ಕೊವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಂದ‌ ದುಬಾರಿ ಶುಲ್ಕ; ದೂರು ಪರಿಹಾರ ಸಮಿತಿ ರಚನೆಗೆ ಹೈಕೋರ್ಟ್ ಸೂಚನೆ

TV9 Digital Desk

| Edited By: ganapathi bhat

Updated on: Jul 28, 2021 | 8:07 PM

ಸರ್ಕಾರಿ ಕೋಟಾದ ಬೆಡ್​ಗಳಿಗೂ ಶುಲ್ಕ ವಸೂಲಿ ಮಾಡಲಾಗಿದೆ. ಹೀಗೆ ಶುಲ್ಕ ವಸೂಲಿ ಬಗ್ಗೆ ಹಲವು ದೂರುಗಳು ಬಂದಿವೆ ಎಂದು ಹೈಕೋರ್ಟ್​ಗೆ ವಕೀಲ‌ ಶ್ರೀಧರ್ ಪ್ರಭು ಮಾಹಿತಿ ನೀಡಿದ್ದಾರೆ.

ಕೊವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಂದ‌ ದುಬಾರಿ ಶುಲ್ಕ; ದೂರು ಪರಿಹಾರ ಸಮಿತಿ ರಚನೆಗೆ ಹೈಕೋರ್ಟ್ ಸೂಚನೆ
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಕೊವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಂದ‌ ದುಬಾರಿ ಶುಲ್ಕ ಹಿನ್ನೆಲೆಯಲ್ಲಿ ದೂರು ಪರಿಹಾರ ಸಮಿತಿ ರಚನೆಗೆ ಹೈಕೋರ್ಟ್ ಸೂಚನೆ ನೀಡಿದೆ. ಸರ್ಕಾರಿ ಕೋಟಾದ ಬೆಡ್​ಗಳಿಗೂ ಶುಲ್ಕ ವಸೂಲಿ ಮಾಡಲಾಗಿದೆ. ಹೀಗೆ ಶುಲ್ಕ ವಸೂಲಿ ಬಗ್ಗೆ ಹಲವು ದೂರುಗಳು ಬಂದಿವೆ ಎಂದು ಹೈಕೋರ್ಟ್​ಗೆ ವಕೀಲ‌ ಶ್ರೀಧರ್ ಪ್ರಭು ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ತಕ್ಷಣ ದೂರು ಪರಿಹಾರ ಸಮಿತಿ ರಚನೆಗೆ ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ಕ್ರಮ ಕೈಗೊಳ್ಳಿ ಎಂದು ಹೇಳಿ, ವಿಶೇಷ ಲಸಿಕಾ ಅಭಿಯಾನ ನಡೆಸಲು ಕೂಡ ಹೈಕೋರ್ಟ್ ಸೂಚನೆ ನೀಡಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳ‌ ಸಮೀಕ್ಷೆ ನಡೆಸಲು ಆದೇಶ ಕೊರೊನಾ ವೈರಸ್ ಸೋಂಕಿನಿಂದಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ‌ ಸಮೀಕ್ಷೆ ನಡೆಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ಕೊವಿಡ್ ಕಾರಣದಿಂದ ಕಲಿಕೆಯಿಂದ ವಂಚಿತರಾದ ಮಕ್ಕಳ ಬಗ್ಗೆ ಮನೆ ಮನೆ ಸಮೀಕ್ಷೆ ನಡೆಸಬೇಕು ಎಂದು ಬಿಬಿಎಂಪಿಗೆ ಸೂಚಿಸಲಾಗಿದೆ.

ಈ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಹೀಗೆ ಹೇಳಿದೆ. ಗ್ರಾಮೀಣ ಭಾಗದ 3 ರಿಂದ 6 ವರ್ಷದ ಒಳಗಿನ 1,26,245 ಮಕ್ಕಳು, 6 ರಿಂದ 18 ವರ್ಷದ ಒಳಗಿನ 33,344 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ನಗರಗಳಲ್ಲಿ 6 ರಿಂದ 18 ವರ್ಷದ 8,718 ಮಕ್ಕಳು ಶಾಲೆಗೆ ಹೋಗ್ತಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆಯನ್ನೇ ನಡೆಸಲಾಗಿಲ್ಲ ಎಂದು ಹೈಕೋರ್ಟ್​ಗೆ ಅಮಿಕಸ್ ಕ್ಯೂರಿ ಕೆ.ಎನ್. ಫಣೀಂದ್ರ ಮಾಹಿತಿ ನೀಡಿದ್ದಾರೆ.

ಹೀಗಾಗಿ ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ, ನ್ಯಾ. ಎನ್.ಎಸ್. ಸಂಜಯ್ ಗೌಡರಿದ್ದ ಪೀಠ ಆದೇಶ ನೀಡಿದೆ.

ಇದನ್ನೂ ಓದಿ: ಕೊವಿಡ್​ನಿಂದಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ‌ ಸಮೀಕ್ಷೆ ನಡೆಸಲು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

ಜಾಗತಿಕ ಮಟ್ಟದಲ್ಲಿ ಕೊವಿಡ್ ಸಾವು ಶೇ 21ರಷ್ಟು ಏರಿಕೆ; ಎರಡು ವಾರಗಳಲ್ಲಿ ಪ್ರಕರಣಗಳು 20 ಕೋಟಿ ಮೀರುವ ಸಾಧ್ಯತೆ: ವಿಶ್ವ ಆರೋಗ್ಯ ಸಂಸ್ಥೆ

(Karnataka High Court directs to form Committee against Private Hospital Bill charged during Covid19)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada