Bengaluru Power Cut: ಬೆಂಗಳೂರಿಗರೇ ಗಮನಿಸಿ; ಈ ಏರಿಯಾಗಳಲ್ಲಿ ಇನ್ನೆರಡು ದಿನ ಪವರ್ ಕಟ್

Power Cut in Bangalore: ಜಯನಗರ, ಕುಮಾರಸ್ವಾಮಿ ಲೇಔಟ್, ಬನಶಂಕರಿ, ವಿದ್ಯಾರಣ್ಯಪುರ, ಭುವನೇಶ್ವರಿ ನಗರ, ಬಸವೇಶ್ವರನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ.

Bengaluru Power Cut: ಬೆಂಗಳೂರಿಗರೇ ಗಮನಿಸಿ; ಈ ಏರಿಯಾಗಳಲ್ಲಿ ಇನ್ನೆರಡು ದಿನ ಪವರ್ ಕಟ್
ಬೆಸ್ಕಾಂ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 15, 2022 | 5:50 AM

ಬೆಂಗಳೂರು: ಬೆಸ್ಕಾಂ (BESCOM) ಕೈಗೊಂಡಿರುವ ಮೇಲ್ದರ್ಜೆಗೇರಿಸುವಿಕೆ ಮತ್ತು ನಿರ್ವಹಣೆ ಕಾಮಗಾರಿಯಿಂದ ಬೆಂಗಳೂರಿನಲ್ಲಿ ಇನ್ನೆರಡು ದಿನ ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. ನಿರ್ವಹಣಾ ಕೆಲಸದಿಂದಾಗಿ ಇಂದು (ಮಂಗಳವಾರ) ಮತ್ತು ನಾಳೆ (ಬುಧವಾರ) ಸಿಲಿಕಾನ್ ಸಿಟಿಯಲ್ಲಿ (Bangalore) ಪವರ್ ಕಟ್ ಇರಲಿದೆ. ಜಯನಗರ, ಕುಮಾರಸ್ವಾಮಿ ಲೇಔಟ್, ಬನಶಂಕರಿ, ವಿದ್ಯಾರಣ್ಯಪುರ, ಭುವನೇಶ್ವರಿ ನಗರ, ಬಸವೇಶ್ವರನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ.

ಇಂದು ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಜಯನಗರ, ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಗೌಡನಪಾಳ್ಯ, ವಸಂತ ವಲ್ಲಬ ನಗರ, ಶಾರದ ನಗರ, ಬಿಡಿಎ ಕಾಂಪ್ಲೆಕ್ಸ್, ಕಿಮ್ಸ್ ಕಾಲೇಜು, ಬನಶಂಕರಿ 2ನೇ ಹಂತ, ಕಾವೇರಿನಗರ, ಆನೆಪಾಳ್ಯ, ನೀಲಸಂದ್ರ, ಚಲ್ಲಗಟ್ಟಾ, ಜೈ ಭೀಮಾ ನಗರ, ಹಳೆ ಮಡಿವಾಳ, ಗಾಂಧಿನಗರ ರಸ್ತೆ, ಐಟಿಪಿಎಲ್ ಮುಖ್ಯರಸ್ತೆ, ದೊಡ್ಡ ನೆಕುಂದಿ, ವೀವರ್ಸ್ ಕಾಲೋನಿ, 5ನೇ ಬ್ಲಾಕ್ ಬಿಡಿಎ ಮತ್ತು ದೊಡ್ಡನಾಗಮಂಗಲದಲ್ಲಿ ಪವರ್ ಕಟ್ ಇರಲಿದೆ.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನಾಗಪ್ಪ ಬ್ಲಾಕ್, ವೈಯಾಲೈಕಾವಲ್, ನ್ಯೂ ಬಿಇಎಲ್ ರಸ್ತೆ, ಜೆಪಿ ಪಾರ್ಕ್, ಎಚ್‌ಎಂಟಿ ಲೇಔಟ್, ಕಾನ್ಶಿರಾಂ ನಗರ, ತಿಂಡ್ಲು ಮುಖ್ಯರಸ್ತೆ, ಹೆಸರಘಟ್ಟ ರಸ್ತೆ, ಕೊಡಿಗೇಹಳ್ಳಿ, ಸಂತೋಷನಗರ, ವೀರಸಾಗರ, ವಿದ್ಯಾರಣ್ಯಪುರ, ಹೆಗಡೆ ನಗರ, ಮಾರಸಂದ್ರ, ನೆಲುಕುಂಟೆ, ಅಕ್ಕೆಹಳ್ಳಿ, ಹನಿೂರು, ಹನಿೂರು, ಚಳ್ಳಳ್ಳಿ, ಹಳ್ಳಿ, ಕರ್ಲಾಪುರ ಪಾಳ್ಯ, ಶ್ರೀರಾಮನಹಳ್ಳಿ, ಕೆಎಚ್‌ಬಿ ಕಾಲೋನಿ, ಬಾಗಲೂರು ಮುಖ್ಯರಸ್ತೆ, ಜಕ್ಕೂರು ಮುಖ್ಯರಸ್ತೆ, ಕಾವೇರಿ ನಗರ, ಭುವನೇಶ್ವರಿ ನಗರ, ಕನಕನಗರ, ಸಂತೋಷನಗರ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಪ್ರಶಾಂತ್ ನಗರ, ವಿಎಚ್‌ಬಿಸಿಎಸ್ ಲೇಔಟ್, ಬಾಲಸುಬ್ರಹ್ಮಣ್ಯ ದೇವಸ್ಥಾನ, ಶಂಕರಮಠದಿಂದ ಕುರುಬರಹಳ್ಳಿ ರಸ್ತೆಯಲ್ಲಿ ಕರೆಂಟ್ ಇರುವುದಿಲ್ಲ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಸ್ತೂರಿ ನಗರ, ಉದಯನಗರ, ಸ್ವಾಮಿ ವಿವೇಕಾನಂದ ರಸ್ತೆ, ದೊಮ್ಮಲೂರು ಗ್ರಾಮ, ಗೌತಮಪುರ, ಜೋಗುಪಾಳ್ಯ, ಇಲ್ಪೆ ತೋಪು, ಜಯಮಹಲ್ ವಿಸ್ತರಣೆ, ವಿವೇಕಾನಂದ ನಗರ, ಕೆ ಚನ್ನಸಂದ್ರ, ಗೆದ್ದಲಹಳ್ಳಿ, ಗುಂಜೂರ ಮತ್ತು ಚನ್ನಸದ್ರ ಪೀಡಿತ ಪ್ರದೇಶಗಳಲ್ಲಿ ಇಂದು ಪವರ್ ಕಟ್ ಇರಲಿದೆ.

ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮಾರೇನಹಳ್ಳಿ, ಮೂಡಲಪಾಳ್ಯ, ಗಂಗೊಂಡನಹಳ್ಳಿ ಮುಖ್ಯರಸ್ತೆ, ಬಸವೇಶ್ವರನಗರದ ಕೆಲವು ಭಾಗಗಳು, ಜಡ್ಜಸ್ ಕಾಲೋನಿ, ಭೋವಿ ಕಾಲೋನಿ ಮುಖ್ಯರಸ್ತೆ, ಎನ್‌ಎಚ್‌ಸಿಎಸ್ ಲೇಔಟ್, ಟೀಚರ್ಸ್ ಕಾಲೋನಿ, ಜೆಸಿ ನಗರ, ಅಗ್ರಹಾರದಾಸರಹಳ್ಳಿ, ಕಾಮಾಕ್ಷಿಪಾಳ್ಯ, ಕೆಬ್ಬೇಹಳ್ಳಿ, ಬಾಲಜ್ಯೋತಿ ನಗರ, ಟಿಎಚ್‌ಇಎಲ್‌ಜಿ ಪಾಲಜ್ಯೋತಿ ರಸ್ತೆ, ಉಳ್ಳಾಲ ನಗರ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಕುವೆಂಪು ಮುಖ್ಯರಸ್ತೆ, ಗಂಗಾನಗರ, ಬಿಇಎಲ್ 1ನೇ ಹಂತ, ಬಿಇಎಲ್ 2ನೇ ಹಂತ, ಅಂಬೇಡ್ಕರ್ನಗರ ಮತ್ತು ಬಿಡಿಎ ಕಾಲೋನಿಯಲ್ಲಿ ಪವರ್ ಕಟ್ ಇರಲಿದೆ.

