AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pratap Simha: ಗ್ಯಾಸ್ ಪೈಪ್​ಲೈನ್ ಸಂಪರ್ಕ ಏರ್ಪಟ್ಟರೆ ಜನರಿಗೆ ₹ 400 ಉಳಿತಾಯವಾಗಲಿದೆ: ಸಂಸದ ಪ್ರತಾಪ್ ಸಿಂಹ ಮಾಹಿತಿ

ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಗ್ಯಾಸ್ ಪೈಪ್​ ಲೈನ್ ಪ್ರಯೋಜನಗಳನ್ನು ವಿವರಿಸಿದ್ದಾರೆ. ಅಲ್ಲದೇ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ತಮ್ಮದೇ ಪಕ್ಷದ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Pratap Simha: ಗ್ಯಾಸ್ ಪೈಪ್​ಲೈನ್ ಸಂಪರ್ಕ ಏರ್ಪಟ್ಟರೆ ಜನರಿಗೆ ₹ 400 ಉಳಿತಾಯವಾಗಲಿದೆ: ಸಂಸದ ಪ್ರತಾಪ್ ಸಿಂಹ ಮಾಹಿತಿ
ಸಂಸದ ಪ್ರತಾಪ್ ಸಿಂಹ
TV9 Web
| Edited By: |

Updated on:Jan 29, 2022 | 1:03 PM

Share

ಮೈಸೂರು: ಗ್ಯಾಸ್ ಪೈಪ್​ಲೈನ್ (Gas Pipeline) ಬಂದರೆ ಜನರಿಗೆ 400 ರೂ ಉಳಿತಾಯವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ. ಪೈಪ್ ಮೂಲಕ ನೇರ ಗ್ಯಾಸ್ ಸಂಪರ್ಕ ಯೋಜನೆಯ ಉದ್ದೇಶ, ಪ್ರಯೋಜನಗಳ ಬಗ್ಗೆ ಮೈಸೂರಿನಲ್ಲಿ ಮಾತನಾಡಿ, ಮಾಹಿತಿ ನೀಡಿದರು. ಗ್ಯಾಸ್ ಪೈಪ್‌ಲೈನ್ ಅತ್ಯಂತ ಮಹತ್ವದ್ದು ಎಂದು ತಿಳಿಸಿರುವ ಅವರು, ಅಡುಗೆ ಸಿಲಿಂಡರ್ ಬೆಲೆ ಈಗ 904 ರೂಪಾಯಿ ಇದೆ. ಸಿಲಿಂಡರ್ ಮನೆಗೆ ಸಾಗಿಸಲು ಪ್ರತ್ಯೇಕ ಬೆಲೆ ಇರುತ್ತದೆ. ಗ್ಯಾಸ್ ಸ್ಫೋಟದ ಪ್ರಕರಣ ಆಗಾಗ ನಡೆಯುತ್ತಿರುತ್ತದೆ. ಇದನ್ನು ತಪ್ಪಿಸಲು ಪೈಪ್ ಮೂಲಕ ಗ್ಯಾಸ್ ಸಂಪರ್ಕ ಮಾಡಲಾಗುತ್ತದೆ. ನ್ಯಾಚುರಲ್ ಗ್ಯಾಸ್ (ಎಲ್​ಎನ್​ಜಿ) ಎಲ್​ಪಿಜಿಗಿಂತ ಕಡಿಮೆ ಅಪಾಯಕಾರಿ. ಹಾಗೆಯೇ ನೇರ ಗ್ಯಾಸ್ ಸಂಪರ್ಕದಿಂದ ಕಡಿಮೆ ಬೆಲೆಗೆ ದೊರೆಯುತ್ತದೆ. ಅರ್ಥಾತ್ ಎಲ್​ಪಿಜಿ ಸಿಲಿಂಡರ್​​ ಪ್ರಮಾಣವನ್ನು ತೆಗೆದುಕೊಂಡರೆ- ಎಲ್​ಎನ್​ಜಿ ಸುಮಾರು ₹ 500ರಿಂದ ₹ 550ರ ಒಳಗೆ ದೊರೆಯಲಿದೆ. ಇದರಿಂದ 400 ರೂಗಳಷ್ಟು ಉಳಿತಾಯವಾಗಲಿದೆ ಎಂದಿದ್ದಾರೆ. ಗುಜರಾತ್‌ನಲ್ಲಿ ಈ ಯೋಜನೆ ಮೊದಲು ಆರಂಭಿಸಲಾಗಿತ್ತು ಎಂದಿರುವ ಪ್ರತಾಪ್ ಸಿಂಹ, ಈಗ ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಹಾಸನ, ತುಮಕೂರು, ಶಿವಮೊಗ್ಗ, ಧಾರವಾಡ, ಹುಬ್ಬಳ್ಳಿ , ಚಿತ್ರದುರ್ಗ, ಕಲಬುರಗಿ ಸೇರಿ ಹಲವು ಜಿಲ್ಲೆಗಳಲ್ಲಿ ಜಾರಿ ಮಾಡಲು ತಿಳಿಸಲಾಗಿದೆ ಎಂದು ನುಡಿದಿದ್ದಾರೆ.

