Karnataka Hijab Row: ಹಿಜಾಬ್ ವಿವಾದ; ಅರ್ಜಿದಾರ ಯುವತಿಯರಿಂದ ಹೈಕೋರ್ಟ್​ಗೆ ಮತ್ತೆ ಎರಡು ಅರ್ಜಿ ಸಲ್ಲಿಕೆ

| Updated By: ganapathi bhat

Updated on: Feb 14, 2022 | 7:27 PM

ಪ್ರಕರಣ ಉತ್ತರ ಪ್ರದೇಶ ಚುನಾವಣೆ ಮೇಲೆ‌ ಪರಿಣಾಮ ಸಾಧ್ಯತೆ ಇದೆ. ಹೀಗಾಗಿ ಚುನಾವಣೆ ಮುಗಿಯುವವರೆಗೆ ವಿಚಾರಣೆ ಮುಂದೂಡಿ ಎಂದು ಅರ್ಜಿದಾರರ ಪರ ರವಿವರ್ಮ ಕುಮಾರ್ ಮತ್ತೊಂದು ಮನವಿ ಮಾಡಿದ್ದಾರೆ.

Karnataka Hijab Row: ಹಿಜಾಬ್ ವಿವಾದ; ಅರ್ಜಿದಾರ ಯುವತಿಯರಿಂದ ಹೈಕೋರ್ಟ್​ಗೆ ಮತ್ತೆ ಎರಡು ಅರ್ಜಿ ಸಲ್ಲಿಕೆ
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ತರಗತಿಗಳಲ್ಲಿ ಹಿಜಾಬ್, ಕೇಸರಿ ಶಾಲು ಧರಿಸುವ ವಿಚಾರವಾಗಿ ಹೈಕೋರ್ಟ್‌ನ ಪೂರ್ಣ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಾಗುತ್ತಿದೆ. ಈ ಮಧ್ಯೆ, ಅರ್ಜಿದಾರ ಯುವತಿಯರಿಂದ ಮತ್ತೆ ಒಂದು ಅರ್ಜಿ ಸಲ್ಲಿಕೆ ಆಗಿದೆ. ಅರ್ಜಿದಾರರ ಪರ ವಕೀಲರಿಂದ ಮತ್ತೊಂದು ಮನವಿ ಸಲ್ಲಿಸಲಾಗಿದೆ. ಈಗ ಧರಿಸುತ್ತಿರುವ ದುಪಟ್ಟಾ ಬಳಸಿಕೊಳ್ಳಲು ಅನುಮತಿ ನೀಡಿ. ನಮ್ಮ ಇಚ್ಛೆಯಂತೆ ದುಪಟ್ಟಾ ಬಳಸಲು ಅನುಮತಿ ನೀಡಿ ಎಂದು ಹೈಕೋರ್ಟ್‌ಗೆ ಅರ್ಜಿದಾರ ಯುವತಿಯರಿಂದ ಮನವಿ ನೀಡಲಾಗಿದೆ.

ಪ್ರಕರಣ ಉತ್ತರ ಪ್ರದೇಶ ಚುನಾವಣೆ ಮೇಲೆ‌ ಪರಿಣಾಮ ಸಾಧ್ಯತೆ ಇದೆ. ಹೀಗಾಗಿ ಚುನಾವಣೆ ಮುಗಿಯುವವರೆಗೆ ವಿಚಾರಣೆ ಮುಂದೂಡಿ ಎಂದು ಅರ್ಜಿದಾರರ ಪರ ರವಿವರ್ಮ ಕುಮಾರ್ ಮತ್ತೊಂದು ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಆತಂಕದ ವಾತಾವರಣ ಸೃಷ್ಟಿಮಾಡಿದ್ದ ಹಿಜಾಬ್ ವಿವಾದ ಸಂಬಂಧಿಸಿ ಇದೀಗ ಕರ್ನಾಟಕ ಹೈಕೋರ್ಟ್​ನಲ್ಲಿ ಪ್ರಕರಣ ನಡೆಯುತ್ತಿದ್ದು ವಿಚಾರಣೆಯನ್ನು ಮಂಗಳವಾರಕ್ಕೆ (ಫೆಬ್ರವರಿ 15) ಮುಂದೂಡಿ ಆದೇಶ ನೀಡಲಾಗಿದೆ. ಅರ್ಜಿದಾರರ ಪರವಾಗಿ ದೇವದತ್ ಕಾಮತ್, ಸರ್ಕಾರದ ಪರವಾಗಿ ಎಜಿ ಪ್ರಭುಲಿಂಗ್ ನಾವದಗಿ ಹಾಗೂ ಇತರರು ವಾದ ಮಂಡಿಸಿದ್ದಾರೆ. ಹಿಜಾಬ್ ವಿವಾದದ ವಿಚಾರಣೆಗೆ ರಚಿಸಲಾಗಿರುವ ಮೂವರು ನ್ಯಾಯಮೂರ್ತಿಗಳ ಪೀಠ ಪ್ರಕರಣದ ವಿಚಾರಣೆ ನಡೆಸಿದೆ. ಇದೇ ವೇಳೆ, ಮಾಧ್ಯಮಗಳಲ್ಲಿ ಅರ್ಜಿದಾರರ ಮಾಹಿತಿ ನೀಡದಂತೆ ನಿರ್ಬಂಧಿಸಲು ಮನವಿ ಮಾಡಲಾಗಿದೆ. ಅರ್ಜಿದಾರರು ಅಪ್ರಾಪ್ತ ವಿದ್ಯಾರ್ಥಿನಿಯರು ಆಗಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹೀರ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಹೈಕೋರ್ಟ್​ ಆದೇಶವನ್ನು ಎಲ್ಲರೂ ಪಾಲಿಸಬೇಕು; ಆಗ ಸಮಸ್ಯೆ ಬಗೆಹರಿಸಲು ಸಾಧ್ಯ: ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: Online Gaming: ಕರ್ನಾಟಕದಲ್ಲಿ ಆನ್​ಲೈನ್ ಗೇಮಿಂಗ್​ಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್​