ಅರ್ಕಾವತಿ ಕೇಸ್‌ನಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗ್ತಿದ್ರು.. ಅದಕ್ಕೇ ಲೋಕಾಯುಕ್ತನ ಸ್ಕ್ರ್ಯಾಪ್ ಮಾಡಿ ACB ತಂದರು -H. ವಿಶ್ವನಾಥ್

ಸಿದ್ದರಾಮಯ್ಯ ಲೋಕಾಯುಕ್ತವನ್ನು ಸ್ಕ್ರ್ಯಾಪ್ ಮಾಡಿದ್ದಾರೆ. ಜೈಲಿಗೆ ಹೋಗುವುದನ್ನ ತಪ್ಪಿಸಿಕೊಳ್ಳಲು ಸ್ಕ್ರ್ಯಾಪ್ ಮಾಡಿದ ಎಂದು MLC ಹೆಚ್.ವಿಶ್ವನಾಥ್ ಆರೋಪಿಸಿದ್ದಾರೆ. ಅರ್ಕಾವತಿ ಕೇಸ್‌ನಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು. ಅದಕ್ಕಾಗಿಯೇ ಲೋಕಾಯುಕ್ತ ಮುಚ್ಚಿ ACB ತಂದಿದ್ದರು. ಅರ್ಕಾವತಿ ಕೇಸ್ ತೆರೆದರೆ ನೀವು ಎಲ್ಲಿರುತ್ತೀರೆಂದು ತಿಳಿಯುತ್ತೆ ಎಂದು ಹೇಳಿದರು.

ಅರ್ಕಾವತಿ ಕೇಸ್‌ನಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗ್ತಿದ್ರು.. ಅದಕ್ಕೇ ಲೋಕಾಯುಕ್ತನ ಸ್ಕ್ರ್ಯಾಪ್ ಮಾಡಿ ACB ತಂದರು -H. ವಿಶ್ವನಾಥ್
H.ವಿಶ್ವನಾಥ್​ (ಎಡ) ಸಿದ್ದರಾಮಯ್ಯ (ಬಲ)
Follow us
KUSHAL V
|

Updated on:Dec 19, 2020 | 1:24 PM

ಮೈಸೂರು: ಸಿದ್ದರಾಮಯ್ಯ ಲೋಕಾಯುಕ್ತವನ್ನು ಸ್ಕ್ರ್ಯಾಪ್ ಮಾಡಿದ್ದಾರೆ. ಜೈಲಿಗೆ ಹೋಗುವುದನ್ನ ತಪ್ಪಿಸಿಕೊಳ್ಳಲು ಸ್ಕ್ರ್ಯಾಪ್ ಮಾಡಿದ ಎಂದು MLC ಹೆಚ್. ವಿಶ್ವನಾಥ್ ಆರೋಪಿಸಿದ್ದಾರೆ. ಅರ್ಕಾವತಿ ಕೇಸ್‌ನಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು. ಅದಕ್ಕಾಗಿಯೇ ಲೋಕಾಯುಕ್ತ ಮುಚ್ಚಿ ACB ತಂದಿದ್ದರು. ಅರ್ಕಾವತಿ ಕೇಸ್ ತೆರೆದರೆ ನೀವು ಎಲ್ಲಿರುತ್ತೀರೆಂದು ತಿಳಿಯುತ್ತೆ ಎಂದೂ ವಿಶ್ವನಾಥ್ ಮಾರ್ಮಿಕವಾಗಿ ಹೇಳಿದರು.

‘ಏಕೆ ಸೋತೆ ಅಂತಾ ನೀವೇ ಆತ್ಮಾವಲೋಕನ ಮಾಡಿಕೊಳ್ಳೀ’ ನೀವೇಕೆ ಸೋತಿದ್ದು ಅಂತಾ ಆತ್ಮಾವಲೋಕನ ಮಾಡಿಕೊಳ್ಳಲ್ಲ? ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನ ಡೆಮಾಲಿಶ್ ಮಾಡಿಬಿಟ್ರು. ಬಲಗೈನವರು ಮತ ಹಾಕಿಲ್ಲ ಅನ್ನೋ ಹೇಳಿಕೆ ವಿಚಾರವಾಗಿ ರಾಜ್ಯದಾದ್ಯಂತ ಕಾಂಗ್ರೆಸ್ ಕಾಪಾಡಿದ್ದು ದಲಿತ ಸಮುದಾಯ. ಆತ್ಮಾವಲೋಕನ ಮಾಡಿಕೊಳ್ಳದೆ ಮಾತನಾಡಿಕೊಳ್ಳಬಾರದು ಎಂದು MLC ಹೆಚ್.ವಿಶ್ವನಾಥ್ ಹೇಳಿದರು.

