ಅರ್ಕಾವತಿ ನಿವೇಶನದಾರರಿಗೆ ಹೈಕೋರ್ಟ್​ನಿಂದ ಶುಭಸುದ್ದಿ; 16 ಹಳ್ಳಿಗಳ ಭೂಸ್ವಾಧೀನ ಪ್ರಶ್ನಿಸಿದ್ದ ಅರ್ಜಿ ಇತ್ಯರ್ಥ

TV9 Digital Desk

| Edited By: guruganesh bhat

Updated on: Sep 27, 2021 | 6:35 PM

2003 ಫೆಬ್ರವರಿ 3ಕ್ಕಿಂತ ಮೊದಲಿರುವ ಮನೆಗಳು ಪಕ್ಕಾ ಕಟ್ಟಡಗಳಾಗಿದ್ದರೆ ಮಾತ್ರ ಉಳಿಯಲಿವೆ. ಆದರೆ ಸಿಮೆಂಟ್ ಶೀಟ್, ಹೆಂಚಿನ ಚಾವಣಿ ಹೊಂದಿರುವ ಕಟ್ಟಡಗಳನ್ನು ಪಕ್ಕಾ ಕಟ್ಟಡಗಳೆಂದು ಪರಿಗಣಿಸಲಾಗಿಲ್ಲ.

ಅರ್ಕಾವತಿ ನಿವೇಶನದಾರರಿಗೆ ಹೈಕೋರ್ಟ್​ನಿಂದ ಶುಭಸುದ್ದಿ; 16 ಹಳ್ಳಿಗಳ ಭೂಸ್ವಾಧೀನ ಪ್ರಶ್ನಿಸಿದ್ದ ಅರ್ಜಿ ಇತ್ಯರ್ಥ
ಹೈಕೋರ್ಟ್
Follow us

ಬೆಂಗಳೂರು: ಅರ್ಕಾವತಿ ನಿವೇಶನದಾರರಿಗೆ ಹೈಕೋರ್ಟ್ ಶುಭಸುದ್ದಿ ನೀಡಿದೆ. ಅರ್ಕಾವತಿ ಬಡಾವಣೆಯ ಭೂಸ್ವಾಧೀನವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ಮೂರು ತಿಂಗಳಲ್ಲಿ ಬಾಕಿ ನಿವೇಶನವನ್ನು ಹಂಚುವಂತೆ ಆದೇಶಿಸಿದೆ. 16 ಹಳ್ಳಿಗಳ ಭೂಸ್ವಾಧೀನ ಪ್ರಶ್ನಿಸಿದ್ದ ಅರ್ಜಿಗಳನ್ನು ನ್ಯಾ. ಅರವಿಂದ್ ಕುಮಾರ್ ಅವರಿದ್ದ ಹೈಕೋರ್ಟ್​ ಏಕಸದಸ್ಯ ಪೀಠ ಇತ್ಯರ್ಥಗೊಳಿಸಿದೆ.

ರಿಡೂ, ಡಿನೋಟಿಫಿಕೇಷನ್ ಪರಿಶೀಲನೆಗೆ ಸಮಿತಿ ರಚಿಸಬೇಕೆಂದು ತಿಳಿಸಿರುವ ಕೋರ್ಟ್, ಸುಪ್ರೀಂಕೋರ್ಟ್ ತೀರ್ಪಿಗೆ ಬದ್ಧವಾಗಿ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪರಿಶೀಲಿಸುವಂತೆ ಸೂಚಿಸಿದೆ. ನಿವೃತ್ತ ನ್ಯಾ.ಕೆ.ಎನ್.ಕೇಶವನಾರಾಯಣ, ನಿವೃತ್ತ ಐಎಎಸ್ ಅಧಿಕಾರಿ ಸಂದೀಪ್ ದವೆ, ನಿವೃತ್ತ ಪೊಲೀಸ್ ಅಧಿಕಾರಿ ಎನ್.ಎಸ್.ಮೇಘರಿಕ್ ತ್ರಿಸದಸ್ಯ ಸಮಿತಿಯನ್ನು ಕೋರ್ಟ್ ರಚಿಸಿದೆ. ಸಮಿತಿ 16 ಹಳ್ಳಿಗಳ ಭೂಸ್ವಾಧೀನವನ್ನು ಪರಿಶೀಲಿಸಲನೆ ನಡೆಸಲಿದ್ದು, ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಹಂಚಿಕೆಯಾದ ಜನರಿಗೆ ನಿವೇಶನ ಒದಗಿಸಬೇಕು. ಹಂಚಿಕೆಯಾದವರಿಗೆ ಮಾರಾಟ ಒಪ್ಪಂದ ಮಾಡಿಕೊಡಬೇಕು. 2003 ಫೆಬ್ರವರಿ 3ಕ್ಕಿಂತ ಮೊದಲಿರುವ ಮನೆಗಳು ಪಕ್ಕಾ ಕಟ್ಟಡಗಳಾಗಿದ್ದರೆ ಮಾತ್ರ ಉಳಿಯಲಿವೆ. ಆದರೆ ಸಿಮೆಂಟ್ ಶೀಟ್, ಹೆಂಚಿನ ಚಾವಣಿ ಹೊಂದಿರುವ ಕಟ್ಟಡಗಳನ್ನು ಪಕ್ಕಾ ಕಟ್ಟಡಗಳೆಂದು ಪರಿಗಣಿಸಲಾಗಿಲ್ಲ. ಈ ಬಗ್ಗೆಯೂ ಬಿಡಿಎಗೆ ವರದಿ ನೀಡಲು ಸಮಿತಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: 

ಅರ್ಕಾವತಿ ಕೇಸ್‌ನಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗ್ತಿದ್ರು.. ಅದಕ್ಕೇ ಲೋಕಾಯುಕ್ತನ ಸ್ಕ್ರ್ಯಾಪ್ ಮಾಡಿ ACB ತಂದರು -H. ವಿಶ್ವನಾಥ್

Temple Tour: ತ್ರಿಮೂರ್ತಿಗಳಿಂದ ಸ್ಥಾಪನೆಯಾದ ಕುರುಡು ಮಲೆ ಸಾಲಿಗ್ರಾಮ ಗಣಪನ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ

(Karnataka High Court give good news to Arkavathi Layout residents)

ತಾಜಾ ಸುದ್ದಿ

Related Stories

Click on your DTH Provider to Add TV9 Kannada