ಸಿದ್ದರಾಮಯ್ಯಗೆ ಎಲ್ಲದಕ್ಕೂ ರಿಯಾಕ್ಷನ್ ಕೊಡಬೇಕೆಂಬ ಚಟ ಇದೆ; ಅವರು ಎಲ್ಲವನ್ನೂ ಕಾಮಾಲೆ ಕಣ್ಣಿಂದ ನೋಡ್ತಾರೆ: ಆರ್ ಅಶೋಕ್

ಸಿದ್ದರಾಮಯ್ಯಗೆ ಎಲ್ಲದಕ್ಕೂ ರಿಯಾಕ್ಷನ್ ಕೊಡಬೇಕೆಂಬ ಚಟ ಇದೆ; ಅವರು ಎಲ್ಲವನ್ನೂ ಕಾಮಾಲೆ ಕಣ್ಣಿಂದ ನೋಡ್ತಾರೆ: ಆರ್ ಅಶೋಕ್
ಸಚಿವ ಆರ್ ಅಶೋಕ್

ಸಿದ್ದರಾಮಯ್ಯ, ಕಾಂಗ್ರೆಸ್‌ನ್ನು ಜನ ತಿರಸ್ಕರಿಸಿದ್ರು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿಕೆಶಿ ಶೋ ನಡೆಯುತ್ತಿದೆ‌. ಹೋಟೆಲ್‌ ಮುಂದೆ ಟುಡೇ ಸ್ಪೆಷಲ್‌ ಬೋರ್ಡ್‌ ಇರುತ್ತೆ. ಹಾಗೆಯೇ ಇಬ್ಬರ ನಡುವೆ ಟು ಡೇ ಸ್ಪೆಷಲ್‌ ನಡೆಯುತ್ತಿದೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಅಶೋಕ್‌ ಹೇಳಿದ್ದಾರೆ.

TV9kannada Web Team

| Edited By: ganapathi bhat

Jan 29, 2022 | 3:07 PM

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಒಂದು ಚಟ ಇದೆ. ಎಲ್ಲದಕ್ಕೂ ಒಂದು ರಿಯಾಕ್ಷನ್ ಕೊಡಬೇಕೆಂಬ ಚಟ ಇದೆ. ಸರ್ಕಾರ ಏನೂ ಸಾಧನೆ ಮಾಡಿಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯಗೆ ನಾನು ಮಾಡಿದ್ದೇ ಸರಿ ಎಂಬ ಭಾವನೆ. ಹೆಚ್ಚು ಬಜೆಟ್ ಮಂಡನೆ ಮಾಡಿದ್ದೇನೆಂಬ ಅಹಂ ಇದೆ. ಅವರು ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡ್ತಾರೆ‌ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್‌ ಶನಿವಾರ ಹೇಳಿಕೆ ನೀಡಿದ್ದಾರೆ.

ಸಿಕ್ಕ ಆರೇ ತಿಂಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡಿದ್ದಾರೆ‌. ಸಿದ್ದರಾಮಯ್ಯ ಐದು ವರ್ಷ ಆಡಳಿತ ನಡೆಸಿದ್ರೂ ಏನು ಕೆಲಸ ಮಾಡಿಲ್ಲ. ಹೀಗಾಗಿ ಸಿದ್ದರಾಮಯ್ಯ, ಕಾಂಗ್ರೆಸ್‌ನ್ನು ಜನ ತಿರಸ್ಕರಿಸಿದ್ರು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿಕೆಶಿ ಶೋ ನಡೆಯುತ್ತಿದೆ‌. ಹೋಟೆಲ್‌ ಮುಂದೆ ಟುಡೇ ಸ್ಪೆಷಲ್‌ ಬೋರ್ಡ್‌ ಇರುತ್ತೆ. ಹಾಗೆಯೇ ಇಬ್ಬರ ನಡುವೆ ಟು ಡೇ ಸ್ಪೆಷಲ್‌ ನಡೆಯುತ್ತಿದೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಅಶೋಕ್‌ ಹೇಳಿದ್ದಾರೆ.

ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಕೆಲಸ ಮಾಡಿಲ್ಲ. ಆದ್ದರಿಂದ 78 ಸ್ಥಾನಕ್ಕೆ ಬಂದ್ರು. ಹದಿನೇಳು ಜನ ಕಾಂಗ್ರೆಸ್ ಬಿಟ್ಟು ಬಂದ್ರು. ಕಾಂಗ್ರೆಸ್ ಇದರ ಬಗ್ಗೆ ಸತ್ಯ ಶೋಧನ ಸಮಿತಿ ಮಾಡಬೇಕಿತ್ತು. ಸಮಿತಿ ಮಾಡಿ ಯಾಕೆ ಬಿಟ್ಟು ಬಂದ್ರು ಎಂದು ತಿಳಿಯಬೇಕಿತ್ತು. ಮೊನ್ನೆ ಇಬ್ರಾಹಿಂ ಅವರು ಕಾಂಗ್ರೆಸ್ ಗುಡ್ ಬೈ ಮಾಡಿದ್ರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರು ಮಾಧ್ಯಮದ ಮುಂದೆ ಬಂದು ಮಾತನಾಡಲು ಕಾಂಪಿಟೇಶನ್ ನಡೆಸ್ತಿದ್ದಾರೆ. ಶಿವಕುಮಾರ್ ಪಾದಯಾತ್ರೆ ಮಾಡ್ತಿದ್ರೆ ಇತ್ತ ಸಿದ್ದರಾಮಯ್ಯನವರು ಶಾಸಕರನ್ನ ಗುಂಪುಕಟ್ಟಿಕೊಂಡು ಸಭೆ ನಡೆಸ್ತಾರೆ. ಇಬ್ಬರು ಪ್ರಚಾರವನ್ನ ಕಾಂಪಿಟೇಶನ್ ನಲ್ಲಿ ಮಾಡ್ತಿದ್ದಾರೆ ಎಂದು ಅಶೋಕ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಹೈಕಮಾಂಡ್ ವಿರುದ್ಧ ಸಿದ್ದರಾಮಯ್ಯ ಭಾರಿ ಅಪ್ ಸೆಟ್: ಕೊನೆಗೆ ಜಮೀರ್ ಅಹ್ಮದ್​ರನ್ನ ತಮ್ಮ ಡೆಪ್ಯುಟಿ ಮಾಡಲು ದುಂಬಾಲು

ಇದನ್ನೂ ಓದಿ: ಹಳೆಯ ಕಾರ್ಯಕ್ರಮಗಳಿಗೆ ಹೆಸರು ಬದಲಾವಣೆ ಮಾಡಿರುವುದೇ ಬಿಜೆಪಿಯವರ ಸಾಧನೆ: ವಿಪಕ್ಷ ನಾಯಕ ಸಿದ್ದರಾಮಯ್ಯ

Follow us on

Related Stories

Most Read Stories

Click on your DTH Provider to Add TV9 Kannada