9 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದ 9 ಐಪಿಎಸ್ ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ
ಬೆಂಗಳೂರು: ರಾಜ್ಯದ 9 ಐಪಿಎಸ್ ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಧರ್ಮೇಂದ್ರ ಕುಮಾರ್ ಮೀನಾ (ಎಫ್‌ಎಸ್‌ಎಲ್ ನಿರ್ದೇಶಕ), ಪಾಟೀಲ್ ವಿನಾಯಕ ವಸಂತರಾವ್, ಎಸ್.ಸವಿತಾ (ಉತ್ತರ ವಿಭಾಗದ ಟ್ರಾಫಿಕ್ ಡಿಸಿಪಿ), ನಿಕಮ್ ಪ್ರಕಾಶ್ ಅಮೃತ್ (ನಕ್ಸಲ್ ನಿಗ್ರಹ ಪಡೆ ಎಸ್ಪಿ), ಕರುಣಾಕರನ್ (ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ), ಎಂ.ಅಶ್ವಿನಿ (ಎಐಜಿಪಿ ಹೆಡ್ ಕ್ವಾರ್ಟರ್ಸ್), ಡಾ.ಸುಮನ್ ಡಿ ಪೆನ್ನೇಕರ್(ಮಂಡ್ಯ ಎಎಸ್ಪಿ), ಬಿ.ನಿಖಿಲ್(ರಾಯಚೂರು ಎಸ್ಪಿ), ಎಂ.ಎನ್.ದೀಪನ್ (ಕಲಬುರಗಿ ಬಿ ಉಪ ವಿಭಾಗ ಎಸಿಪಿ) ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ದಂಪತಿ ಗಮನ ಸೆಳೆದು ಕಳ್ಳತನ ಬೆಂಗಳೂರು-ತುಮಕೂರು ರಸ್ತೆಯ 8ನೇ ಮೈಲಿ ಸಮೀಪ ಕೆಎಸ್ಆರ್ಟಿಸಿ ಬಸ್ನಲ್ಲಿ ಕಳ್ಳರು ಕೈಚಳಕ ತೋರಿದ್ದು, ದಂಪತಿ ಗಮನ ಬೇರೆಡೆ ₹ 3 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಚಿಲ್ಲರೆ ಕಾಸು ಕೆಳಗೆ ಬೀಳಿಸಿದ ದುಷ್ಕರ್ಮಿಗಳು ದಂಪತಿ ಗಮನ ಸೆಳೆದು ಬ್ಯಾಗ್ ಕಳವು ಮಾಡಿದ್ದಾರೆ. ದಂಪತಿ ತುಮಕೂರಿನಿಂದ ಬೆಂಗಳೂರಿಗೆ ಬರುತ್ತಿದ್ದರು. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಹಿಳೆಯ ಹತ್ಯೆ ಬೆಂಗಳೂರಿನ ಯಾರಬ್ ನಗರದಲ್ಲಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಅಫ್ರೀನ್ ಖಾನಂ (28) ಮೃತರು. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕೊಲೆ ಮಾಡಿ ಮನೆಗೆ ಬೀಗ ಹಾಕಿ ಆರೋಪಿ ಪರಾರಿಯಾಗಿದ್ದಾನೆ. ಪತಿ ಬಂದು ಮನೆ ಬೀಗ ಒಡೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಪರಿಚಿತರಿಂದಲೇ ಅಫ್ರೀನ್ ಖಾನಂ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
Karnataka Govt Transfers 9 IPS Officers
ಇದನ್ನೂ ಓದಿ: ಸಿಂಘು ಗಡಿಯಲ್ಲಿ ಗುಂಪು ಹಲ್ಲೆ: ಪೊಲೀಸರಿಗೆ ಶರಣಾದ ಕೊಲೆ ಆರೋಪಿ ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೋರಾ ಫತೇಹಿ, ಜಾಕ್ವೆಲಿನ್ ಫರ್ನಾಂಡಿಸ್ಗೆ ಸಂಕಷ್ಟ