ಹೈಕೋರ್ಟ್​ ಕಲಾಪಕ್ಕೆ ಸೈಬರ್​ ಹ್ಯಾಕರ್ಸ್​​ ಹಾವಳಿ, ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್

| Updated By: ಡಾ. ಭಾಸ್ಕರ ಹೆಗಡೆ

Updated on: Dec 05, 2023 | 1:14 PM

Karnataka high court video conference hacked: ಕರ್ನಾಟಕ ಹೈಕೋರ್ಟ್ ಕಲಾಪಕ್ಕೂ ಸೈಬರ್ ಹ್ಯಾಕರ್ಸ್​ಗಳ ಕಣ್ಣುಬಿದ್ದಿದೆ. ಕೆಲ ಕೋರ್ಟ್ ಹಾಲ್​ಗಳ ವಿಡಿಯೋ ಕಾನ್ಫರೆನ್ಸ್ ಹ್ಯಾಕ್ ಆಗಿದ್ದರಿಂದ ಸದ್ಯಕ್ಕೆ ಸೌಲಭ್ಯವನ್ನು ಹೈಕೋರ್ಟ್ ಸ್ಥಗಿತಗೊಳಿಸಿದೆ.

ಹೈಕೋರ್ಟ್​ ಕಲಾಪಕ್ಕೆ ಸೈಬರ್​ ಹ್ಯಾಕರ್ಸ್​​ ಹಾವಳಿ,  ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು, (ಡಿಸೆಂಬರ್ 05): ಡಿಜಿಟಲ್‌ ವ್ಯವಹಾರದ ಜೊತೆ ಹ್ಯಾಕರ್ಸ್‌ ಹಾವಳಿ ಹೆಚ್ಚಾಗುತ್ತಿದೆ. ಅದರಂತೆ ಇದೀಗ ಹ್ಯಾಕರ್ಸ್​ ಕರ್ನಾಟಕ ಹೈಕೋರ್ಟ್ (Karnataka High Court)​, ವಿಡಿಯೋ ಕಾನ್ಫರೆನ್ಸ್(video conference,) ಆ್ಯಪ್​ನಲ್ಲೂ ತಮ್ಮ ಕೈಚಳಕ ತೋರಿಸಿದ್ದಾರೆ. ಹೌದು…ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯಾವಳಿ ಅಪ್​ಲೋಡ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್​ನ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಸ್ಥಗಿತಗೊಳಿಸಲಾಗಿದೆ. ಸೈಬರ್ ಸೆಕ್ಯುರಿಟ್ ಸಮಸ್ಯೆ ಹಿನ್ನೆಲೆ ಸದ್ಯಕ್ಕೆ ವಿಡಿಯೋ ಕಾನ್ಫರೆನ್ಸ್ ಸ್ಥಗಿತಗೊಳಿಸಲಾಗಿದೆ ಎಂದು ವಿಚಾರಣೆ ವೇಳೆ ಸಿಜೆ ಪ್ರಸನ್ನ ಬಿ. ವರಾಳೆ ಸ್ಪಷ್ಟಪಡಿಸಿದ್ದಾರೆ.

 

Published On - 1:03 pm, Tue, 5 December 23