AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಬಿಎ ರೀತಿ ಬೆಂಗಳೂರನ್ನು 5 ಕಮಿಷನರೇಟ್ ಮಾಡಿದ ಸರ್ಕಾರ, 5 ವಲಯಗಳಿಗೆ ಪೊಲೀಸ್ ಆಯುಕ್ತರ ನೇಮಕ

ಬಿಬಿಎಂಪಿಯನ್ನು ಐದು ವಲಯಗಳಾಗಿ ಜಿಬಿಎ ಎಂದು ರಾಜ್ಯ ಸರ್ಕಾರ ರಚನೆ ಮಾಡಿದ್ದು, ಇದೀಗ ಇದೇ ರೀತಿ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ರಚನೆ ಮಾಡಿದೆ. ಒಟ್ಟು ಐದು ಪೊಲೀಸ್ ಕಮಿಷನರೇಟ್ ಗಳನ್ನಾಗಿ ಮಾಡಿ ಆಯುಕ್ತರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗಾದ್ರೆ, ಯಾವ ವಲಯಕ್ಕೆ ಯಾರನ್ನು ನೇಮಕ ಮಾಡಲಾಗಿದೆ ಎನ್ನುವ ಡಿಟೇಲ್ಸ್ ಇಲ್ಲಿದೆ.

ಜಿಬಿಎ ರೀತಿ ಬೆಂಗಳೂರನ್ನು 5 ಕಮಿಷನರೇಟ್ ಮಾಡಿದ ಸರ್ಕಾರ, 5 ವಲಯಗಳಿಗೆ ಪೊಲೀಸ್ ಆಯುಕ್ತರ ನೇಮಕ
Bengaluru Police Commissionerate
ರಮೇಶ್ ಬಿ. ಜವಳಗೇರಾ
|

Updated on:Nov 18, 2026 | 5:18 PM

Share

ಬೆಂಗಳೂರು, ನವೆಂಬರ್ 18): ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿದಂತೆ ಒಟ್ಟು 34 ಹಿರಿಯ ಐಪಿಎಸ್ (IPS) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು (ನವೆಂಬರ್ 18) ಆದೇಶ ಹೊರಡಿಸಿದೆ.  ಅಲ್ಲದೇ ಬೆಂಗಳೂರನ್ನು ಐದು ಪೊಲೀಸ್ ಕಮಿಷನರೇಟ್‌ಗಳಾಗಿ ವಿಭಜಿಸಿ  ಆದೇಶಿಸಿದೆ.  ಜಿಬಿಎಯಂತೆ ಐದು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್  ರಚಿಸಲಾಗಿದೆ.  ಕೇಂದ್ರ ಬೆಂಗಳೂರು ನಗರ,  ಪೂರ್ವ ಬೆಂಗಳೂರು, ಪಶ್ಚಿಮ ಬೆಂಗಳೂರು , ಉತ್ತರ ಬೆಂಗಳೂರು ನಗರ ಹಾಗೂ ದಕ್ಷಿಣ ಬೆಂಗಳೂರು ನಗರ ಎಂದು ವಿಂಗಡಣೆ ಮಾಡಲಾಗಿದ್ದು, ಇವುಗಳಿಗೆ ಪೊಲೀಸ್ ಕಮಿಷನರ್​​ಗಳನ್ನು ಸಹ ನೇಮಕ ಮಾಡಲಾಗಿದೆ.

ಬೆಂಗಳೂರಿನಲ್ಲಿ ಐದು ಕಮಿಷನರೇಟ್

ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಐದು ವಿಭಾಗಗಳಾಗಿ (ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ) ವಿಂಗಡಿಸಿ ಐದು ಕಮಿಷನರೇಟ್ ಹುದ್ದೆಗಳನ್ನು ಸರ್ಕಾರ ಸೃಷ್ಟಿಸಿದೆ. ಹೊಸದಾಗಿ ಸೃಷ್ಟಿಸಲಾದ ಎಲ್ಲಾ ಹುದ್ದೆಗಳಿಗೂ ಅಧಿಕಾರಿಗಳನ್ನು ನೇಮಕ ಮಾಡಿದೆ. ಇದರ ಜೊತೆಗೆ ಸ್ಥಳ ನಿರೀಕ್ಷೆಯಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಎಂ.ನಿಂಬಾಳ್ಕರ್‍‌ಗೆ ಬೆಂಗಳೂರು ನಗರ (ಸಂಚಾರ) ಪೊಲೀಸ್ ಆಯುಕ್ತರ ಹುದ್ದೆಯ ಜೊತೆಗೆ, ಮೇಲ್ದರ್ಜೆಗೇರಿಸಲಾದ ರೌಡಿ ನಿಗ್ರಹ ದಳದ (Anti-Rowdy Squad) ಆಯುಕ್ತರ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಇವರು ಮುಖ್ಯ ಆಯುಕ್ತರ ಅಡಿಯಲ್ಲಿ ಅಪರಾಧ ನಿಯಂತ್ರಣದ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ವರ್ಗಾವಣೆ, ಹಿತೇಂದ್ರಗೆ ಹೊಣೆ

