ಮುಂದುವರಿದು ಮಾತನಾಡಿದ ಸಿಎಂ ಬೊಮ್ಮಾಯಿ, ಸ್ವಾತಂತ್ರ್ಯಕ್ಕೆ ದೊಡ್ಡ ಭದ್ರಬುನಾದಿಯನ್ನು ಹಾಕಿದ್ದರು. ನೇತಾಜಿ ಸುಭಾಷ್ ಚಂದ್ರ ಬೋಸ್ರ ದೇಶಭಕ್ತಿ, ದೇಶಕ್ಕಾಗಿ ತ್ಯಾಗ ಮಾಡುವ ಅವರ ಧ್ಯೇಯದ ಬಗ್ಗೆ ಹೇಳಬೇಕು. ಇಡೀ ವರ್ಷ ಕಾಲೇಜುಗಳಲ್ಲಿ ಚರ್ಚೆ, ಎಕ್ಸಿಬಿಷನ್ ಮಾಡುತ್ತೇವೆ. ನೇತಾಜಿಯವರ ಕೃತಿಗಳನ್ನ ಕನ್ನಡದಲ್ಲಿ ಮುದ್ರಣ ಮಾಡುತ್ತೇವೆ. ವಿಧಾನಸೌಧ ಆವರಣದ ಸೂಕ್ತ ಸ್ಥಳವನ್ನು ನೋಡಿ ನೇತಾಜಿ ಪ್ರತಿಮೆ ಇಡುತ್ತೇವೆ. ಮುಂದಿನ ಹುಟ್ಟುಹಬ್ಬದ ವೇಳೆಗೆ ಪ್ರತಿಮೆ ಸ್ಥಳಾಂತರ ಮಾಡುತ್ತೇವೆ ಅಂತ ತಿಳಿಸಿದರು.
ನ್ಯಾಯಮೂರ್ತಿ ಮಂಜುನಾಥ್ ನಿಧನಕ್ಕೆ ಬೊಮ್ಮಾಯಿ ಸಂತಾಪ
ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರಾಗಿದ್ದ ಕೆ ಎಲ್ ಮಂಜುನಾಥ್ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಮಂಜುನಾಥ್ ಅವರು ಅತ್ಯುತ್ತಮ ವಕೀಲರಾಗಿ, ವಕೀಲರ ಸಂಘದ ಅಧ್ಯಕ್ಷರಾಗಿ, ಹೈ ಕೋರ್ಟ್ ನ್ಯಾಯಾಧೀಶರಾಗಿ, ಕರ್ನಾಟಕ ನದಿ ನೀರು ಮತ್ತು ಗಡಿ ವಿವಾದ ಪ್ರಾಧಿಕಾರದ ಅಧ್ಯಕ್ಷರಾಗಿ, ಆಂಧ್ರ ಪ್ರದೇಶದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬದವರು ಹಾಗೂ ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ
ಹರ್ಭಜನ್ ದಂಪತಿಗೆ ಕೊವಿಡ್; ಎರಡು ವರ್ಷದಿಂದ ವೈರಸ್ ಕೈಗೆ ಸಿಗದೇ ಓಡಾಡಿಕೊಂಡಿದ್ದೆವು ಎಂದು ತಮಾಷೆ ಮಾಡಿದ ಗೀತಾ