Karnataka Rajyotsava 2021: ಕನ್ನಡ ಹಿರಿಮೆಯನ್ನು ಜಗತ್ತಿಗೆ ಸಾರಿದ ಶ್ರೇಷ್ಠರು ಇವರು

ಕನ್ನಡ ಕೇವಲ ಭಾಷೆಯಲ್ಲ. 7 ಕೋಟಿ ಕನ್ನಡಿಗರ ಬದುಕು. ಕನ್ನಡ ಭಾಷೆ ಬಳಕೆ ಇತ್ತೀಚೆಗೆ ಕಡಿಮೆ ಇರಬಹುದು. ಆದರೆ ಭಾಷೆಗೆ ಪ್ರತಿಯೊಬ್ಬ ಕನ್ನಡಿಗ ಗೌರವ ಸಲ್ಲಿಸುತ್ತಿದ್ದಾನೆ. ಇದು ಎಲ್ಲರ ಜವಬ್ದಾರಿಯೂ ಕೂಡಾ ಹೌದು.

Karnataka Rajyotsava 2021: ಕನ್ನಡ ಹಿರಿಮೆಯನ್ನು ಜಗತ್ತಿಗೆ ಸಾರಿದ ಶ್ರೇಷ್ಠರು ಇವರು
ಕನ್ನಡ ಬಾವುಟ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on:Nov 02, 2021 | 7:26 AM

ಕನ್ನಡ ಎನ್ನುವ ಪದದಲ್ಲೇ ಶಕ್ತಿಯಿದೆ. ರಾಷ್ಟ್ರ ಕವಿ ಕುವೆಂಪು ಹೇಳಿದಂತೆ ಕನ್ನಡ ಎಂದರೆ ಕಿವಿಗಳು ನೆಟ್ಟಗಾಗುತ್ತವೆ.ಕನ್ನಡ ಭಾಷೆಯನ್ನು ಮಾತನಾಡುತ್ತಾ, ಕರ್ನಾಟಕದಲ್ಲಿ ಜೀವನ ಕಳೆಯುವುದಕ್ಕೂ ಪುಣ್ಯ ಪಡೆದಿರಬೇಕು. ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆ ಕೂಡಾ ಒಂದಾಗಿದೆ. 2,500 ವರ್ಷಗಳ ಹಿಂದೆ ಕನ್ನಡ ಭಾಷೆ ಅಸ್ತಿತ್ವದಲ್ಲಿತ್ತು ಎನ್ನುವುದು ಸಾಬೀತಾಗಿದೆ. ಇತಿಹಾಸದ ಪುಟವನ್ನೇ ಹೊಂದಿರುವ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿದ ಹೆಗ್ಗಳಿಕೆ ಇದೆ. ಈ ಎಲ್ಲಾ ನಡುವೆ ಕನ್ನಡ ಭಾಷೆ ಮಾತನಾಡಿದರೆ ಎಲ್ಲಿ ಘನತೆ ಕಡಿಮೆಯಾಗುತ್ತದೆ ಎನ್ನುವ ಮನಸ್ಥಿತಿ ಕೆಲವರಲ್ಲಿದೆ. ಇದರಿಂದ ಸ್ವಚ್ಛಂದ ಕನ್ನಡ ಭಾಷೆ ಕಣ್ಮರೆಯಾಗುತ್ತಾ? ಎಂಬ ಆತಂಕ ಇತ್ತೀಚೆಗೆ ದೊಡ್ಡ ಪರ್ವತವಾಗಿ ಬೆಳೆದು ನಿಂತಿದೆ. ಆದರೆ ಅಚ್ಚ ಕನ್ನಡ ಮಾತನಾಡುವ ಸ್ವಚ್ಛ ಮನಸಿಗರು ನಮ್ಮ ನಡುವೆ ಇದ್ದಾರೆ ಎನ್ನುವುದು ಒಂದು ರೀತಿಯ ನೆಮ್ಮದಿ.

