ಬೆಂಗಳೂರು, ಜೂನ್.13: ಬಿಬಿಎಂಪಿ ಐದು ಭಾಗಗಳಾಗಿ ವಿಂಗಡಣೆ ಮಾಡಲು ಕಾಂಗ್ರೆಸ್ ಪಕ್ಷ (Congress) ತುದಿ ಗಾಲಲ್ಲಿ ನಿಂತಿದೆ. ಕಳೆದ ಮೂರುವರೆ ವರ್ಷದಿಂದ ಪಾಲಿಕೆಗೆ ಚುನಾವಣೆ ಮಾಡದೆ ಕಾಲಾಹರಣ ಮಾಡುತ್ತಿದ ರಾಜ್ಯ ಸರ್ಕಾರ ಈಗ ಬಿಬಿಎಂಪಿ (BBMP) ಇಬ್ಭಾಗಕ್ಕೆ ಮುಹೂರ್ತ ಪಿಕ್ಸ್ ಮಾಡೋದಕ್ಕೆ ಹೋರಟಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಬಿಬಿಎಂಪಿ ವಿಭಜನೆ ಮಾತು ಕೇಳಿ ಬರ್ತಿದೆ. 5 ಭಾಗ ಮಾಡುದ್ರೆ ನಗರದ ಅಭಿವೃದ್ಧಿಗೆ ಸಹಾಯವಾಗುತ್ತೆ. ಐದು ಕಡೆ ಮೇಯರ್ ನಮ್ಮ ಪಕ್ಷದವರನ್ನ ಆಯ್ಕೆ ಮಾಡಬಹುದು ಎಂದು ಬೆಂಗಳೂರಿನ ಕಾಂಗ್ರೆಸ್ ಶಾಸಕರು ಮೊನ್ನೆ ನಡೆದ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.
ಸದ್ಯ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಗೆಲ್ಲದ್ದಿದರೂ ಮತಗಳಿಕೆಯಲ್ಲಿ ಶೇಕಡಾ ವಾರು ಹೆಚ್ಚಾಗಿದೆ. ಗ್ಯಾರಂಟಿ ಯೋಜನೆ ಸ್ವಲ್ಪ ಮಟ್ಟಿಗೆ ಕೈ ಹಿಡಿಯಬಹುದು ಅಂತ ಸಲಹೆ ನೀಡಿದ್ದಾರೆ. ಇನ್ನೂ ಬಿಬಿಎಂಪಿ ವಿಭಜನೆಗೆ ಸಮಿತಿ ರಚನೆ ಮಾಡಿದ್ದು, ಸಮಿತಿಯ ಅಧ್ಯಕ್ಷ ಬಿ.ಎಸ್. ಪಾಟೀಲ್ ಕೂಡ ಆಡಳಿತ ದೃಷ್ಟಿಯಿಂದ ಪಾಲಿಕೆ ವಿಭಜನೆ ಮಾಡೋದು ಸರಿ ಅಂತ ಸಭೆಯಲ್ಲಿ ತಿಳಿಸಿದ್ದಾರೆ. ಇನ್ನೂ ಬಿಬಿಎಂಪಿ ವಿಭಜನೆ ಹಾಗೂ ಚುನಾವಣೆ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಮೂರ್ನಾಲ್ಕು ತಿಂಗಳಲ್ಲಿ ಚುನಾವಣೆ ನಡೆಸಲು ಚರ್ಚೆ ಮಾಡಲಾಗಿದೆ. ಮಳೆಗಾಲ ಬಳಿಕ 225 ವಾರ್ಡ್ ಗಳ ಚುನಾವಣೆಯನ್ನ ನಡೆಸಲು ಕೋರ್ಟ್ ಸೂಚನೆ ನೀಡಿದೆ. ಕಾನೂನು ತೊಡಕು ಮೀಸಲಾತಿ ತೊಡಕು ಬಗೆಹರಿಸಿ ಚುನಾವಣೆ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಎಚ್ಐವಿ ಪ್ರಮಾಣ ಏರಿಕೆ; ಯುವಕರೇ ಹೆಚ್ಚಾಗಿ ಏಡ್ಸ್ ರೋಗಕ್ಕೆ ತುತ್ತು
ಬಿಬಿಎಂಪಿ ಐದು ಭಾಗ ಹೇಗೆ? ಮಾನದಂಡ ಏನು ಎಂಬ ಬಗ್ಗೆ ಬಿಎಸ್ ಪಾಟೀಲ್ ನೇತೃತ್ವದ ಸಮಿತಿ ಮಾಡಿರುವ ಶಿಫಾರಸ್ಸುಗಳ ವಿವರ ಹೀಗಿದೆ.
ಇನ್ನೂ ಪಾಲಿಕೆ 5 ವಿಂಗಡಣೆ ಮಾಡಿ ಚುನಾವಣೆ ಮಾಡುತ್ತಿರೋದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಇನ್ನೂ ಪಾಲಿಕೆ 5 ಭಾಗ ಮಾಡಲು ಪ್ರಸ್ತಾವನೆ ಇಟ್ಟುಕೊಂಡಿದೆ. ಇದು ತುಂಬಾ ಅನ್ಯಾಯ. ಪಾಲಿಕೆಗೆ ಚುನಾಯಿತ ಪ್ರತಿನಿಧಿಗಳು ಇಲ್ಲದೇ ಈ ಆಗಷ್ಟ್ ಬಂದರೆ 5 ವರ್ಷವಾಗುತ್ತೆ. ಅಧಿಕಾರಿಗಳೆ ಕಾರುಬಾರು ಇದ್ದು, ಸರಿಯಾದ ಕಾಮಗಾರಿಗಳಾಗುತ್ತಿಲ್ಲ. ಇತ್ತ ಸರ್ಕಾರಕ್ಕೆ ಚುನಾವಣೆ ಮುಂದೂಡಲು ಆಯುಧ ಬೇಕಿತ್ತು. ಹೀಗಾಗಿ ಪಾಲಿಕೆ 5 ಭಾಗಗಳಾಗಿ ವಿಂಗಡಣೆ ಮಾಡಿ ಕರಡು ಪ್ರತಿ, ತಕಾರರು ಹಾಕಲು ಸಮಯ ಬೇಕಾಗುತ್ತೆ ಅಂತ ಪಾಲಿಕೆ ವಿಭಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರವನ್ನು ಆಡಳಿತ ದೃಷ್ಟಿ ಅನ್ನೋ ಹೆಸರಲ್ಲಿ ವಿಭಜನೆಗೆ ಕೈ ಇಟ್ಟಿರೋದು ಕೈ ಪಕ್ಷಕ್ಕೆ ಭಾರಿ ಹಿನ್ನಡೆ ಆಗುವ ಸಾಧ್ಯತೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