AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Drug Case: ಸೆಲೆಬ್ರಿಟಿಗಳು, ಉದ್ಯಮಿಗಳಿಗೆ ಡ್ರಗ್ಸ್​ ಪೂರೈಕೆ; ಬೆಂಗಳೂರಲ್ಲಿ 3 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ

ಕರ್ನಾಟಕದಲ್ಲಿ ಮೊದಲ ಬಾರಿಗೆ ಬ್ಲಾಕ್ ಎಂಡಿಎಂಎ ಡ್ರಗ್ ಪತ್ತೆಯಾಗಿದೆ. ವಿದೇಶಗಳಲ್ಲಿ ಕಂಡುಬರುತ್ತಿದ್ದ ಬ್ಲಾಕ್ ಎಂಡಿಎಂಎ ಸಿಲಿಕಾನ್ ಸಿಟಿಗೂ ಎಂಟ್ರಿ ಕೊಟ್ಟಿದೆ.

Bengaluru Drug Case: ಸೆಲೆಬ್ರಿಟಿಗಳು, ಉದ್ಯಮಿಗಳಿಗೆ ಡ್ರಗ್ಸ್​ ಪೂರೈಕೆ; ಬೆಂಗಳೂರಲ್ಲಿ 3 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ
ಬೆಂಗಳೂರಿನಲ್ಲಿ ಸೀಜ್ ಮಾಡಲಾದ ಡ್ರಗ್ಸ್
TV9 Web
| Updated By: ಸುಷ್ಮಾ ಚಕ್ರೆ|

Updated on: Jan 29, 2022 | 5:02 PM

Share

ಬೆಂಗಳೂರು: ಸೆಲೆಬ್ರೆಟಿಗಳಿಗೂ ಮಾದಕ ಲೋಕಕ್ಕೂ ಇರುವ ನಂಟು ಇಂದು ನಿನ್ನೆಯದಲ್ಲ. ಸೆಲೆಬ್ರೆಟಿಗಳಿಗೆ ಮಾದಕ ವಸ್ತು (Drugs) ಮಾರಾಟ ಮಾಡುತ್ತಿದ್ದ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿಗರಿಂದ 3 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸಿಕ್ಸ್ಟಸ್ ಹುಚಿಕ್, ಹೆನ್ರಿ ಬಂಧಿತ ಆರೋಪಿಗಳಳಾಗಿದ್ದಾರೆ. ಸೆಲೆಬ್ರಿಟಿಗಳು, ಕಾಲೇಜು ವಿದ್ಯಾರ್ಥಿಗಳು, ಉದ್ಯಮಿಗಳಿಗೆ ಇವರು ಡ್ರಗ್ಸ್​ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಗೋವಿಂದಪುರ ಪೊಲೀಸರಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 1.5 ಕೆಜಿ ಎಂಡಿಎಂಎ ಕ್ರಿಸ್ಟಲ್, 120 ಗ್ರಾಂ ಕಪ್ಪು ಎಂಡಿಎಂಎ, 16.5 ಕೆಜಿ 2 ಪ್ಲಾಸ್ಟಿಕ್ ಕ್ಯಾನ್​ಗಳಲ್ಲಿ ವಾಟರ್ ಮಿಕ್ಸ್ ಎಂಡಿಎಂಎ, 300 ಗ್ರಾಂ ವೀಡ್ ಆಯಿಲ್ ಹಾಗೂ ಒಂದು ಕಾರ್ ವಶಕ್ಕೆ ಪಡೆಯಲಾಗಿದೆ. ಗೋವಿಂದ ಪುರ ಪೊಲೀಸರ ಕಾರ್ಯಾಚರಣೆಯಿಂದ 3 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶವಾಗಿದೆ. ಈ ಹಿನ್ನಲೆಯಲ್ಲಿ ಉತ್ತಮ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಂದ 70 ಸಾವಿರ ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ಕರ್ನಾಟಕದಲ್ಲಿ ಮೊದಲ ಬಾರಿಗೆ ಬ್ಲಾಕ್ ಎಂಡಿಎಂಎ ಡ್ರಗ್ ಪತ್ತೆಯಾಗಿದೆ. ವಿದೇಶಗಳಲ್ಲಿ ಕಂಡುಬರುತ್ತಿದ್ದ ಬ್ಲಾಕ್ ಎಂಡಿಎಂಎ ಸಿಲಿಕಾನ್ ಸಿಟಿಗೂ ಎಂಟ್ರಿ ಕೊಟ್ಟಿದೆ. ವಿಶ್ವದಲ್ಲೇ ಟಾಪ್ ಎಂಡ್ ಡ್ರಗ್ ಗಳಲ್ಲಿ ಬ್ಲಾಕ್ ಎಂಡಿಎಂಎಗೆ ಅಗ್ರಸ್ಥಾನವಿದೆ. ಹೈ ಎಂಡ್ ಪಾರ್ಟಿಗಳು ಮತ್ತು ಸೆಲೆಬ್ರಿಟಿಗಳಿಗೆ ಸಪ್ಲೈ ಆಗ್ತಿದ್ದ ಡ್ರಗ್ ಸೀಜ್ ಮಾಡಲಾಗಿದೆ.

ನೈಜೀರಿಯಾ ಮೂಲದ ಸಿಕ್ಟಸ್ ಹುಚಿಕ್ (30) ಹಾಗೂ ಚುಕುಬೆಮ್ ಹೆನ್ರಿ (34) ಬಂಧಿತ ಆರೋಪಿಗಳಾಗಿದ್ದಾರೆ. ಬೆಂಗಳೂರಿನ  ಹೊರಮಾವಿನಲ್ಲಿರುವ ನ್ಯೂ ರಾಜಣ್ಣ ಬಡಾವಣೆಯಲ್ಲಿ ವಾಸಿಸುತ್ತಿದ್ದ ಆರೋಪಿಗಳು ಎಚ್‍ಬಿಆರ್ ಬಡಾವಣೆ 5ನೇ ಹಂತದಲ್ಲಿರುವ ಅಂಬೇಡ್ಕರ್ ಮೈದಾನದ ಬಳಿ ಸೆಲಿಬ್ರಿಟಿಗಳು, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉದ್ಯಮಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗೋವಿಂದಪುರ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಡ್ರಗ್ಸ್​ ಸ್ಮಗ್ಲಿಂಗ್​ ಮಾರ್ಗದಲ್ಲೇ ಸ್ಫೋಟಕಗಳ ಸಾಗಣೆ; ಪಾಕ್​​ ಉಗ್ರರ ಕುತಂತ್ರದ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

17 ಬಾಲಕಿಯರಿಗೆ ಮಾದಕ ದ್ರವ್ಯ ಕೊಟ್ಟು ಕಿರುಕುಳ; ಮಾಡಿದ್ದ ಕಿಚಡಿ ಎಸೆದ ಶಾಲಾ ವ್ಯವಸ್ಥಾಪಕರು, ತನಿಖೆಗೆ ಆದೇಶಿಸಿದ ಬಿಜೆಪಿ ಶಾಸಕ