ನೀವೆ ನಮ್ಮ ಪಾಲಿಗೆ ಕೆಎಸ್ಆರ್​ಟಿಸಿ ಎಂಡಿ ಎಂದು ಸಿದ್ದರಾಮಯ್ಯಗೆ KSRTC ನೌಕರ ಗೋಗರೆದಿದ್ದು ಏಕೆ?

ಇಂದು ಬಾಗಲಕೋಟೆ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಜಿಲ್ಲೆಯ ಬಾದಾಮಿ ಕೃಷ್ಣಾ ಹೆರಿಟೇಜ್ ಹೋಟೆಲ್ ಬಳಿ ಅಹವಾಲು ಸ್ವೀಕರಿಸಿದ್ರು. ಈ ವೇಳೆ KSRTC ನೌಕರ ವರ್ಗಾವಣೆಗೆ ಮನವಿ ಸಲ್ಲಿಸಿ ಈ ಬಗ್ಗೆ ಫೋನ್ ಮಾಡಿ ಹೇಳಿ ಸರ್ ಎಂದ. ಹೀಗಾಗಿ ಕೋಪಗೊಂಡ ಸಿದ್ದರಾಮಯ್ಯ ಫೋನ್ ಮಾಡಿದ್ರೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ರು.

ನೀವೆ ನಮ್ಮ ಪಾಲಿಗೆ ಕೆಎಸ್ಆರ್​ಟಿಸಿ ಎಂಡಿ ಎಂದು ಸಿದ್ದರಾಮಯ್ಯಗೆ KSRTC ನೌಕರ ಗೋಗರೆದಿದ್ದು ಏಕೆ?
KSRTC ನೌಕರ ನೀವೆ ನಮ್ಮ ಪಾಲಿಗೆ ಕೆಎಸ್ಆರ್ಟಿಸಿ ಎಂಡಿ ಎಂದು ಸಿದ್ದರಾಮಯ್ಯಗೆ ಗೋಗರೆದಿದ್ದು ಏಕೆ?
Follow us
TV9 Web
| Updated By: ಆಯೇಷಾ ಬಾನು

Updated on:Sep 28, 2021 | 12:35 PM

ಬಾಗಲಕೋಟೆ: ಬಾದಾಮಿ ಕೃಷ್ಣಾ ಹೆರಿಟೇಜ್ ಹೋಟೆಲ್ ಬಳಿ ಅಹವಾಲು ಸ್ವೀಕರಿಸುವ ವೇಳೆ ಸಿದ್ದರಾಮಯ್ಯ ಕೆಎಸ್ಆರ್ಟಿಸಿ ನೌಕರರ ಮೇಲೆ ಗರಂ ಆಗಿದ್ದಾರೆ. ವರ್ಗಾವಣೆ ಬಗ್ಗೆ ಮನವಿ ಸಲ್ಲಿಸಲು ಬಂದ ನೌಕರನ ಮೇಲೆ ಗರಂ ಆಗಿದ್ದಾರೆ.

ಇಂದು ಬಾಗಲಕೋಟೆ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಜಿಲ್ಲೆಯ ಬಾದಾಮಿ ಕೃಷ್ಣಾ ಹೆರಿಟೇಜ್ ಹೋಟೆಲ್ ಬಳಿ ಅಹವಾಲು ಸ್ವೀಕರಿಸಿದ್ರು. ಈ ವೇಳೆ KSRTC ನೌಕರ ವರ್ಗಾವಣೆಗೆ ಮನವಿ ಸಲ್ಲಿಸಿ ಈ ಬಗ್ಗೆ ಫೋನ್ ಮಾಡಿ ಹೇಳಿ ಸರ್ ಎಂದ. ಹೀಗಾಗಿ ಕೋಪಗೊಂಡ ಸಿದ್ದರಾಮಯ್ಯ ಫೋನ್ ಮಾಡಿದ್ರೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ರು. ನಾನೇ ಎಂಡಿ ಅನ್ನೋ ರೀತಿ ಮಾತಾಡುತ್ತೀಯಲ್ಲ. ಸುಮ್ನೇ ಹೋಗಯ್ಯ ಎಂದು ನೌಕರನ ವಿರುದ್ಧ ಗರಂ ಆದ್ರು. ಆಗ ನೌಕರ ನೀವೆ ನಮ್ಮ ಪಾಲಿಗೆ ಎಂಡಿ ಸರ್ ಎಂದು ಉತ್ತರಿಸಿದ.

ನೌಕರನ ವರ್ಗಾವಣೆ ವಿಚಾರವಾಗಿ ಪದೇ ಪದೇ ಸಿದ್ದರಾಮಯ್ಯನವರ ಬಳಿ ಕೇಳಿದ್ದಕ್ಕೆ ಸಿದ್ದು ಗರಂ ಆಗಿದ ಪ್ರಸಂಗ ನಡೆಯಿತು.

ಸಿ.ಟಿ.ರವಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಇನ್ನು ಮತ್ತೊಂದೆಡೆ ಆರ್‌ಎಸ್‌ಎಸ್‌ ಇಲ್ಲದಿದ್ರೆ ಸಿದ್ದರಾಮಯ್ಯ ಪಂಚೆ ಅಷ್ಟೇ ಅಲ್ಲ. ಅವರೂ ನೇತಾಡುತ್ತಿದ್ದರು ಎಂದು ಸಿ.ಟಿ.ರವಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸಿ.ಟಿ.ರವಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.

ಬಾದಾಮಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಶಾಸಕ ಸಿ.ಟಿ.ರವಿಯಿಂದ ದೇಶಭಕ್ತಿ ಪಾಠ ಕಲಿಯಬೇಕಾ?’ ‘ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಆರ್‌ಎಸ್‌ಎಸ್‌ನವರಿಂದ್ಲಾ?’ ‘ಸ್ವಾತಂತ್ರ್ಯ ಸಿಕ್ಕಿದ್ದು ಗಾಂಧೀಜಿ, ತಿಲಕ್, ನೆಹರು ಅವರಿಂದ’ ‘ಏನು ಗೋಡ್ಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆಯಾ?’ ‘ಸಾವರ್ಕರ್ ಅವರಿಂದ ಸ್ವಾತಂತ್ರ್ಯ ಬಂದಿದೆಯಾ?’ ‘ಅವಕ್ಕೆ ಇತಿಹಾಸ ಗೊತ್ತಿಲ್ಲ ಪಾಪ ಮಾತಾಡುತ್ತವೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶಕ್ಕಾಗಿ ಪ್ರಾಣ ಕಳೆದುಕೊಂಡವರು ಯಾರು? RSSನ ಒಬ್ಬರಾದರೂ ದೇಶಕ್ಕಾಗಿ ಸತ್ತಿದ್ದಾರಾ ಹೇಳಿ ನೋಡೋಣ. ನಿಮ್ಮಲ್ಲಿ ಯಾರು ದೇಶಕ್ಕಾಗಿ ಸತ್ತಿದ್ದಾರೆ ಎಂದು ಸಿ.ಟಿ.ರವಿ ಕೇಳಿ. ದೇಶಭಕ್ತಿ ಅಂದರೆ ಬಾಯಲ್ಲಿ ಹೇಳೋದಾ? ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರು ದೇಶಭಕ್ತರು ಎಂದು ಬಾದಾಮಿಯಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು.

ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತ ವಿರುದ್ಧ ಅಧಿಕಾರ ದುರುಪಯೋಗದ ಆರೋಪ

Published On - 12:30 pm, Tue, 28 September 21