‘ಸದಾ ಬೆನ್ನಿಗೆ ಚೂರಿ ಇರೀತಿದ್ದವನಿಗೆ ಈಗ ನೋವು ಗೊತ್ತಾಗಿದೆ’ ಸದಾ ಬೆನ್ನಿಗೆ ಚೂರಿ ಇರೀತಿದ್ದವಿನಿಗೆ ಈಗ ನೋವು ಗೊತ್ತಾಗಿದೆ. ಬೇರೆಯವರ ಬೆನ್ನಿಗೆ ಚೂರಿ ಇರಿದು ಆನಂದ ಪಡುತ್ತಿದ್ದರು. ವಿಘ್ನ ಸಂತೋಷಿಗಳಾಗಿದ್ದವರಿಗೆ ಈಗ ನೋವಾಗುತ್ತಿದೆ ಎಂದು ಬಿಜೆಪಿ MLC ಹೆಚ್.ವಿಶ್ವನಾಥ್​ ಖಾರವಾಗಿ ಟಾಂಗ್​ ಕೊಟ್ಟರು.

ನಿಮ್ಮದು ಮಾತ್ರ ರಕ್ತ ಮಾಂಸ ಮೂಳೆ. ನಮ್ಮದು ತಗಡು ಅಥವಾ ಮರಾನಾ? ಎಂದು ವ್ಯಂಗ್ಯವಾಡಿದರು. ನೀವು ಚೂರಿ ಇರಿಯುವಾಗ ಅದನ್ನು ಗಮನಿಸಲೂ ಇಲ್ಲ. ನಾವು ಎಂತಹ ನೋವು ಅನುಭವಿಸಿದೆವು ಗೊತ್ತಿದೆಯಾ? ಎಂದು ಹೆಚ್.ವಿಶ್ವನಾಥ್​ ಹೇಳಿದರು.

ಜೊತೆಗೆ, ಸಿದ್ದರಾಮಯ್ಯ ಚಾಮುಂಡೇಶ್ವರಿ ಬಿಟ್ಟು ಏಕೆ ಓಡಿ ಹೋದ್ರಿ? ನಿಮಗೆ ಸೋಲಿನ ಸುಳಿವು ತಿಳಿದ ಹಿನ್ನೆಲೆ ಓಡಿ ಹೋಗಿದ್ದೀರಿ. ನಿಮ್ಮ ಜನಪರ ಕಾರ್ಯ ಯೋಜನೆ ಏಕೆ ಕೈಹಿಡಿಯಲಿಲ್ಲ? ನೀವು ಚಾಮುಂಡೇಶ್ವರಿ ಕ್ಷೇತ್ರವನ್ನು ಕಡೆಗಣಿಸಿದ್ದೀರಿ. ನೀವು ಯಾರೋ ಕೆಲವು ಚಮಚಗಳ ಕೈಹಿಡಿದಿರಬಹುದು. ಅದಕ್ಕೆ ನೀವು ಬಾದಾಮಿ ಕ್ಷೇತ್ರದ ಕಡೆ‌ ಮುಖ‌ ಮಾಡಿದಿರಿ. ಯಾವ ಮತದಾರರೂ ನಿಮ್ಮನ್ನು ಸೋಲಿಸಲಿಲ್ಲ ಎಂದು ಹೇಳಿದರು.

‘ಏನು ನಿಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಬೇಕಿತ್ತಾ?’ ಬಿಜೆಪಿ, ಜೆಡಿಎಸ್ ವಿರೋಧ ಪಕ್ಷಗಳು ನಿಮ್ಮನ್ನು ಸೋಲಿಸ್ತಾ? ಏನು ನಿಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಬೇಕಿತ್ತಾ? ಡಾ.ಜಿ.ಪರಮೇಶ್ವರ್‌ರನ್ನು ಸೋಲಿಸಿದಾಗ ಇದು ಗೊತ್ತಾಗಲಿಲ್ವಾ? ಡಾ.ಜಿ.ಪರಮೇಶ್ವರ್‌ರನ್ನು ಸೋಲಿಸಿದವರು ಯಾರೆಂದು ಪ್ರಶ್ನಿಸಿ ವಿಶ್ವನಾಥ್ ಇದೇ ವೇಳೆ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದರು. ಸಮ್ಮಿಶ್ರ ಸರ್ಕಾರ ಬೀಳಿಸಿದ ಆಪಾದನೆಯಿಂದ ಮುಕ್ತವಾಗಿದ್ದೇವೆ. ಸಮ್ಮಿಶ್ರ ಸರ್ಕಾರ ನಾವೇ ಕೆಡವಿದ್ದು ಅಂತಾ ಒಪ್ಪಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಧನ್ಯವಾದ ಎಂದು ಹೆಚ್.ವಿಶ್ವನಾಥ್ ಇಬ್ಬರೂ ನಾಯಕರಿಗೆ ಟಾಂಗ್​ ಕೊಟ್ಟರು.

