ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆಗೆ ಕರ್ನಾಟಕ ಸರ್ಕಾರ ತೀರ್ಮಾನ
Onake Obavva Jayanti: ನವೆಂಬರ್ 11ರಂದು ಒನಕೆ ಓಬವ್ವ ಜಯಂತಿ ಆಚರಣೆ ಮಾಡಲಾಗುವ ಬಗ್ಗೆ ಆದೇಶ ನೀಡಲಾಗಿದೆ. ಕೋಟೆನಾಡು ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆಗೆ ಆದೇಶ ಹಿನ್ನೆಲೆ, ಚಿತ್ರದುರ್ಗದ ಜನರಲ್ಲಿ ಖುಷಿ ಮೂಡಿದೆ.
ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಒನಕೆ ಓಬವ್ವ ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಚರಣೆಗೆ ಆದೇಶ ಹೊರಡಿಸಲಾಗಿದೆ. ನವೆಂಬರ್ 11ರಂದು ಒನಕೆ ಓಬವ್ವ ಜಯಂತಿ ಆಚರಣೆ ಮಾಡಲಾಗುವ ಬಗ್ಗೆ ಆದೇಶ ನೀಡಲಾಗಿದೆ. ಕೋಟೆನಾಡು ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆಗೆ ಆದೇಶ ಹಿನ್ನೆಲೆ, ಚಿತ್ರದುರ್ಗದ ಜನರಲ್ಲಿ ಖುಷಿ ಮೂಡಿದೆ.
ಚಿತ್ರದುರ್ಗ: ಬುಡಕಟ್ಟು ಉತ್ಸವಕ್ಕೆ ಪ್ರೇಕ್ಷಕರಿಲ್ಲ ಕೋಟೆನಾಡಿನಲ್ಲಿ ಬುಡಕಟ್ಟು ಉತ್ಸವ ಕಾಟಾಚಾರಕ್ಕೆ ನಡೆದಂತೆ ನಡೆಯುತ್ತಿದೆ ಎಂಬ ಟೀಕೆಗಳು ಕೇಳಿಬಂದಿದೆ. ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಉತ್ಸವ ನಡೆಯುತ್ತಿದೆ. ಕೇಂದ್ರ ಬುಡಕಟ್ಟು ಮಂತ್ರಾಲಯ ಹಾಗೂ ರಾಜ್ಯ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಉತ್ಸವ ಆಯೋಜನೆ ಮಾಡಲಾಗಿದೆ.
ಅಧಿಕಾರಿಗಳ ಬೇಜವಾಬ್ದಾರಿತನದಿಂದ ಜನರ ಭಾಗಿತ್ವ ಕೊರತೆ ಇದೆ. ಬುಡಕಟ್ಟು ಉತ್ಸವದ ಬಗ್ಗೆ ಪ್ರಚಾರ ಕೊರತೆ ಹಿನ್ನೆಲೆ ವಿವಿಧ ಬುಡಕಟ್ಟು ಸಮುದಾಯದ ಸ್ಟಾಲ್ಗಳು ಖಾಲಿ ಖಾಲಿ ಕಾಣುತ್ತಿದೆ. ವೀಕ್ಷಕರಿಲ್ಲದೆ ಬಿಕೋ ಎನ್ನುತ್ತಿರುವ ಬುಡಕಟ್ಟು ಉತ್ಸವಕ್ಕೆ ಕೆಲ ಶಾಲಾ ಮಕ್ಕಳನ್ನು ಕಾರ್ಯಕ್ರಮ ವೀಕ್ಷಣೆಗೆ ಕರೆತರಲಾಗಿದೆ. ಬುಡಕಟ್ಟು ಉತ್ಸವ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿದೆ.
ಜೋಗತಿ ಮಾತಾ ಮಂಜಮ್ಮಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಜೋಗತಿ ಮಾತಾ ಮಂಜಮ್ಮಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಂಜಮ್ಮ ಜೋಗತಿ ಪದ್ಮಶ್ರಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವ ಮಂಜಮ್ಮ ಜಾನಪದ ಅಕಾಡೆಮಿಯ ಮೊದಲ ಮಂಗಳಮುಖಿ ಅಧ್ಯಕ್ಷೆ ಆಗಿದ್ದಾರೆ. ಅವರು 2021ನೇ ಸಾಲಿನ ಪದ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ ‘ಕಿತ್ತೂರು ಕರ್ನಾಟಕಕ್ಕೆ: ಕರಾವಳಿ ಸೌಲಭ್ಯಗಳಿಂದ ವಂಚಿತ?
ಇದನ್ನೂ ಓದಿ: Karnataka Rajyotsava 2021: ಕನ್ನಡ ಹಿರಿಮೆಯನ್ನು ಜಗತ್ತಿಗೆ ಸಾರಿದ ಶ್ರೇಷ್ಠರು ಇವರು
Published On - 5:42 pm, Tue, 9 November 21