ಕರ್ನಾಟಕದಲ್ಲಿ 75 ನೇತಾಜಿ ಅಮೃತ ಶಾಲೆಗಳ ಸ್ಥಾಪನೆಗೆ 9 ಕೋಟಿ ಅನುದಾನ

ಜನವರಿ 23ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತಾಜಿ ಶಾಲೆಗಳನ್ನು ಘೋಷಿಸಿದ್ದರು. ನೇತಾಜಿ ಶಾಲೆಗಳಿಗೆ ₹ 9 ಕೋಟಿ ಅನುದಾನವನ್ನೂ ಮಂಜೂರು ಮಾಡಿದ್ದರು

ಕರ್ನಾಟಕದಲ್ಲಿ 75 ನೇತಾಜಿ ಅಮೃತ ಶಾಲೆಗಳ ಸ್ಥಾಪನೆಗೆ 9 ಕೋಟಿ ಅನುದಾನ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಎನ್​ಸಿಸಿ ಕೆಡೆಟ್​ಗಳು
Edited By:

Updated on: Jan 25, 2022 | 6:23 PM

ಬೆಂಗಳೂರು: ಕರ್ನಾಟಕದಲ್ಲಿ 75 ನೇತಾಜಿ ಅಮೃತ ಶಾಲೆಗಳನ್ನು ಘೋಷಿಸಿ ರಾಜ್ಯ ಸರ್ಕಾರ ಮಂಗಳವಾರ ಅಧಿಕೃತ ಆದೇಶ ಹೊರಡಿಸಿದೆ. ಜನವರಿ 23ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaja Bommai) ನೇತಾಜಿ ಶಾಲೆಗಳನ್ನು ಘೋಷಿಸಿದ್ದರು. ನೇತಾಜಿ ಶಾಲೆಗಳಿಗೆ ₹ 9 ಕೋಟಿ ಅನುದಾನವನ್ನೂ ಮಂಜೂರು ಮಾಡಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆದ ಹಿನ್ನೆಲೆಯಲ್ಲಿ 75 ಎನ್​ಸಿಸಿ ಯುನಿಟ್ (NCC Cadets) ಆರಂಭಿಸಿ 7,500 ಕೆಡೆಟ್‌ಗಳಿಗೆ ಅವಕಾಶ ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದರು.

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಈಚೆಗೆ ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬೊಮ್ಮಾಯಿ, ಎನ್‌ಸಿಸಿ ಸೇರಲು ವಿದ್ಯಾರ್ಥಿಗಳನ್ನು ಉತ್ತೇಜಿಸಲು ಸರ್ಕಾರವು ಈ ತೀರ್ಮಾನಕ್ಕೆ ಬಂದಿದೆ. 7,500 ವಿದ್ಯಾರ್ಥಿಗಳಿಗೆ ವರ್ಷಕ್ಕೆ ತಲಾ ₹ 12 ಸಾವಿರ ಖರ್ಚಾಗಲಿದೆ. ಈ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದರು.

ಕರ್ನಾಟಕದ ವಿವಿಧ ಶಾಲೆಗಳಲ್ಲಿ 44 ಸಾವಿರ ಕೆಡೆಟ್‌ಗಳಿದ್ದಾರೆ. ಇವರನ್ನು ಕಾಲೇಜುಗಳ ಜೊತೆ ವಿಲೀನಗೊಳಿಸಿ ಕೆಡೆಟ್‌ಗಳ ಸಂಖ್ಯೆಯನ್ನು 50 ಸಾವಿರಕ್ಕೆ ಏರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದರೆ ಇದಕ್ಕೆ ರಕ್ಷಣಾ ಇಲಾಖೆ ಅನುಮತಿ ಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ: ಸುಭಾಷ್ ಚಂದ್ರ ಬೋಸ್ ಬ್ರಿಟಿಷರ ವಿರುದ್ಧ ಸೈನ್ಯವನ್ನು ಕಟ್ಟಿದ ಅಪ್ರತಿಮ ನಾಯಕ; ಸಿಎಂ ಬೊಮ್ಮಾಯಿ ಮಾತು
ಇದನ್ನೂ ಓದಿ: 19 ಮಂದಿ ಉನ್ನತ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಬಸವರಾಜ ಬೊಮ್ಮಾಯಿ ಸರ್ಕಾರ