ಬುಧವಾರ ಪವರ್ ಕಟ್ ಇರುವ ಪ್ರದೇಶಗಳು: ಬೆಂಗಳೂರಿನ ದಕ್ಷಿಣ ವಲಯದಲ್ಲಿ ನಾಳೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬಿಜಿ ರಸ್ತೆ, ಸಿಂಧಿ ಆಸ್ಪತ್ರೆ, ಸಿದ್ದಯ್ಯ ರಸ್ತೆ, ಲಾಲ್‌ಬಾಗ್ ರಸ್ತೆ, ಸುಧಾಮನಗರ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ಜರಗನಹಳ್ಳಿ, ಕೆಆರ್ ರಸ್ತೆ, ಕಿಮ್ಸ್ ಕಾಲೇಜು ರಸ್ತೆ, ಮಾರ್ಥಾಸ್ ಆಸ್ಪತ್ರೆ ರಸ್ತೆ, ಉತ್ತರಹಳ್ಳಿ ವೃತ್ತ, ಈಜಿಪುರ, ಚಿಕ್ಕ ಆಡುಗೋಡಿ, ಬೃಂದಾವನ ನಗರ, ಪಾಣತ್ತೂರು ಮುಖ್ಯ ರಸ್ತೆ, ಕುಂದಲಹಳ್ಳಿ ಗ್ರಾಮ, ವರ್ತೂರು ರಸ್ತೆ, ಮಾರತಹಳ್ಳಿ, ಆನಂದ ನಗರ, ಸುಂತ್ರುತಿ ನಗರ, ಸೇವಾಶ್ರಮ ನಗರ, ಕಾಳೇನ ಅಗ್ರಹಾರ ಮತ್ತು ವಡ್ಡರಪಾಳ್ಯದಲ್ಲಿ ಕರೆಂಟ್ ಇರುವುದಿಲ್ಲ.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನ್ಯೂ ಬಿಇಎಲ್ ರಸ್ತೆ, ಬಿಕೆ ನಗರ, ಮೋಹನ್ ಕುಮಾರ್ ನಗರ, ಪಂಪಾ ನಗರ, ಎಂಎಸ್ ಪಾಳ್ಯ, ಕೊಡಿಗೇಹಳ್ಳಿ ಟಾಟಾನಗರ, ದೇವಿ ನಗರ, ಲೊಟ್ಟೆಗೊಲ್ಲಹಳ್ಳಿ, ಸಾಯಿನಗರ 2ನೇ ಹಂತ, ಕೆಎಚ್‌ಬಿ ಕಾಲೋನಿ, ಭುವನೇಶ್ವರಿ ನಗರ, ಕನಕ ನಗರ ಮತ್ತು ಕಲ್ಯಾಣ ನಗರದಲ್ಲಿ ಪವರ್ ಕಟ್ ಇರಲಿದೆ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸುದ್ದಗುಂಟೆ ಪಾಳ್ಯ, ಎ ನಾರಾಯಣಪುರ, ದೂರವಾಣಿ ನಗರ, ಕೆಜಿ ಪುರ ಮುಖ್ಯರಸ್ತೆ, ಉದಯನಗರ, ಕೆಜಿ ಪುರ, ಗೌತಮಪುರ, ಜೋಗುಪಾಳ್ಯ, ಇಲ್ಪೆ ತೋಪು, ಗೋವಿಂದಪುರ, ರಷದ್ ನಗರ, ಎಚ್‌ಬಿಆರ್, ಅಯ್ಯಪ್ಪನಗರದಲ್ಲಿ ಕರೆಂಟ್ ಇರುವುದಿಲ್ಲ.

ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸರಸ್ವತಿ ನಗರ, ಮಾರೇನಹಳ್ಳಿ, ಮೂಡಲಪಾಳ್ಯ, ಗಂಗೊಂಡನಹಳ್ಳಿ ಮುಖ್ಯರಸ್ತೆ, ಬಸವೇಶ್ವರನಗರ, ನ್ಯಾಯಾಧೀಶರ ಕಾಲೋನಿ, ಭೋವಿ ಕಾಲೋನಿ ಮುಖ್ಯರಸ್ತೆ, ಶಿಕ್ಷಕರ ಕಾಲೋನಿ, ಜೆಸಿ ನಗರ, ಅಗ್ರಹಾರದಾಸರಹಳ್ಳಿ, ಕಾಮಾಕ್ಷಿಪಾಳ್ಯ, ಹನುಮಂತರಾಯನ ಪಾಳ್ಯ, ಅಮರಜ್ಯೋತಿ ರಸ್ತೆ, ವಿದ್ಯಾಪೀಠದ ರಸ್ತೆ, ವೀರಸಂದ್ರ, ಕೆಂಗೇರಿ ಮುಖ್ಯರಸ್ತೆ, ದುಬಾಸಿಪಾಳ್ಯ, ಮಲ್ಲತ್ತಹಳ್ಳಿ ಲೇಔಟ್ ಮತ್ತು ಭವಾನಿನಗರದಲ್ಲಿ ಪವರ್ ಕಟ್ ಇರಲಿದೆ.

ಇದನ್ನೂ ಓದಿ: Rajesh: ಹಿರಿಯ ನಟ ರಾಜೇಶ್​ ಆರೋಗ್ಯ ಸ್ಥಿತಿ ಗಂಭೀರ; ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು

Shocking Video: ಕೆಳಗೆ ಬಿದ್ದ ಬಟ್ಟೆ ತರಲು ಮಗನನ್ನು ಸೀರೆಗೆ ಕಟ್ಟಿ 10ನೇ ಮಹಡಿಯಿಂದ ನೇತಾಡಿಸಿದ ತಾಯಿ!

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