ಬೆಂಗಳೂರಿನಲ್ಲಿ ಕೋತಿಗಳೇಕೆ ಮನೆಗೆ ಬರುತ್ತಿವೆ? ಅರಣ್ಯ ಇಲಾಖೆಗೆ ಮಹತ್ವದ ಸೂಚನೆ ನೀಡಿದ ಹೈಕೋರ್ಟ್
Monkeys in Bengaluru: ಮಂಗಗಳಿಗೆ ಅರಣ್ಯಗಳಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂದು ಕೋರಿ ವಕೀಲ ರಾಧಾನಂದನ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದ್ದರು.
ಬೆಂಗಳೂರು: ಬೆಂಗಳೂರಿನ ಬಳಿಯೇ ಅರಣ್ಯ ಪ್ರದೇಶವಿದೆ. ಪ್ರಾಣಿಗಳ ವಸತಿಯನ್ನು ಜನ ಅತಿಕ್ರಮಿಸುತ್ತಿದ್ದಾರೆ. ಹೀಗಾಗಿ ಕೋತಿಗಳ ಜನವಸತಿಯನ್ನು ಪ್ರವೇಶಿಸುವುದು ಅಚ್ಚರಿ ಮೂಡಿಸುವುದಿಲ್ಲ ಎಂದಿರುವ ಹೈಕೋರ್ಟ್, ಅರಣ್ಯದಲ್ಲಿ ಕೋತಿಗಳಿಗೆ ಆಹಾರ ಮತ್ತು ನೆಲೆ ಕಲ್ಪಿಸಲು ಯೋಜನೆ ರೂಪಿಸುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದೆ. ಮಂಗಗಳು ಆಹಾರಕ್ಕಾಗಿ ಜನವಸತಿ ಪ್ರವೇಶಿಸುತ್ತಿವೆ. ಹೀಗಾಗಿ ಮಂಗಗಳಿಗೆ ಅರಣ್ಯಗಳಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂದು ಕೋರಿ ವಕೀಲ ರಾಧಾನಂದನ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಒಕಾ, ಅರಣ್ಯ ಇಲಾಖೆಗೆ ಮಹತ್ವದ ಸೂಚನೆ ನೀಡಿದ್ದಾರೆ
ಅರಣ್ಯದಲ್ಲಿ ಮಂಗಗಳಿಗೆ ಆಹಾರ, ನೆಲೆಗೆ ಯೋಜನೆ ರೂಪಿಸುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿ ವಿಚಾರಣೆಯನ್ನು ಜುಲೈ 12ಕ್ಕೆ ಮುಂದೂಡಿದೆ. ಬೆಂಗಳೂರು ಬೆಳೆಯುತ್ತಿರುವ ವೇಗ ಮಂಗಗಳಂತಹ ಜೀವಿಗಳಿಗೆ ಸಹಜವಾಗಿ ತಮ್ಮ ಆವಾಸ ಸ್ಥಾನವನ್ನು ಕಳೆದುಕೊಳ್ಳುವಂತೆ ಮಾಡುತ್ತಿದ್ದು, ಪ್ರತ್ಯೇಕ ವಸತಿ ರೂಪಿಸುವ ಬಗ್ಗೆ ತನ್ನ ನಿಲುವು ತಿಳಿಸಲು ಹೈಕೋರ್ಟ್ ಅರಣ್ಯ ಇಲಾಖೆಗೆ ಸೂಚಿಸಿದೆ.
Bengaluru Air: ಲಾಕ್ಡೌನ್ ಪರಿಣಾಮ: ಬೆಂಗಳೂರು ನಗರದಲ್ಲಿ ಗಾಳಿಯ ಶುದ್ಧತೆ ಹೆಚ್ಚಳ
2021ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ವಾಯುಮಾಲಿನ್ಯದ ಪ್ರಮಾಣ ಕಡಿಮೆಯಾಗಿದೆ. ಕೊವಿಡ್ ಲಾಕ್ಡೌನ್ನ ಪ್ರಭಾವದಿಂದ ವಾಹನಗಳ ಸಂಚಾರ ವಿರಳವಾಗಿರುವುದು ವಾಯುಮಾಲಿನ್ಯದ ಪ್ರಮಾಣ ಇಳಿಮುಖವಾಗಲು ಕಾರಣ ಎನ್ನಲಾಗಿದೆ. ಮೇ ತಿಂಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶುದ್ಧ ಗಾಳಿಯ ಗುಣಮಟ್ಟದಲ್ಲಿ ಶೇ.35.26ರಷ್ಟು ಏರಿಕೆಯಾಗಿದೆ.
ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬೆಂಗಳೂರಿನ ವಿವಿಧ ಪ್ರದೇಶಗಳ ವಾಯುಮಾಲಿನ್ಯದಲ್ಲಿ ಕಡಿಮೆಯಾದ ಪರಿಣಾಮ ಗಾಳಿಯ ಗುಣಮಟ್ಟ ಏರಿಕೆಯಾಗಿದೆ.
ಗಾಳಿಯ ಗುಣಮಟ್ಟವನ್ನು AQI (AIR QUALITY INDEX) ಮೂಲಕ ನಿರ್ಧರಿಸಲಾಗುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಿನ ಬೆಂಗಳೂರಿನ ವಿವಿಧ ಪ್ರದೇಶಗಳ AQI ಗಮನಿಸುವುದಾದರೆ, ಹೆಬ್ಬಾಳದಲ್ಲಿ ಏಪ್ರಿಲ್ನಲ್ಲಿ AQI=77 ಇದ್ದು, ಮೇ ತಿಂಗಳಲ್ಲಿ AQI=45 ಕ್ಕೆ ಏರಿಕೆಯಾಗಿದೆ. ಅಂದರೆ ಶುದ್ಧ ಗಾಳಿಯ ಗುಣಮಟ್ಟದಲ್ಲಿ ಶೇ.41.76ರಷ್ಟು ಏರಿಕೆಯಾಗಿದೆ. ಜಯನಗರದಲ್ಲಿ ಏಪ್ರಿಲ್ನಲ್ಲಿ AQI=87 ಇದ್ದು, ಮೇ ತಿಂಗಳಲ್ಲಿ AQI=55 ಸೂಚಿಸಿದೆ, ಶುದ್ಧ ಗಾಳಿಯ ಗುಣಮಟ್ಟದಲ್ಲಿ ಶೇ.37.43ರಷ್ಟು ಏರಿಕೆಯಾಗಿದೆ.
ಮೈಸೂರು ರಸ್ತೆಯ ಆಸುಪಾಸಿನ ಪ್ರದೇಶಗಳಲ್ಲಿ ಏಪ್ರಿಲ್ನಲ್ಲಿ AQI=113 ಇದ್ದು, ಮೇ ತಿಂಗಳಲ್ಲಿ AQI=52 ಆಗಿದೆ. ಶುದ್ಧ ಗಾಳಿಯ ಗುಣಮಟ್ಟದಲ್ಲಿ ಶೇ.54.0ರಷ್ಟು ಏರಿಕೆಯಾಗಿದೆ. ಸದಾ ಜನನಿಬಿಡ ಪ್ರದೇಶ ಸಿಲ್ಕ್ ಬೋರ್ಡ್ನ್ನು ಗಮನಿಸಿದರೆ ಏಪ್ರಿಲ್ನಲ್ಲಿ AQI=84 ಇದ್ದು, ಮೇ ತಿಂಗಳಲ್ಲಿ AQI=57ರಷ್ಟಾಗಿದೆ. ಹೀಗಾಗಿ ಶುದ್ಧ ಗಾಳಿಯ ಗುಣಮಟ್ಟದಲ್ಲಿ ಶೇಕಡಾ 32.44ರಷ್ಟು ಏರಿಕೆಯಾದಂತಾಗಿದೆ.
ಇನ್ನು ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣ ಪ್ರದೇಶದಲ್ಲಿ ಏಪ್ರಿಲ್ನಲ್ಲಿ AQI=78 ಇದ್ದು, ಮೇ ತಿಂಗಳಲ್ಲಿ AQI=55 ಆಗಿದೆ. ಶುದ್ಧ ಗಾಳಿಯ ಗುಣಮಟ್ಟದಲ್ಲಿ ಶೇ.30.29ರಷ್ಟು ಏರಿಕೆಯಾಗಿದೆ. ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಶುದ್ದ ಗಾಳಿಯ ಗುಣಮಟ್ಟದಲ್ಲಿ ಶೇಕಡಾ 35.26ರಷ್ಟು ಏರಿಯಾಗಿದ್ದು, ಲಾಕ್ಡೌನ್ ಪ್ರಭಾವ ಎಂದು ಖಚಿತವಾಗಿ ಹೇಳಬಹುದಾಗಿದೆ.
PM Narendra Modi ಕೊವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆಯೇ ನಮ್ಮ ಸುರಕ್ಷಾ ಕವಚ: ನರೇಂದ್ರ ಮೋದಿ ( Karnataka High Court directs Forest Department to provide a separate dwelling place to Monkeys in Bengaluru)
Published On - 2:55 pm, Tue, 8 June 21