ಹರ್ಭಜನ್ ದಂಪತಿಗೆ ಕೊವಿಡ್; ಎರಡು ವರ್ಷದಿಂದ ವೈರಸ್ ಕೈಗೆ ಸಿಗದೇ ಓಡಾಡಿಕೊಂಡಿದ್ದೆವು ಎಂದು ತಮಾಷೆ ಮಾಡಿದ ಗೀತಾ

ಹರ್ಭಜನ್ ದಂಪತಿಗೆ ಕೊವಿಡ್; ಎರಡು ವರ್ಷದಿಂದ ವೈರಸ್ ಕೈಗೆ ಸಿಗದೇ ಓಡಾಡಿಕೊಂಡಿದ್ದೆವು ಎಂದು ತಮಾಷೆ ಮಾಡಿದ ಗೀತಾ
ಹರ್ಭಜನ್- ಗೀತಾ ದಂಪತಿ

Geeta Basra | Harbhajan Singh: ಖ್ಯಾತ ಕ್ರಿಕೆಟ್ ತಾರೆ ಹರ್ಭಜನ್ ಸಿಂಗ್ ಹಾಗೂ ಬಾಲಿವುಡ್ ನಟಿ ಗೀತಾ ಬಾಸ್ರಾ ದಂಪತಿ ಕೊವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಈ ಕುರಿತು ದಂಪತಿ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

TV9kannada Web Team

| Edited By: shivaprasad.hs

Jan 23, 2022 | 10:00 AM

ಮುಂಬೈ: ಖ್ಯಾತ ಕ್ರಿಕೆಟ್ ತಾರೆ ಹರ್ಭಜನ್ ಸಿಂಗ್ (Harbhajan Singh) ಹಾಗೂ ಬಾಲಿವುಡ್ ನಟಿ ಗೀತಾ ಬಾಸ್ರಾ (Geeta Basra) ದಂಪತಿಗೆ ಕೋವಿಡ್ (Covid) ಪಾಸಿಟಿವ್ ಆಗಿದೆ. ಈ ಕುರಿತು ತಮಾಷೆಯಾಗಿಯೇ ಬರೆದುಕೊಂಡಿರುವ ಗೀತಾ, ಎರಡು ವರ್ಷದಿಂದ ಕೈಗೆ ಸಿಗದೇ ಓಡಾಡಿಕೊಂಡಿದ್ದೆವು. ಇದೀಗ ಸೋಂಕು ತಗುಲಿದೆ ಎಂದು ಹೇಳಿಕೊಂಡಿದ್ದಾರೆ. ಕೊವಿಡ್ ಪಾಸಿಟಿವ್ ಆಗಿದ್ದರ ಕುರಿತು ಗೀತಾ ಹಾಗೂ ಹರ್ಭಜನ್ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಲು ಕೋರಿಕೊಂಡಿದ್ದಾರೆ. ಸೋಂಕು ತಗುಲಿರುವುದರ ಕುರಿತು ಬರೆದುಕೊಂಡಿರುವ ಗೀತಾ ಬಾಸ್ರಾ, ‘‘2 ವರ್ಷಗಳಿಂದ ಬಹಳಷ್ಟು ಎಚ್ಚರಿಕೆ, ಮುಂಜಾಗ್ರತೆಗಳನ್ನು ತೆಗೆದುಕೊಂಡಿದ್ದೆವು. ಅದಾಗ್ಯೂ 2 ವರ್ಷದ ನಂತರ ವೈರಸ್ ನಮ್ಮನ್ನು ಹಿಡಿದಿದೆ. ಇದೀಗ ಕ್ವಾರಂಟೈನ್ ಮೋಡ್’’ ಎಂದು ತಿಳಿಸಿದ್ದಾರೆ. ಜತೆಗೆ ಚಿತ್ರವೊಂದನ್ನು ಹಂಚಿಕೊಂಡಿರುವ ಗೀತಾ, ‘‘ನಮಗೆ ಬೇಕಿಲ್ಲದ ಒಂದೇ ಒಂದು ಪಾಸಿಟಿವ್’’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಅಭಿಮಾನಿಗಳು ನಟಿಗೆ ಆದಷ್ಟು ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಗೀತಾ ಹಂಚಿಕೊಂಡ ಟ್ವೀಟ್:

