ್ರಕರಣ, 10 ಮಂದಿ ಸಾವು
ಕೊರೊನಾ ಲಸಿಕೆ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರ 373 ಮಂದಿಯಲ್ಲಿ ಹೊಸದಾಗಿ ಕೊವಿಡ್ ಸೋಂಕು ಕಾಣಿಸಿಕೊಂಡಿದ್ದು, 10 ಮಂದಿ ಮೃತಪಟ್ಟದ್ದಾರೆ. 611 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 9906 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 0.45, ಸೋಂಕಿತರ ಸಾವಿನ ಪ್ರಮಾಣ ಶೇ 2.68 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 29,81,400 ಮಂದಿಯಲ್ಲಿ ಸೋಂಕು ಖಚಿತವಾಗಿದ್ದು, 29,33,570 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದಾರೆ.

ಬೆಂಗಳೂರು ನಗರದಲ್ಲಿ ಸೋಮವಾರ 146 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 210 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, ಐವರು ಮೃತಪಟ್ಟಿದ್ದಾರೆ. ನಗರದಲ್ಲಿ ಈವರೆಗೆ 12,48,459 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,25,685 ಮಂದಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಪ್ರಸ್ತುತ 6580 ಸಕ್ರಿಯ ಪ್ರಕರಣಗಳಿದ್ದರೆ, ಈವರೆಗೆ ಒಟ್ಟು 16,193 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 146, ಮೈಸೂರು 43, ದಕ್ಷಿಣ ಕನ್ನಡ, ಹಾಸನ 38, ತುಮಕೂರು 17, ಕೊಡಗು, ಉಡುಪಿ 15, ಉತ್ತರ ಕನ್ನಡ 12, ಮಂಡ್ಯ 10, ಬೆಂಗಳೂರು ಗ್ರಾಮಾಂತರ, ಕೋಲಾರ 7, ಶಿವಮೊಗ್ಗ 5, ಬಳ್ಳಾರಿ, ಬೆಳಗಾವಿ 3, ಚಾಮರಾಜನಗರ, ದಾವಣಗೆರೆ, ಧಾರವಾಡ, ಚಿಕ್ಕಬಳ್ಳಾಪುರ, ರಾಯಚೂರು 2, ಬೀದರ್, ಕೊಪ್ಪಳ, ಚಿತ್ರದುರ್ಗ, ರಾಮನಗರ 1.

ಯಾವ ಜಿಲ್ಲೆಯ ಎಷ್ಟು ಮಂದಿ ಸಾವು?
ಬೆಂಗಳೂರು ನಗರ 5, ಮೈಸೂರು, ಉತ್ತರ ಕನ್ನಡ 2, ಧಾರವಾಡ 1.

ಇದನ್ನೂ ಓದಿ: Coronavirus cases in India: ಭಾರತದಲ್ಲಿ 18,132 ಹೊಸ ಕೊವಿಡ್ ಪ್ರಕರಣ ಪತ್ತೆ,193 ಮಂದಿ ಸಾವು

ಇದನ್ನೂ ಓದಿ: ಎರಡೂ ಡೋಸ್ ಕೊವಿಡ್ ಲಸಿಕೆ ಪಡೆಯದಿದ್ದರೆ ಕೆಲಸ ಇಲ್ಲ: ನ್ಯೂಜಿಲ್ಯಾಂಡ್ ಸರ್ಕಾರದ ಬಿಗಿ ನಿಯಮ

Read Full Article

Click on your DTH Provider to Add TV9 Kannada