ಕನ್ನಡ ಕೇವಲ ಭಾಷೆಯಲ್ಲ. 7 ಕೋಟಿ ಕನ್ನಡಿಗರ ಬದುಕು. ಕನ್ನಡ ಭಾಷೆ ಬಳಕೆ ಇತ್ತೀಚೆಗೆ ಕಡಿಮೆ ಇರಬಹುದು. ಆದರೆ ಭಾಷೆಗೆ ಪ್ರತಿಯೊಬ್ಬ ಕನ್ನಡಿಗ ಗೌರವ ಸಲ್ಲಿಸುತ್ತಿದ್ದಾನೆ. ಇದು ಎಲ್ಲರ ಜವಬ್ದಾರಿಯೂ ಕೂಡಾ ಹೌದು. ಕನ್ನಡ ಭಾಷೆಗೆ ಜೀವ ತುಂಬಿದ್ದು ಕವಿಗಳು. ಕಲ್ಪನೆ, ನೈಜ್ಯತೆಗಳನ್ನು ಸಮಾಜಕ್ಕೆ ಸಾರಲು ಕನ್ನಡ ಭಾಷೆಯಲ್ಲಿ ಸಾಧ್ಯವಾಗಿದ್ದು ಕರ್ನಾಟಕದಲ್ಲಿ ಜನನ ಪಡೆದ ಕವಿಗಳಿಂದ. ಅಂತಹ ಎಂಟು ಕವಿಗಳಿಗೆ ಜ್ಞಾನಪೀಠ ಪ್ರಶಸ್ತಿ ಕೂಡಾ ಸಿಕ್ಕಿದೆ. ಹಾಗಾದರೆ ಆ ಎಂಟು ಕವಿಗಳು ಯಾರು? ಆ ಕವಿಗಳ ಸ್ವವಿವರ ಇಲ್ಲಿದೆ.

1. ಕುವೆಂಪು ರಾಷ್ಟ್ರ ಕವಿ ಕುವೆಂಪು ಅವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ವೆಂಕಟಪ್ಪ ಮತ್ತು ಸೀತಮ್ಮ ದಂಪತಿಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆ ಎಂಬಲ್ಲಿ ಕುವೆಂಪು ಜನಿಸುತ್ತಾರೆ. 1904 ಡಿಸೆಂಬರ್ 29ರಂದು ಜನಿಸಿದ ಇವರು ಬಾಲ್ಯದ ದಿನಗಳನ್ನು ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಕಳೆಯುತ್ತಾರೆ. ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಎಂಬ ಎರಡು ಕಾದಂಬರಿಗಳನ್ನು ನೀಡಿದ ಮಹಾನ್ ಕಾದಂಬರಿಕಾರ ಇವರು. ಕುವೆಂಪು ಕನ್ನಡದ ಶ್ರೇಷ್ಠ ಕವಿ, ನಾಟಕಕಾರ, ಕಾದಂಬರಿಕಾರ, ವಿಮರ್ಶಕ, ಚಿಂತಕರಾಗಿದ್ದರು. ವರಕವಿ ದ.ರಾ.ಬೇಂದ್ರೆಯವರು ಕುವೆಂಪುರನ್ನು ಯುಗದ ಕವಿ ಜಗದ ಕವಿ ಎಂದು ಕರೆಯುತ್ತಾರೆ. ವಿಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿದೆ. ಶ್ರೀರಾಮಾಯಣ ದರ್ಶನಂ ಎಂಬ ಮಹಾಕಾವ್ಯಕ್ಕೆ 1967ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುತ್ತಾರೆ.