ಬೆಂಗಳೂರಿನ 5 ಕಮಿಷನರೇಟ್ ಆಯುಕ್ತರು

  • ಕೇಂದ್ರ ಬೆಂಗಳೂರು ನಗರ (Central Bengaluru City): ಲಭು ರಾಮ್ (ಆಯುಕ್ತರು)
  • ಪೂರ್ವ ಬೆಂಗಳೂರು ನಗರ (East Bengaluru City): ಡಾ. ಪಿ.ಎಸ್. ಹರ್ಷ
  • ಪಶ್ಚಿಮ ಬೆಂಗಳೂರು ನಗರ (West Bengaluru City): ವಿಕಾಶ್ ಕುಮಾರ್ ವಿಕಾಶ್.
  • ಉತ್ತರ ಬೆಂಗಳೂರು ನಗರ (North Bengaluru City): ಡಾ. ಎಂ.ಬಿ. ಬೋರಲಿಂಗಯ್ಯ
  • ದಕ್ಷಿಣ ಬೆಂಗಳೂರು ನಗರ (South Bengaluru City): ಸಿ. ವಂಶಿ ಕೃಷ್ಣ.

ಹೊಸ ಕಮಿಷನರೇಟ್ ವ್ಯವಸ್ಥೆಯ ಮುಖ್ಯಸ್ಥ ಹಿತೇಂದ್ರ

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಾಂತ್ ಕುಮಾರ್ ಸಿಂಗ್ ಅವರ ನಿರ್ಗಮನದಿಂದ ತೆರವಾದ ಸ್ಥಾನಕ್ಕೆ ಹಾಗೂ ಹೊಸ ಕಮಿಷನರೇಟ್ ವ್ಯವಸ್ಥೆಯ ಮುಖ್ಯಸ್ಥರಾಗಿ 1996ನೇ ಬ್ಯಾಚ್‌ನ ಆರ್.ಹಿತೇಂದ್ರ ಅವರನ್ನು ನೇಮಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಆರ್.ಹಿತೇಂದ್ರ ಅವರು ಇನ್ನು ಮುಂದೆ ಬೆಂಗಳೂರು ನಗರದ ಎಡಿಜಿಪಿ ಹಾಗೂ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ

  • ಬಿಜಯ್ ಕುಮಾರ್ ಸಿಂಗ್ -ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ (ಆರ್. ಹಿತೇಂದ್ರ ಅವರ ಸ್ಥಾನಕ್ಕೆ)
  • ಎಸ್. ಮುರುಗನ್ – ಎಡಿಜಿಪಿ, ಲೋಕಾಯುಕ್ತ
  • ಮನೀಶ್ ಖರ್ಬೀಕರ್ – ಎಡಿಜಿಪಿ, ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ, ಬೆಂಗಳೂರು
  • ಎನ್. ಶಶಿ ಕುಮಾರ್ – ಐಜಿಪಿ, ಪಶ್ಚಿಮ ವಲಯ, ಮಂಗಳೂರು
  • ಅನುಪಮ್ ಅಗ್ರವಾಲ್ – ಐಜಿಪಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP)
  • ಡಾ. ಶರಣಪ್ಪ ಎಸ್.ಡಿ – ಡಿಐಜಿ ರೈಲ್ವೆ
  • ಕುಲದೀಪ್ ಕುಮಾರ್ ಆರ್. ಜೈನ್ – ಡಿಐಜಿ ಮತ್ತು ಪೊಲೀಸ್ ಆಯುಕ್ತರು, ಕಲಬುರಗಿ ನಗರ
  • ಎಂ. ಪುಟ್ಟಮಾದಯ್ಯ – ಡಿಐಜಿ, ದಕ್ಷಿಣ ವಲಯ, ಮೈಸೂರು
  • ಡಾ. ಎಂ. ಅಶ್ವಿನಿ – ಡಿಐಜಿ, ನೇಮಕಾತಿ ವಿಭಾಗ, ಬೆಂಗಳೂರು
  • ಜೆ.ಕೆ. ರಶ್ಮಿ – ಡಿಐಜಿ, ವಿಜಿಲೆನ್ಸ್, ಜಲಸಂಪನ್ಮೂಲ ಇಲಾಖೆ

