ಬಿಬಿಎಂಪಿಯ 225 ವಾರ್ಡ್ ನಕ್ಷೆ ಬಿಡುಗಡೆ, ನಿಮ್ಮ ವಾರ್ಡ್ ನಕ್ಷೆ ನೋಡುವುದು ಹೇಗೆ? ಇಲ್ಲಿದೆ ವಿವರ
ಬಿಬಿಎಂಪಿ ಚುನಾವಣೆ ಸಂಬಂಧ ಒಟ್ಟು 225 ವಾರ್ಡ್‌ಗಳನ್ನು ಅಂತಿಮಗೊಳಿಸಿ ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ. ಇದೀಗ ವಾರ್ಡ್ ಪುನರ್ ವಿಂಗಡಣೆಯ ಅಂತಿಮ ಪಟ್ಟಿಯ ನಕ್ಷೆ ಬಿಡುಗಡೆ ಮಾಡಿದೆ. ಪುನರ್ ಪರಿಶೀಲನೆ ಮಾಡಿ ಪಾಲಿಕೆಗೆ ಸಂಬಂಧಿಸಿದಂತೆ 225 ವಾರ್ಡ್‌ಗಳ ನಕ್ಷೆಗಳ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರಿಗರು ತಮ್ಮ ವಾರ್ಡ್‌ಗಳ ನಕ್ಷೆಯನ್ನ ವೀಕ್ಷಿಸಬಹುದು.
ಬೆಂಗಳೂರು, (ಅಕ್ಟೋಬರ್ 01) : ಬಿಬಿಎಂಪಿ ಚುನಾವಣೆ (BBM ELection)ನಡೆಯುವ ಕಾಲ ಸಮೀಪಿಸಿದ್ದು, ಬಿಬಿಎಂಪಿ ವಾರ್ಡ್ (BBMP Wards) ಮರುವಿಂಗಡಣೆಯ ಅಂತಿಮ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಒಟ್ಟು 225 ವಾರ್ಡ್‌ಗಳನ್ನು ಅಂತಿಮಗೊಳಿಸಿ ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ. ಇದೀಗ ವಾರ್ಡ್ ಪುನರ್ ವಿಂಗಡಣೆಯ ಅಂತಿಮ ಪಟ್ಟಿಯ ನಕ್ಷೆ ಬಿಡುಗಡೆ ಮಾಡಿದೆ. ಪುನರ್ ಪರಿಶೀಲನೆ ಮಾಡಿ ಪಾಲಿಕೆಗೆ ಸಂಬಂಧಿಸಿದಂತೆ 225 ವಾರ್ಡ್‌ಗಳ ನಕ್ಷೆಗಳ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರಿಗರು ತಮ್ಮ ವಾರ್ಡ್‌ಗಳ ನಕ್ಷೆಯನ್ನ ವೀಕ್ಷಿಸಬಹುದು. ಹೇಗೆ ಎನ್ನುವುದು ಈ ಕೆಳಗಿನಂತಿದೆ ನೋಡಿ.
ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಪರಿಶೀಲನಾ ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ಸರ್ಕಾರವು ಒಪ್ಪಿಕೊಂಡಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿನಿಯಮ, 2020ರ ಕಲಂ 7ರಲ್ಲಿ ಅಧಿಕಾರವನ್ನು ಚಲಾಯಿಸಿ, 2011ರ ಜನಗಣತಿಯ ಆಧಾರದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡ್‌ವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಮಾಡಲಾಗಿದೆ. ಪುನರ್ ಪರಿಶೀಲನೆ ಮಾಡಿ BBMP 225 ವಾರ್ಡ್‌ಗಳ ನಕ್ಷೆಗಳ ಬಿಡುಗಡೆ ಮಾಡಲಾಗಿದೆ. bbmpdelimitation2023.com/ ವೆಬ್ಸೈಟ್ನಲ್ಲಿ ವಾರ್ಡ್ ಮಾಹಿತಿ ಲಭ್ಯವಿದೆ. ಹಾಗೇ ಈ ವೆಬ್ಸೈಟ್ನಲ್ಲಿ ತಮ್ಮ ವಾರ್ಡ್‌ಗಳ ನಕ್ಷೆಯನ್ನ ಸಾರ್ವಜನಿಕರು ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಅಂತಿಮ ಪಟ್ಟಿ ಪ್ರಕಟ, 225 ವಾರ್ಡಗಳನ್ನು ಅಧಿಕೃತಗೊಳಿಸಿದ ಸರ್ಕಾರ
ಆಗಸ್ಟ್ 18ರಂದು ವಾರ್ಡ್ ಮರುವಿಂಗಡನೆಯ ಕರಡು ಪಟ್ಟಿಯನ್ನು ಪ್ರಕಟಿಸಿದ್ದ ಸರ್ಕಾರ, ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿತ್ತು. ವಾರ್ಡ್‌ಗಳ ಮರು ವಿಂಗಡಣೆ ಸಮಸ್ಯೆ ಇತ್ಯರ್ಥವಾಗಿರುವುದರಿಂದ ಇದೇ ವರ್ಷ ಡಿಸೆಂಬರ್‌ನಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸಲು ಸರ್ಕಾರ ಸಿದ್ಧವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