2. ದ.ರಾ.ಬೇಂದ್ರೆ ವರಕವಿ ಎಂದು ಪ್ರಸಿದ್ಧರಾಗಿರುವ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಶ್ರೇಷ್ಠ ಕವಿ ಮತ್ತು ಕಾದಂಬರಿಕಾರ. ನಾಕುತಂತಿ ಎಂಬ ಕವನ ಸಂಕಲನಕ್ಕೆ 1973ರಲ್ಲಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಮಾತ್ರವಲ್ಲದೆ ಪದ್ಮಶ್ರೀಯೂ ದ.ರಾ.ಬೇಂದ್ರೆಯವರಿಗೆ ಲಭಿಸಿದೆ. ಪ್ರಸಿದ್ಧ ಕವಿ ದ.ರಾ.ಬೇಂದ್ರೆಯವರು 1896, ಜನವರಿ 31ಕ್ಕೆ ಜನಿಸುತ್ತಾರೆ. ಇವರ ತಂದೆ ಹೆಸರು ರಾಮಚಂದ್ರ ಭಟ್ಟ. ತಾಯಿ ಹೆಸರು ಅಂಬಿಕೆ. ತನ್ನ 85 ವರ್ಷಕ್ಕೆ ಬೇಂದ್ರೆಯವರು ಕೊನೆಯುಸಿರೆಳೆದಿದ್ದಾರೆ. ಮಹಾಕವಿಯಾಗಿ ಹೊರ ಹೊಮ್ಮಿರುವ ದ.ರಾ.ಬೇಂದ್ರೆಯವರ ಅಂಕಿತ ನಾಮ ಅಂಬಿಕಾತನಯದತ್ತ. ಠೋಸರ ಎಂಬುವುದು ಬೆಂದ್ರೆಯವರ ಮನೆತನದ ಹೆಸರು. ಇವರು ಹನ್ನೊಂದು ವರ್ಷ ಇರುವಾಗಲೇ ತನ್ನ ತಂದೆಯನ್ನು ಕಳೆದುಕೊಳ್ಳುತ್ತಾರೆ. 1918ರಲ್ಲಿ ಬಿಎ, 1935ರಲ್ಲಿ ಎಂಎ ಮಾಡುತ್ತಾರೆ. ನಂತರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಾರೆ. 1918ರಲ್ಲಿ ಇವರು ಬರೆದ ಮೊದಲ ಕವನ ಪ್ರಭಾತ ಎಂಬ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ನಂತರ ಬೇಂದ್ರೆಯವರು ಕಾವ್ಯ ರಚನೆ ಮಾಡುತ್ತಾ ಬರುತ್ತಾರೆ.

3. ಶಿವರಾಮ ಕಾರಂತ ಕಡಲತೀರದ ಭಾರ್ಗವ, ನಡೆದಾಡುವ ವಿಶ್ವಕೋಶ ಎಂದು ಖ್ಯಾತರಾಗಿದ್ದ ಶಿವರಾಮ ಕಾರಂತರವರು ಹುಟ್ಟಿದ್ದು ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ. 1902 ಅಕ್ಟೋಬರ್ 10ಕ್ಕೆ ಜನಿಸಿದ ಇವರು, 1997 ಡಿಸೆಂಬರ್ 9ಕ್ಕೆ ಮರಣ ಹೊಂದುತ್ತಾರೆ. ತನ್ನ 95 ವರ್ಷದಲ್ಲಿ ಸುಮಾರು 492 ಪುಸ್ತಕಗಳನ್ನು ರಚಿಸಿದ್ದಾರೆ. ಮೂಕಜ್ಜಿಯ ಕನಸುಗಳು ಎಂಬ ಕಾದಂಬರಿಗೆ 1977ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಈ ಕಾದಂಬರಿಯಲ್ಲಿ ಅಜ್ಜಿ ಮತ್ತ ಮೊಮ್ಮಗನ ನಡುವಿನ ಸಂಭಾಷಣೆಯನ್ನು ಕಾರಂತರು ತುಂಬಾ ಸೊಗಸಾಗಿ ಬರೆದಿದ್ದಾರೆ. ಯಕ್ಷಗಾನದ ಉಳಿವಿಗಾಗಿ ಇವರ ಪ್ರಯತ್ನ ಗಮನಾರ್ಹ. ಯುವ ವಯಸಿನಲ್ಲಿ ಸಮಾಜ ಸುಧಾರಣೆ ಕಾರ್ಯಗಳಿಗೆ ಕೈ ಹಾಕಿದ್ದ ಇವರು, ವೇಶ್ಯಾ ವಿವಾಹಗಳನ್ನು ಮಾಡಿಸಿದ್ದರು. ಕವಿ, ವೈಜ್ಞಾನಿಕ ಬರಹಗಾರ, ಅನುವಾದಕ, ನಾಟಕಗಾರರಾಗಿರುವ ಕಾರಂತರು ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರು ಕನ್ನಡಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ.

4. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡದ ಅಪ್ರತಿಮ ಲೇಖಕರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕೂಡಾ ಒಬ್ಬರು. ಕನ್ನಡ ನಾಡಿಗೆ ಇವರ ಕೊಡುಗೆ ಅಪಾರ. 1891 ಜೂನ್ 6ರಂದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಜನಿಸುತ್ತಾರೆ. ಮದ್ರಾಸ್ನಲ್ಲಿ ಎಂಎ ಇಂಗ್ಲೀಷ್ ವಿದ್ಯಾಭ್ಯಾಸ ಮಾಡುತ್ತಾರೆ. ನಂತರ ಬೆಂಗಳೂರಿಗೆ ಬಂದು ಸಿವಿಲ್ ಪರೀಕ್ಷೆಯಲ್ಲಿ ಪ್ರಥಮರಾಗಿ ತೇರ್ಗಡೆಯಾಗುತ್ತಾರೆ. ಮೈಸೂರು ಸರ್ಕಾರದಲ್ಲಿ ಅಸಿಸ್ಟೆಂಟ್ ಕಮೀಶನರ್ ಆಗಿ ವೃತ್ತಿ ಜೀವನ ಆರಂಭಿಸುತ್ತಾರೆ. ಸಣ್ಣ ಕಥೆ, ಕಾದಂಬರಿ, ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಅನುದಾನ ಸೇರಿ ಕನ್ನಡ ಸಾಹಿತ್ಯದ ಪ್ರತಿಯೊಂದು ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಮಾಸ್ತಿ ವೆಂಕಟೇಶ ಅಯ್ಯಂಗಾರ್. 1983ರಲ್ಲಿ ಚಿಕವೀರ ರಾಜೇಂದ್ರ ಎಂಬ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಕರ್ನಾಟಕಕ್ಕೆ ನಾಲ್ಕನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಾಸ್ತಿ ವೆಂಕಟೇಶರವರು 1986 ಜೂನ್ 6ಕ್ಕೆ ಮರಣ ಹೊಂದುತ್ತಾರೆ.

5. ವಿನಾಯಕ ಕೃಷ್ಣ ಗೋಕಕ್ ಕನ್ನಡಕ್ಕೆ ಐದನೇ ಜ್ಞಾನಪೀಠ ಪೀಠ ಪ್ರಶಸ್ತಿ ತಂದು ಕೊಟ್ಟ ಗೌರವ ವಿನಾಯಕ ಕೃಷ್ಣ ಗೋಕಾಕ್ ಅವರಿಗೆ ಸಲ್ಲುತ್ತದೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸಮಾನವಾದ ಜ್ಞಾನ ಹೊಂದಿದ್ದ ಗೋಕಾಕ್ಗೆ 1991ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಕನ್ನಡದ ಪ್ರತಿಭಾವಂತ ಕವಿಯಾಗಿರುವ ವಿನಾಯಕ ಕೃಷ್ಣ ಗೋಕಾಕ್ ಹುಟ್ಟಿದ್ದು 1909 ಆಗಸ್ಟ್ 9 ಹಾವೇರಿ ಜಿಲ್ಲೆಯ ಸವಣೂರಿನಲ್ಲಿ. ಇವರು ವಿದ್ಯಾಭ್ಯಾಸವನ್ನು ಧಾರಾವಾಡದಲ್ಲಿ ಮಾಡಿದರು. ಇಂಗ್ಲೀಷ್ ವಿಷಯದಲ್ಲಿ ಎಂಎ ಮಾಡಿದ ಇವರು ಪುಣೆಯಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಾರೆ. ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಶ್ರೀ ಸತ್ಯಸಾಯಿ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಕುಲಪತಿಯಾಗಿದ್ದರು. ಜಪಾನ್, ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಹೋಗಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇವರು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಕನ್ನಡದ ಹಿರಿಮೆಯನ್ನು ದೇಶದಾದ್ಯಂತ ಎತ್ತಿ ಹಿಡಿದ ಗೋಕಾಕ್ರವರು 1992 ಏಪ್ರಿಲ್ 28ಕ್ಕೆ ನಿಧನರಾಗುತ್ತಾರೆ.

6. ಯು ಆರ್ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಯು ಆರ್ ಅನಂತಮೂರ್ತಿ ಕೂಡಾ ಒಬ್ಬರು. ಇಂಗ್ಲೀಷ್ ಪ್ರಾಧ್ಯಪಕರಾಗಿ ಇವರು ವೃತ್ತಿ ಜೀವನವನ್ನು ಪ್ರಾರಂಭಿಸುತ್ತಾರೆ. ಇವರ ಸಮಗ್ರ ಸಾಹಿತ್ಯಕ್ಕೆ 1994ರಲ್ಲಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆಯುತ್ತಾರೆ. ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿರುವ ಅನಂತಮೂರ್ತಿ 1980ರಲ್ಲಿ ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆಯಲ್ಲಿ ಡಿಸೆಂಬರ್ 21ಕ್ಕೆ ಜನಿಸುತ್ತಾರೆ. ಇವರ ತಂದೆ ಹೆಸರು ಉಡುಪಿ ರಾಜಗೋಪಾಲಾಚಾರ್ಯ. ತಾಯಿ ಹೆಸರು ಸತ್ಯಮ್ಮ. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ವಿಷಯದಲ್ಲಿ ಎಂಎ ಪದವಿ ಪಡೆಯುತ್ತಾರೆ. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಹೋಗುತ್ತಾರೆ. ಅನಂತಮೂರ್ತಿ ಹಲವಾರು ಸೆಮಿನಾರ್ಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ.