ಬೆಂಗಳೂರಿನ ವಿವಿಧ ವಲಯಗಳ ಡಿಸಿಪಿ, ಎಸ್‌ಪಿಗಳ ವರ್ಗಾವಣೆ

  • ಡಾ. ಅನೂಪ್ ಎ. ಶೆಟ್ಟಿ -ಡಿಸಿಪಿ (ಸಂಚಾರ), ಪೂರ್ವ ಬೆಂಗಳೂರು ನಗರ
  • ಲಕ್ಷ್ಮಣ್ ನಿಂಬರಗಿ – ಡಿಸಿಪಿ, ಸಿಎಆರ್ (CAR – ಕೇಂದ್ರ ಕಚೇರಿ), ಕೇಂದ್ರ ಬೆಂಗಳೂರು ನಗರ
  • ಚನ್ನಬಸವಣ್ಣ ಲಂಗೋಟಿ – ಡಿಸಿಪಿ, ಇಂದಿರಾನಗರ, ಕೇಂದ್ರ ಬೆಂಗಳೂರು ನಗರ
  • ನಾಗೇಶ್ ಡಿ.ಎಲ್ – ಡಿಸಿಪಿ, ಯಶವಂತಪುರ, ಉತ್ತರ ಬೆಂಗಳೂರು ನಗರ
  • ಲೋಕೇಶ್ ಭರಮಪ್ಪ ಜಗಲಾಸರ್ – ಡಿಸಿಪಿ (ಸಂಚಾರ), ಕೇಂದ್ರ ಬೆಂಗಳೂರು ನಗರ
  • ಯತೀಶ್ ಎನ್ – ಡಿಸಿಪಿ, ಕೆಂಗೇರಿ (ನೈಋತ್ಯ), ಪಶ್ಚಿಮ ಬೆಂಗಳೂರು ನಗರ
  • ಸೈದುಲು ಅಡಾವತ್ – ಎಸ್‌ಪಿ, ಆಂತರಿಕ ಭದ್ರತಾ ವಿಭಾಗ (ISD), ಬೆಂಗಳೂರು
  • ಶ್ರೀಹರಿ ಬಾಬು ಬಿ.ಎಲ್ – ಡಿಸಿಪಿ, ವೈಟ್‌ಫೀಲ್ಡ್, ಪೂರ್ವ ಬೆಂಗಳೂರು ನಗರ
  • ಡಾ. ಗೀತಾ ಎಂ.ಎಸ್ – ಡಿಸಿಪಿ, ಪೂರ್ವ ಬೆಂಗಳೂರು ನಗರ
  • ರಂಜಿತ್ ಕುಮಾರ್ ಬಂಡಾರು – ಡಿಸಿಪಿ (ಆಡಳಿತ), ಬೆಂಗಳೂರು ನಗರ
  • ಅಶೋಕ್ ಕೆ.ವಿ – ಡಿಸಿಪಿ, ಪೀಣ್ಯ, ಪಶ್ಚಿಮ ಬೆಂಗಳೂರು ನಗರ
  • ಅಮತೆ ವಿಕ್ರಮ್- ಡಿಸಿಪಿ, ಉತ್ತರ ಬೆಂಗಳೂರು ನಗರ
  • ಲಕ್ಷ್ಮಿ ಗಣೇಶ್ ಕೆ- ಡಿಸಿಪಿ, ಗಾಂಧಿನಗರ, ಕೇಂದ್ರ ಬೆಂಗಳೂರು ನಗರ
  • ಪಿ.ವಿ. ಸ್ನೇಹಾ – ಡಿಸಿಪಿ (ಸಂಚಾರ), ಪಶ್ಚಿಮ ಬೆಂಗಳೂರು ನಗರ

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Wed, 18 November 26

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
"ಬಿಜೆಪಿ ಸರ್ಕಾರವಿದ್ದಾಗಲೇ ಪರಿಹಾರ ಕೊಡದವರು ಈಗ ಕೊಡ್ತಾರಾ?"
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