Covid19: ಕರ್ನಾಟಕ ಸರ್ಕಾರದಿಂದ ಪರಿಷ್ಕೃತ ಕೊರೊನಾ ಮಾರ್ಗಸೂಚಿ ಪ್ರಕಟ; ವಿವರ ಇಲ್ಲಿದೆ

| Updated By: ganapathi bhat

Updated on: Jan 29, 2022 | 5:59 PM

Corona Guidelines: ಸಾರ್ವಜನಿಕ ಸಾರಿಗೆಯಲ್ಲಿ ಸೀಟಿಂಗ್ ಕೆಪ್ಯಾಸಿಟಿ ಮಾತ್ರ ಭರ್ತಿ ಎಂದು ಆದೇಶ ನೀಡಲಾಗಿದೆ. ಹೋಟೆಲ್, ಪಬ್, ಬಾರ್ ಹಾಗೂ ರೆಸ್ಟೋರೆಂಟ್​ಗೆ ಅನುಮತಿ ನೀಡಲಾಗಿದೆ. ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ 50:50 ನಿಯಮ ಜಾರಿಯಲ್ಲಿ ಇರಲಿದೆ.

Covid19: ಕರ್ನಾಟಕ ಸರ್ಕಾರದಿಂದ ಪರಿಷ್ಕೃತ ಕೊರೊನಾ ಮಾರ್ಗಸೂಚಿ ಪ್ರಕಟ; ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದಿಂದ ಪರಿಷ್ಕೃತ ಕೊವಿಡ್19 ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಫೆಬ್ರವರಿ 15ರ ವರೆಗೆ ಜಾರಿಯಲ್ಲಿರುವಂತೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ. ಅದರಂತೆ, ಕರ್ನಾಟಕ ರಾಜ್ಯದಲ್ಲಿ ಜನವರಿ 31 ರಿಂದ ನೈಟ್ ಕರ್ಫ್ಯೂ ರದ್ದು ಮಾಡಲಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿ ಸೀಟಿಂಗ್ ಕೆಪ್ಯಾಸಿಟಿ ಮಾತ್ರ ಭರ್ತಿ ಎಂದು ಆದೇಶ ನೀಡಲಾಗಿದೆ. ಹೋಟೆಲ್, ಪಬ್, ಬಾರ್ ಹಾಗೂ ರೆಸ್ಟೋರೆಂಟ್​ಗೆ ಅನುಮತಿ ನೀಡಲಾಗಿದೆ. ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ 50:50 ನಿಯಮ ಜಾರಿಯಲ್ಲಿ ಇರಲಿದೆ.

ಮದುವೆಗಳಿಗೆ ಒಳಾಂಗಣದಲ್ಲಿ 200 ಜನರಿಗೆ ಅವಕಾಶ, ಮದುವೆಗಳಿಗೆ ಹೊರಾಂಗಣದಲ್ಲಿ 300 ಜನರಿಗೆ ಅವಕಾಶ, ಕಚೇರಿಗಳಲ್ಲಿ ಶೇಕಡಾ 100 ರಷ್ಟು ನೌಕರರಿಗೆ ಅನುಮತಿ ನೀಡಲಾಗಿದೆ. ದೇಗುಲಗಳಲ್ಲಿ ಪೂಜೆ, ಅರ್ಚನೆ, ಸೇವಾ ಕಾರ್ಯಕ್ಕೆ ಅವಕಾಶ ನೀಡಲಾಗಿದೆ. ಆದರೆ, ಶೇಕಡಾ 50ರಷ್ಟು ಭಕ್ತರು ಸೇರಲು ಮಾತ್ರ ಅವಕಾಶ ಕೊಡಲಾಗಿದೆ. ಜಾತ್ರೆ, ಪ್ರತಿಭಟನೆ, ರಾಲಿಗಳಿಗೆ ನಿರ್ಬಂಧ ಮುಂದುವರಿಕೆ ಮಾಡಲಾಗಿದೆ.

ಜಿಮ್, ಈಜುಕೊಳದಲ್ಲಿ ಶೇಕಡಾ 50ರಷ್ಟು ಜನರಿಗೆ ಅವಕಾಶ. ಸ್ಪೋರ್ಟ್ಸ್ ಕಾಂಪ್ಲೆಕ್ಸ್​ಗಳಲ್ಲಿ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಗಡಿ ಪ್ರವೇಶಕ್ಕೆ RTPCR ಟೆಸ್ಟ್​ ನೆಗೆಟಿವ್ ವರದಿ ಕಡ್ಡಾಯ ಎಂದು ಹೇಳಲಾಗಿದೆ. ಬೆಂಗಳೂರಲ್ಲಿ ಸೋಮವಾರದಿಂದ ಎಲ್ಲಾ ತರಗತಿ ಪುನಾರಂಭ ಆಗಲಿದೆ. ಕೊವಿಡ್​ ನಿಯಮ ಪಾಲಿಸಿ ಶಾಲೆಗಳ ಪುನಾರಂಭಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶೇ. 100ರಷ್ಟು ಮಕ್ಕಳು ಶಾಲೆಗೆ ಹಾಜರಾಗಲು ಅನುಮತಿ ನೀಡಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಜನವರಿ 31ರಿಂದ ನೈಟ್ ಕರ್ಫ್ಯೂ ರದ್ದಾಗಲಿದೆ ಎಂದು ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್​ ಹೇಳಿಕೆ ನೀಡಿದ್ದರು. ಸಾರ್ವಜನಿಕ ಸಾರಿಗೆಯಲ್ಲಿ ಸೀಟಿಂಗ್ ಕೆಪ್ಯಾಸಿಟಿ ಮಾತ್ರ ಭರ್ತಿ ಮಾಡಬೇಕು. ಹೋಟೆಲ್, ಪಬ್, ಬಾರ್ & ರೆಸ್ಟೋರೆಂಟ್​ಗೆ ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ ಕೊರೊನಾ ಪ್ರಮಾಣ ಇಳಿಕೆ ಹಿನ್ನೆಲೆಯಲ್ಲಿ ರಿಲೀಫ್​ ನೀಡಲಾಗಿದೆ. ತಜ್ಞರು ನೀಡಿದ ವರದಿ ಆಧಾರದಲ್ಲಿ ಸರ್ಕಾರದಿಂದ ರಿಲೀಫ್​ ಕೊಡಲಾಗಿದೆ ಎಂದು ಆರ್. ಅಶೋಕ್​ ಹೇಳಿದ್ದರು.

ಇದನ್ನೂ ಓದಿ: NeoCoV: ನಿಯೋ ಕೊವ್​ ಬಗ್ಗೆ ಹೆದರುವ ಅಗತ್ಯ ಇಲ್ಲವೇ ಇಲ್ಲ, ಇದು ಕೊರೊನಾದ ರೂಪಾಂತರಿ ಅಲ್ಲ; ಅಧ್ಯಯನ ತಿಳಿಸಿದೆ ಒಂದು ಗುಡ್​ ನ್ಯೂಸ್ !

ಇದನ್ನೂ ಓದಿ: ಕೊವಿಡ್19 ಸೆಲ್ಫ್ ಟೆಸ್ಟ್ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ಬಿಡುಗಡೆ; ವಿವರ ಓದಿರಿ