ಕರ್ನಾಟಕಕ್ಕೆ ಈಗ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಬರುತ್ತಿಲ್ಲ; ಬೆಂಗಳೂರು ಅಪರಾಧ ಪ್ರಕರಣಗಳ ವಿವರ ನೀಡಿದ ಕಮಲ್ ಪಂತ್

ಕರ್ನಾಟಕಕ್ಕೆ ಈಗ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಬರುತ್ತಿಲ್ಲ; ಬೆಂಗಳೂರು ಅಪರಾಧ ಪ್ರಕರಣಗಳ ವಿವರ ನೀಡಿದ ಕಮಲ್ ಪಂತ್
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್

ಬೆಂಗಳೂರಿನಲ್ಲಿ 2021ರಲ್ಲಿ 156 ಕೊಲೆಗಳು ನಡೆದಿದ್ದವು. ಈ ಪೈಕಿ 154 ಕೊಲೆ ಪ್ರಕರಣಗಳನ್ನು ಭೇದಿಸಲಾಗಿದೆ. 165 ಸರಗಳ್ಳತನದಲ್ಲಿ 130 ಸರಗಳ್ಳತನ ಕೇಸ್ ಪತ್ತೆ ಅಗಿವೆ ಎಂದು ಬೆಂಗಳೂರು ನಗರ ಅಪರಾಧ ಪ್ರಕರಣಗಳ ಬಗ್ಗೆ ಕಮಲ್ ಪಂತ್ ವಿವರಣೆ ನೀಡಿದ್ದಾರೆ.

TV9kannada Web Team

| Edited By: ganapathi bhat

Jan 07, 2022 | 2:52 PM

ಬೆಂಗಳೂರು: 2020ರ ನಂತರ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಆರಂಭ ಆಗಿದೆ. ಸೆಲೆಬ್ರಿಟಿಗಳ ಡ್ರಗ್ಸ್ ರಾಕೆಟ್ ಸಂಬಂಧ ಕಾರ್ಯಾಚರಣೆ ನಡೆಯುತ್ತಿದೆ. ಕರ್ನಾಟಕ ರಾಜ್ಯಕ್ಕೆ ಈಗ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಬರುತ್ತಿಲ್ಲ. 2021 ರಲ್ಲಿ 3,700 ಕೆಜಿಯಷ್ಟು ಡ್ರಗ್ಸ್ ಜಪ್ತಿಯಾಗಿದೆ. ವಿವಿಧ ಮಾದರಿಯ ಸಿಂಥೆಟಿಕ್ ಡ್ರಗ್ಸ್ ಸೀಜ್ ಮಾಡಿದ್ದೇವೆ. ಬೆಂಗಳೂರಿನಲ್ಲಿ 56 ಕೋಟಿ ಮೊತ್ತದ ಸಿಂಥೆಟಿಕ್ ಡ್ರಗ್ಸ್ ಸೀಜ್ ಮಾಡಲಾಗಿದೆ. ಡ್ರಗ್ಸ್ ಪ್ರಕರಣಗಳಲ್ಲಿ 177 ವಿದೇಶಿಗರನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಗಾಂಜಾದಿಂದ ಬಡವರು ಹಾಳಾಗುತ್ತಿದ್ದಾರೆ. ಡ್ರಗ್ಸ್‌ನಿಂದ ವಿದ್ಯಾರ್ಥಿಗಳು, ಸ್ಥಿತಿವಂತರು ಹಾಳಾಗ್ತಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ 2021ರಲ್ಲಿ 156 ಕೊಲೆಗಳು ನಡೆದಿದ್ದವು. ಈ ಪೈಕಿ 154 ಕೊಲೆ ಪ್ರಕರಣಗಳನ್ನು ಭೇದಿಸಲಾಗಿದೆ. 165 ಸರಗಳ್ಳತನದಲ್ಲಿ 130 ಸರಗಳ್ಳತನ ಕೇಸ್ ಪತ್ತೆ ಅಗಿವೆ ಎಂದು ಬೆಂಗಳೂರು ನಗರ ಅಪರಾಧ ಪ್ರಕರಣಗಳ ಬಗ್ಗೆ ಕಮಲ್ ಪಂತ್ ವಿವರಣೆ ನೀಡಿದ್ದಾರೆ.

ವೀಕೆಂಡ್ ಕರ್ಫ್ಯೂ ಪಾಲಿಸುವ ಬಗ್ಗೆ ಕಮಲ್ ಪಂತ್ ಎಚ್ಚರಿಕೆ ರಾತ್ರಿ 8 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅನಗತ್ಯವಾಗಿ ಓಡಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ರೀತಿಯ ಪಾಸ್‌ಗಳನ್ನು ವಿತರಣೆ ಮಾಡುವುದಿಲ್ಲ. ಕಂಪನಿ, ಕಚೇರಿಗಳಿಗೆ ಹೋಗುವವರು ಐಡಿ ಕಾರ್ಡ್ ಇಟ್ಟುಕೊಳ್ಳಿ. ಪ್ರಯಾಣಿಕರು ಟಿಕೆಟ್ ತೋರಿಸಿ ಓಡಾಡಬಹುದಾಗಿದೆ ಎಂದು ಕಮಲ್ ಪಂತ್ ಹೇಳಿದ್ದಾರೆ.

ವೀಕೆಂಡ್ ಕರ್ಫ್ಯೂನಲ್ಲಿ ಅನಗತ್ಯವಾಗಿ ಹೊರಬಂದರೆ ಅರೆಸ್ಟ್ ಮಾಡುತ್ತೇವೆ. ಅನಗತ್ಯವಾಗಿ ಹೊರಬಂದವರನ್ನು ಬಂಧಿಸಿ, ಕೇಸ್ ದಾಖಲಿಸ್ತೇವೆ. ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡಬೇಕಾಗಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು. ಕೊವಿಡ್ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುತ್ತಾರೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಜೆ 6 ರಿಂದ ಶನಿವಾರ ಬೆಳಗ್ಗೆ 5 ಗಂಟೆ ವರೆಗೆ ನಿಷೇಧಾಜ್ಞೆ ಜಾರಿ: ಕಮಲ್ ಪಂತ್ ಆದೇಶ

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿ ಅರೆಸ್ಟ್

Follow us on

Related Stories

Most Read Stories

Click on your DTH Provider to Add TV9 Kannada