ಗ್ಯಾಸ್ ಪೈಪ್​ಲೈನ್​ಗೆ ವಿರೋಧ ವ್ಯಕ್ತಪಡಿಸಿದ ಶಾಸಕರ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ:

ಮನೆಗಳಿಗೆ ಪೈಪ್ ಮೂಲಕ ನೇರ ಗ್ಯಾಸ್ ಸಂಪರ್ಕಕ್ಕೆ ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್‌ ಆಕ್ಷೇಪ‌ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಗ್ಯಾಸ್​ಪೈಪ್ ಅಳವಡಿಸುವವರೇ ರಸ್ತೆಯನ್ನ ಸರಿ ಮಾಡುತ್ತಾರೆ. ಪೈಪ್​ಲೈನ್​ಗೆ ಬಳಸಿದ ಜಾಗಕ್ಕೆ ಪಾಲಿಕೆಗೆ ಹಣ ಕೊಡುತ್ತೇವೆ. ಲೈನ್​ಗೆ ತೆಗೆದ ಹಳ್ಳವನ್ನು 24 ಗಂಟೆಯೊಳಗೆ ಮುಚ್ಚಬೇಕು ಎಂದಿದ್ದಾರೆ.

ಅಲ್ಲದೇ ವಿರೋಧ ವ್ಯಕ್ತಪಡಿಸಿದ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, ಮೊಬೈಲ್ ಕಂಪನಿಗಳು ರಸ್ತೆಯನ್ನು ಅಗೆದಾಗ ಸುಮ್ಮನಿದ್ದರು. ಖಾಸಗಿ ಕಂಪನಿಯ ಕೇಬಲ್ ಅಳವಡಿಕೆಯ ಸಮಯದಲ್ಲಿ ಏಕೆ ಯಾರೂ ಕೇಳಲಿಲ್ಲ? ಖಾಸಗಿ ಕಂಪನಿಯವರು ನಿಮ್ಮ ಜತೆ ಮಾತನಾಡಿದ್ದಾರಾ? ಎಂದು ತಮ್ಮದೇ ಪಕ್ಷದ ಶಾಸಕರ ವಿರುದ್ಧವೇ ಸಂಸದ ಪ್ರತಾಪ್​ಸಿಂಹ ಕಿಡಿಕಾಡಿದ್ದಾರೆ.

ಶಾಸಕ ನಾಗೇಂದ್ರ ಅವರ ಹೇಳಿಕೆಗೆ ತಿರುಗೇಟು:

ಶಾಸಕ ನಾಗೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಪ್ರತಾಪ್ ಸಿಂಹ, ರಾಜಕಾರಣಕ್ಕೆ ಯಾರು ಬೇಕಾದರೂ ಬರಬಹುದು. ಆದರೆ ಅವರ ಕೆಲಸ ನೋಡಿ ಜನರು ನಿರ್ಧರಿಸುತ್ತಾರೆ ಎಂದಿದ್ದಾರೆ. ಶಾಸಕ ಎಲ್.ನಾಗೇಂದ್ರ ಅವರು ಆಡಿ ಬೆಳೆದ ಜಾಗದಲ್ಲೇ ಲೀಡ್ ಪಡೆದಿಲ್ಲ. ಇನ್ನು ಅವರು ನನಗೆ ಲೀಡ್ ಕೊಡ್ಸಿದ್ದಾರಾ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ ಅತಿ ಹೆಚ್ಚು ಮತಗಳ ಅಂತರದಿಂದ ನಾನು ಗೆದ್ದಿದ್ದೇನೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ನನ್ನ ಗೆಲವಿಗೆ ಬಿಜೆಪಿ ಕಾರ್ಯಕರ್ತರು ಶ್ರಮಿಸಿದ್ದಾರೆ. ಪಾಲಿಕೆಯ ಮಾಜಿ, ಹಾಲಿ ಸದಸ್ಯರು ಶ್ರಮಿಸಿದ್ದಾರೆ. ನಾಗೇಂದ್ರ ಅವರಿಗೆ ಹುಟ್ಟೂರು ಕೆಜಿ ಕೊಪ್ಪಲಿನಲ್ಲೇ ಲೀಡ್ ಬರಲಿಲ್ಲ. ಅವರ ಮನೆಯ ಪಾಲಿಕೆ ಸದಸ್ಯರೇ ಬೇರೆ ಪಕ್ಷದವರಾಗಿದ್ದಾರೆ. ನಿಮಗೆ ನೀವೇ ಅಭಿವೃದ್ಧಿ ಹರಿಕಾರ ಎಂದುಕೊಳ್ಳಬೇಡಿ. ಅಭಿವೃದ್ಧಿ ಬಗ್ಗೆ ನನಗೆ ಪಾಠ ಹೇಳಬೇಡಿ ಎಂದು ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಾಪ್ ಸಿಂಹ ಅವರ ಸುದ್ದಿಗೋಷ್ಠಿ ಇಲ್ಲಿದೆ:

ಇದನ್ನೂ ಓದಿ:

Gas Pipeline: ಮೈಸೂರಲ್ಲಿ ರಾಮದಾಸ್ ವರ್ಸಸ್ ಪ್ರತಾಪ್ ಸಿಂಹ: ಗ್ಯಾಸ್ ಸಂಪರ್ಕ ವಿಚಾರದಲ್ಲಿ ಹಗ್ಗಜಗ್ಗಾಟ

ಹೈಕಮಾಂಡ್ ವಿರುದ್ಧ ಸಿದ್ದರಾಮಯ್ಯ ಭಾರಿ ಅಪ್ ಸೆಟ್: ಕೊನೆಗೆ ಜಮೀರ್ ಅಹ್ಮದ್​ರನ್ನ ತಮ್ಮ ಡೆಪ್ಯುಟಿ ಮಾಡಲು ದುಂಬಾಲು

Published On - 12:50 pm, Sat, 29 January 22

Follow Us
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!