ಮೊಬೈಲ್ ಬಳಸಿ ಹೈಕೋರ್ಟ್ ಕಲಾಪ ವೀಕ್ಷಿಸಿದ್ದ ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆ ಪ್ರಕರಣದ ಕೈದಿಗಳು: ತನಿಖೆಗೆ ಸಮಿತಿ ರಚಿಸಲು ಹೈಕೋರ್ಟ್ ಇಂಗಿತ

| Updated By: ganapathi bhat

Updated on: Jul 28, 2021 | 9:28 PM

ಜೈಲಿನಿಂದಲೂ ಉಗ್ರ ಕೃತ್ಯ ನಡೆಸಿದ ಉದಾಹರಣೆಗಳಿವೆ. ಹೀಗಾಗಿ ಮೊಬೈಲ್ ಬಳಕೆ ಬಗ್ಗೆ ತನಿಖೆ ಅಗತ್ಯ ಎಂದು ನ್ಯಾಯಮೂರ್ತಿ ಅರವಿಂದ್ ಕುಮಾರ್ ಹಾಗೂ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಪೀಠ ಸೂಚನೆ ನೀಡಿದೆ.

ಮೊಬೈಲ್ ಬಳಸಿ ಹೈಕೋರ್ಟ್ ಕಲಾಪ ವೀಕ್ಷಿಸಿದ್ದ ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆ ಪ್ರಕರಣದ ಕೈದಿಗಳು: ತನಿಖೆಗೆ ಸಮಿತಿ ರಚಿಸಲು ಹೈಕೋರ್ಟ್ ಇಂಗಿತ
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ನಗರದ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಹೈಕೋರ್ಟ್ ಕಲಾಪವನ್ನು ಕೈದಿಗಳು ಮೊಬೈಲ್ ಬಳಸಿ ವೀಕ್ಷಿಸಿದ್ದ ಘಟನೆಯ ಕುರಿತು ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ಯೋಜಿಸಿದೆ. ಅದಕ್ಕಾಗಿ ತನಿಖಾ ಸಮಿತಿ ರಚಿಸಲು ಹೈಕೋರ್ಟ್ ಇಂಗಿತ ವ್ಯಕ್ತಪಡಿಸಿದೆ.

ಮೊಹಮ್ಮದ್ ಶರೀಫ್, ಶೇಖ್ ಬಿಲಾಲ್​ ಎಂಬವರು ವಿಡಿಯೋ ಕಾನ್ಫರೆನ್ಸ್ ಲಿಂಕ್ ಬಳಸಿ ಕಲಾಪ ವೀಕ್ಷಿಸಿದ್ದರು. ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ಕಲಾಪವನ್ನು ವೀಕ್ಷಿಸಿದ್ದರು. ಹೀಗೆ ಜೈಲಿನೊಳಗೆ ಮೊಬೈಲ್‌ ಬಳಕೆ‌ ಬಗ್ಗೆ ಹೈಕೋರ್ಟ್ ಗರಂ ಆಗಿದೆ.

ನಿವೃತ್ತ ನ್ಯಾಯಮೂರ್ತಿ, ಐಎಎಸ್, ಐಪಿಎಸ್ ಅಧಿಕಾರಿ‌ಗಳಿಂದ‌‌ ತನಿಖೆ ನಡೆಸಲು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ನಿವೃತ್ತ ಅಧಿಕಾರಿಗಳ‌ ಹೆಸರು ನೀಡಲು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ದಕ್ಷಿಣ ವಲಯ ಐಜಿಪಿಯಿಂದ ತನಿಖೆಗೆ ಸರ್ಕಾರ ಪ್ರಸ್ತಾಪ ಮಾಡಿದೆ. ಆದರೆ, ಸರ್ಕಾರದ ಪ್ರಸ್ತಾಪವನ್ನು ಹೈಕೋರ್ಟ್ ತಿರಸ್ಕರಿಸಿದೆ.

ಜೈಲಿನಿಂದಲೂ ಉಗ್ರ ಕೃತ್ಯ ನಡೆಸಿದ ಉದಾಹರಣೆಗಳಿವೆ. ಹೀಗಾಗಿ ಮೊಬೈಲ್ ಬಳಕೆ ಬಗ್ಗೆ ತನಿಖೆ ಅಗತ್ಯ ಎಂದು ನ್ಯಾಯಮೂರ್ತಿ ಅರವಿಂದ್ ಕುಮಾರ್ ಹಾಗೂ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಪೀಠ ಸೂಚನೆ ನೀಡಿದೆ.

ಕೊವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಂದ‌ ದುಬಾರಿ ಶುಲ್ಕ; ದೂರು ಪರಿಹಾರ ಸಮಿತಿ ರಚನೆಗೆ ಹೈಕೋರ್ಟ್ ಸೂಚನೆ
ಕೊವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಂದ‌ ದುಬಾರಿ ಶುಲ್ಕ ಹಿನ್ನೆಲೆಯಲ್ಲಿ ದೂರು ಪರಿಹಾರ ಸಮಿತಿ ರಚನೆಗೆ ಹೈಕೋರ್ಟ್ ಸೂಚನೆ ನೀಡಿದೆ. ಸರ್ಕಾರಿ ಕೋಟಾದ ಬೆಡ್​ಗಳಿಗೂ ಶುಲ್ಕ ವಸೂಲಿ ಮಾಡಲಾಗಿದೆ. ಹೀಗೆ ಶುಲ್ಕ ವಸೂಲಿ ಬಗ್ಗೆ ಹಲವು ದೂರುಗಳು ಬಂದಿವೆ ಎಂದು ಹೈಕೋರ್ಟ್​ಗೆ ವಕೀಲ‌ ಶ್ರೀಧರ್ ಪ್ರಭು ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ತಕ್ಷಣ ದೂರು ಪರಿಹಾರ ಸಮಿತಿ ರಚನೆಗೆ ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ಕ್ರಮ ಕೈಗೊಳ್ಳಿ ಎಂದು ಹೇಳಿ, ವಿಶೇಷ ಲಸಿಕಾ ಅಭಿಯಾನ ನಡೆಸಲು ಕೂಡ ಹೈಕೋರ್ಟ್ ಸೂಚನೆ ನೀಡಿದೆ.

ಇದನ್ನೂ ಓದಿ: ಕೊವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಂದ‌ ದುಬಾರಿ ಶುಲ್ಕ; ದೂರು ಪರಿಹಾರ ಸಮಿತಿ ರಚನೆಗೆ ಹೈಕೋರ್ಟ್ ಸೂಚನೆ

ಕೊವಿಡ್​ನಿಂದಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ‌ ಸಮೀಕ್ಷೆ ನಡೆಸಲು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

(Karnataka High Court on DJ Halli KJ Halli Case Mobile Phone Usage inside Jail)

Published On - 9:25 pm, Wed, 28 July 21