ಹರ್ಭಜನ್ ಹೇಳಿದ್ದೇನು? ಕೊವಿಡ್ ಪಾಸಿಟಿವ್ ಆಗಿದ್ದರ ಕುರಿತು ಟ್ವೀಟ್ ಮಾಡಿರುವ ಹರ್ಭಜನ್ ಸಿಂಗ್, ‘‘ಸಣ್ಣ ಪ್ರಮಾಣದಲ್ಲಿ ಕೊವಿಡ್​ ಲಕ್ಷಣಗಳು ಕಾಣಿಸಿಕೊಂಡಿತ್ತು. ಪರೀಕ್ಷಿಸಿದಾಗ ಪಾಸಿಟಿವ್ ಬಂದಿದೆ. ಸದ್ಯ ಕ್ವಾರಂಟೈನ್ ಆಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ. ಎಲ್ಲರೂ ಸುರಕ್ಷಿತರಾಗಿರಿ’’ ಎಂದು ಬರೆದಿದ್ದಾರೆ.

ಕಳೆದ ಡಿಸೆಂಬರ್​​ 24ರಂದು ಹರ್ಭಜನ್ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದರು. ಆ ಸಂದರ್ಭದಲ್ಲಿ ಪತ್ನಿ ಗೀತಾ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದರು. ಅದರಲ್ಲಿ ಅವರು ಹರ್ಭಜನ್ ಅವರ 23 ವರ್ಷದ ವೃತ್ತಿ ಜೀವನ, ಕುಟುಂಬ ಆ ಸಮಯದಲ್ಲಿ ಎದುರಿಸಿದ ಸವಾಲುಗಳು ಮೊದಲಾದವುಗಳನ್ನು ವಿವರಿಸಿದ್ದರು. ‘‘ಇಂದು ನೀವು ಏನನ್ನು ಸಾಧಿಸಿದ್ದೀರೋ ಅದಕ್ಕೆ ಹೆಮ್ಮೆಯಿದೆ. ಇದು ನಿಮಗೆ ಬೇಕಅದ ಅಥವಾ ನೀವು ಯೋಜಿಸಿದ ಅಂತ್ಯವಲ್ಲ. ಆದರೆ ಅದು ನಮ್ಮ ಕೈಯಲ್ಲಿಲ್ಲ. ಕ್ರೀಡೆಯನ್ನು ಬಹಳ ಆತ್ಮವಿಶ್ವಾಸ ಹಾಗೂ ಪ್ರೀತಿಯಿಂದ ಆಡಿದ್ದೀರಿ’’ ಎಂದು ಗೀತಾ ಬರೆದಿದ್ದರು. ಗೀತಾ ಹಾಗೂ ಹರ್ಭಜನ್ ವಿವಾಹವಾಗಿದ್ದು 2015ರ ಅಕ್ಟೋಬರ್ 29ರಂದು. ದಂಪತಿಗೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯಿದ್ದಾಳೆ.

ಇದನ್ನೂ ಓದಿ:

‘ಆರ್​ಆರ್​ಆರ್​’ ಎದುರು ‘ಬಚ್ಚನ್​ ಪಾಂಡೆ’ ಕ್ಲ್ಯಾಷ್​;​ ಬಾಕ್ಸ್​ ಆಫೀಸ್​ ಮುಖಾಮುಖಿ ತಪ್ಪಿಸಲು ಬೇರೆ ದಾರಿ ಏನು?​

‘ಯಾವ ಉಡುಪು ಧರಿಸಬೇಕು ಎಂಬ ಅರಿವಿರದ ದಡ್ಡಿ ನಾನಲ್ಲ’; ಟ್ರೋಲಿಗರಿಗೆ ಖಾರವಾಗಿ ಪ್ರತಿಕ್ರಿಯಿಸಿದ ಮಲೈಕಾ

Follow us on

Related Stories

Most Read Stories

Click on your DTH Provider to Add TV9 Kannada