ಕೊವಿಡ್ನಿಂದಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಲು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ, ನ್ಯಾ. ಎನ್.ಎಸ್. ಸಂಜಯ್ ಗೌಡರಿದ್ದ ಪೀಠ ಆದೇಶ ನೀಡಿದೆ.
ಬೆಂಗಳೂರು: ಕೊರೊನಾ ವೈರಸ್ ಸೋಂಕಿನಿಂದಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ಕೊವಿಡ್ ಕಾರಣದಿಂದ ಕಲಿಕೆಯಿಂದ ವಂಚಿತರಾದ ಮಕ್ಕಳ ಬಗ್ಗೆ ಮನೆ ಮನೆ ಸಮೀಕ್ಷೆ ನಡೆಸಬೇಕು ಎಂದು ಬಿಬಿಎಂಪಿಗೆ ಸೂಚಿಸಲಾಗಿದೆ.
ಈ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಹೀಗೆ ಹೇಳಿದೆ. ಗ್ರಾಮೀಣ ಭಾಗದ 3 ರಿಂದ 6 ವರ್ಷದ ಒಳಗಿನ 1,26,245 ಮಕ್ಕಳು, 6 ರಿಂದ 18 ವರ್ಷದ ಒಳಗಿನ 33,344 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ನಗರಗಳಲ್ಲಿ 6 ರಿಂದ 18 ವರ್ಷದ 8,718 ಮಕ್ಕಳು ಶಾಲೆಗೆ ಹೋಗ್ತಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆಯನ್ನೇ ನಡೆಸಲಾಗಿಲ್ಲ ಎಂದು ಹೈಕೋರ್ಟ್ಗೆ ಅಮಿಕಸ್ ಕ್ಯೂರಿ ಕೆ.ಎನ್. ಫಣೀಂದ್ರ ಮಾಹಿತಿ ನೀಡಿದ್ದಾರೆ.
ಹೀಗಾಗಿ ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ, ನ್ಯಾ. ಎನ್.ಎಸ್. ಸಂಜಯ್ ಗೌಡರಿದ್ದ ಪೀಠ ಆದೇಶ ನೀಡಿದೆ.
ಕೊವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಂದ ದುಬಾರಿ ಶುಲ್ಕ; ಸಮಿತಿ ರಚನೆಗೆ ಹೈಕೋರ್ಟ್ ಸೂಚನೆ ಕೊವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಂದ ದುಬಾರಿ ಶುಲ್ಕ ಹಿನ್ನೆಲೆಯಲ್ಲಿ ದೂರು ಪರಿಹಾರ ಸಮಿತಿ ರಚನೆಗೆ ಹೈಕೋರ್ಟ್ ಸೂಚನೆ ನೀಡಿದೆ. ಸರ್ಕಾರಿ ಕೋಟಾದ ಬೆಡ್ಗಳಿಗೂ ಶುಲ್ಕ ವಸೂಲಿ ಮಾಡಲಾಗಿದೆ. ಹೀಗೆ ಶುಲ್ಕ ವಸೂಲಿ ಬಗ್ಗೆ ಹಲವು ದೂರುಗಳು ಬಂದಿವೆ ಎಂದು ಹೈಕೋರ್ಟ್ಗೆ ವಕೀಲ ಶ್ರೀಧರ್ ಪ್ರಭು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ತಕ್ಷಣ ದೂರು ಪರಿಹಾರ ಸಮಿತಿ ರಚನೆಗೆ ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ಕ್ರಮ ಕೈಗೊಳ್ಳಿ ಎಂದು ಹೇಳಿ, ವಿಶೇಷ ಲಸಿಕಾ ಅಭಿಯಾನ ನಡೆಸಲು ಕೂಡ ಹೈಕೋರ್ಟ್ ಸೂಚನೆ ನೀಡಿದೆ.
ಇದನ್ನೂ ಓದಿ: Covid 19 Updates: ದೇಶದಲ್ಲಿ ಇಂದು ಮತ್ತೆ 40 ಸಾವಿರ ದಾಟಿದ ಕೊರೊನಾ ಕೇಸ್; 640 ಮಂದಿ ಸಾವು
Tokyo Olympic: ಒಲಂಪಿಕ್ಸ್ ಆರಂಭವಾದ ಬಳಿಕ ಟೋಕಿಯೊದಲ್ಲಿ ಹೆಚ್ಚಿದ ಕೊರೊನಾ ಪ್ರಕರಣ; ಒಂದೇ ದಿನ 3,177 ಜನರಿಗೆ ಸೋಂಕು
(Karnataka High Court directs BBMP to conduct Survey on School Childrens who left School due to Covid19)
Published On - 7:58 pm, Wed, 28 July 21