‘ಸಿದ್ದರಾಮಯ್ಯಗೆ ಇರುವಷ್ಟು ಹೊಟ್ಟೆಕಿಚ್ಚು ಜಗತ್ತಲ್ಲೆ ಯಾರಿಗೂ ಇಲ್ಲ’ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಸಿಎಂ ಅಧಿಕೃತ ನಿವಾಸ ಖಾಲಿ‌ ಮಾಡದ ವಿಚಾರವಾಗಿ ಕಾನೂನು ಮಾತನಾಡುವ ಸಿದ್ದರಾಮಯ್ಯ ಸಿಎಂ ಆಗಿದ್ದ ಸಿದ್ದರಾಮಯ್ಯ, ಲಾಯರ್ ಆಗಿದ್ದ ಸಿದ್ದರಾಮಯ್ಯ, ಜಾರ್ಜ್ ಹೆಸರಲ್ಲಿ ಮನೆ ತಗೊಂಡು ಇದ್ದರಲ್ಲಾ ಇವರೆಂಥ ಆಸೆಬುರಕರು. ಎಲ್ಲರಿಗು ಹೊಟ್ಟೆಕಿಚ್ಚು ಅಂತಾರೆ. ಆದರೆ ಸಿದ್ದರಾಮಯ್ಯಗೆ ಇರುವಷ್ಟು ಹೊಟ್ಟೆಕಿಚ್ಚು ಜಗತ್ತಲ್ಲೆ ಯಾರಿಗೂ ಇಲ್ಲ ಎಂದು ಹೆಚ್.ವಿಶ್ವನಾಥ್ ಹೇಳಿದರು.

‘ ಸಿದ್ದರಾಮಯ್ಯರ ಕೋಳಿ ಕೂಗಲಿಲ್ಲ ಅಂದರೂ ಬೆಳಗಾಗುತ್ತೆ’ ಸಿದ್ದರಾಮಯ್ಯ ಸೋಮನಹಳ್ಳಿ ಮುದುಕಿಯಾಗಿದ್ದಾರೆ. ತನ್ನ ಕೋಳಿ ಕೂಗಿದರೆ ಬೆಳಕಾಗೋದು ಅಂದುಕೊಂಡಿದ್ದಾರೆ.  ಸಿದ್ದರಾಮಯ್ಯರ ಕೋಳಿ ಕೂಗಲಿಲ್ಲ ಅಂದರೂ ಬೆಳಗಾಗುತ್ತೆ. ಅದರೆ ಸಿದ್ದರಾಮಯ್ಯ ಸುತ್ತ ಇರುವವರು ಬೇರೆ ಹೇಳುತ್ತಿದ್ದಾರೆ. ನಿಮ್ಮ ಕೋಳಿ ಕೂಗಿದರಷ್ಟೇ ಬೆಳೆಕಾಗೋದು ಅಂತಿದ್ದಾರೆ. ಅದನ್ನೇ ಸಿದ್ದರಾಮಯ್ಯ ನಂಬಿಕೊಂಡಿದ್ದಾರೆ ಎಂದು ವಿಶ್ವನಾಥ್ ಹೇಳಿದರು.

ನಾನು ಮನೆ ಖಾಲಿ ಮಾಡೋಕೂ ಮುಂಚೆಯೇ HDK ಹೋಟೆಲ್‌ನಲ್ಲಿ ಟಿಕಾಣಿ ಹೂಡಿದ್ದ -ಲಾ ಪಾಯಿಂಟ್​ ಎತ್ತಿದ ಮಾಜಿ ಲಾಯರ್​ ಸಿದ್ದರಾಮಯ್ಯ

Published On - 1:19 pm, Sat, 19 December 20

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