7. ಗಿರೀಶ್ ಕಾರ್ನಾಡ್ ಗಿರೀಶ್ ಕಾರ್ನಾಡ್ ಭಾರತದ ನಾಟಕಗಾರ, ಲೇಖಕರು, ನಿರ್ದೇಶಕ, ಹೋರಾಟಗಾರ, ಸಿನಿಮಾ ನಟ, ಬರಹಗಾರರಾಗಿದ್ದರು. ಮಹಾರಾಷ್ಟ್ರದ ಮಾಥೇರಾನಲ್ಲಿ 1938 ಮೇ 19ರಂದು ಜನಿಸುತ್ತಾರೆ. ಗಿರೀಶ್ ಕಾರ್ನಾಡ್ ಆಕ್ಸ್ಫರ್ಡ್ ಡಿಬೇಟ್ ಕ್ಲಬ್ಗೆ ಅಧ್ಯಕ್ಷರಾಗಿದ್ದರು. ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಕಾರ್ನಾಡ್ರವರು ನೀಡಿದ ಸಮಗ್ರ ಕೊಡುಗೆಗೆ ಕರ್ನಾಟಕಕ್ಕೆ ಏಳನೇ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ವಿದೇಶದಲ್ಲಿದ್ದಾಗಲೆ ಕಾರ್ನಾಡ್ರವರು ಕನ್ನಡ ನಾಟಕಗಳನ್ನು ಬರೆದಿದ್ದಾರೆ. ಕನ್ನಡ, ಹಿಂದೆ, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಲ್ಲಿ ನಟಿಸಿದ್ದಾರೆ. 2019 ಜೂನ್ 10ಕ್ಕೆ ಬೆಂಗಳೂರಿನಲ್ಲಿ ಮರಣ ಹೊಂದುತ್ತಾರೆ.

8. ಚಂದ್ರಶೇಖರ ಕಂಬಾರ ಪ್ರಸಿದ್ಧ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಗಾರರಾಗಿರುವ ಡಾ.ಚಂದ್ರಶೇಖರ ಕಂಬಾರ ಜನಿಸಿದ್ದು 1937 ಜನವರಿ 2, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ. ಕಂಬಾರರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೊದಲು ಕುಲಪತಿಯಾಗಿ, ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಆಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಜೊತೆಗೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಗೌರವ ಚಂದ್ರಶೇಖರ ಕಂಬಾರರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯಕ್ಕೆ ಕಂಬಾರ ಕೊಡುಗೆಯನ್ನು ಆಧರಿಸಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಹೊರ ರಾಷ್ಟ್ರಗಳಲ್ಲಿ ಜಾನಪದ ಮತ್ತು ರಂಗಭೂಮಿ ಕುರಿತು ಉಪನ್ಯಾಸಗಳನ್ನು ಕಂಬಾರರು ನೀಡಿದ್ದಾರೆ.

ಇದನ್ನೂ ಓದಿ

ಕನ್ನಡ ರಾಜ್ಯೋತ್ಸವ 2021: ಪ್ರತಿ ಬಾರಿ ಕೇಳುವಾಗಲೂ ಕನ್ನಡಿಗರಿಗೆ ರೋಮಾಂಚನ ನೀಡುವ ಅದ್ಭುತ ಚಿತ್ರಗೀತೆಗಳಿವು

ಹೆಚ್ಚುತ್ತಿದೆ ಪರಭಾಷಿಕರ ಹಾವಳಿ; ಕನ್ನಡಿಗರನ್ನಾಳಬೇಕೆಂಬ ಅಪಾಯಕಾರಿ ಧೋರಣೆ ಮೊಳಕೆಯೊಡೆಯುತ್ತಿದೆ’

Published On - 7:25 am, Tue, 2 November 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