AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold and Silver Price: ಚಿನ್ನ ಇಳಿಕೆ, ಬೆಳ್ಳಿ ಬೆಲೆ ಏರಿಕೆ; ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿನ ದರ ವಿವರ ಹೀಗಿದೆ

Gold Rate Today: ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 46,300 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,63,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 5,100 ರೂಪಾಯಿ ಇಳಿಕೆ ಆಗಿದೆ.

Gold and Silver Price: ಚಿನ್ನ ಇಳಿಕೆ, ಬೆಳ್ಳಿ ಬೆಲೆ ಏರಿಕೆ; ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿನ ದರ ವಿವರ ಹೀಗಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Feb 15, 2022 | 7:37 AM

Share

Gold and Silver Price Today| ಬೆಂಗಳೂರು: ಮದುವೆ ಅಥವಾ ಇನ್ನಿತರ ಸಮಾರಂಭಗಳು ಎದುರಿಗಿರುವಾಗ ಚಿನ್ನ ಖರೀದಿಸುವುದು ಒಂದು ರೀತಿಯ ವಾಡಿಕೆಯಾಗಿ ಪರಿಣಮಿಸಿದೆ. ಸಮಾರಂಭಗಳ ನೆಪದಲ್ಲಿ ಒಂದಷ್ಟು ಚಿನ್ನದ ಒಡವೆಗಳನ್ನು ಕೊಂಡಕೊಂಡರೆ ಮತ್ತಷ್ಟು ಬೆಳ್ಳಿ ಒಡವೆಗಳನ್ನು ಖರೀದಿಸುವುದು ಇದೆ. ಚಿನ್ನ, ಬೆಳ್ಳಿ ಎಂದರೆ ಎಲ್ಲರಿಗೂ ಪ್ರೀತಿ ಅದರಲ್ಲೂ ಮಹಿಳೆಯರಿಗೆ(Women) ಆಭರಣದ ವಿಚಾರಕ್ಕೆ ಬಂದಾಗ ಕೊಂಚ ಜಾಸ್ತಿಯೇ ವ್ಯಾಮೋಹ ಇರುತ್ತದೆ. ಹಾಗಿರುವಾಗ ಚಿನ್ನದ ಬೆಲೆ ಇಳಿಕೆಯತ್ತ ಸಾಗಿರಬೇಕು ಎಂಬ ಆಸೆಯೂ ತಪ್ಪಲ್ಲ. ಆದರೆ ದೈನಂದಿನ ದರ ಬದಲಾವಣೆಯಲ್ಲಿ ಚಿನ್ನಾಭರಣ ಬೆಲೆ ಏರಿಳಿತ ಕಾಣುತ್ತಿರುವುದು ಸಹಜ.  ಇಂದು (ಫೆಬ್ರವರಿ 15, ಮಂಗಳವಾರ) ಚಿನ್ನದ ದರ (Gold Price) ಇಳಿಕೆಯಾಗಿದೆ. ಬೆಳ್ಳಿ ದರ (Silver Price) ಕೂಡ ಇಳಿಕೆಯತ್ತ ಸಾಗಿದೆ. ಇಂದು ಪ್ರಮುಖ ನಗರಗಳ ಮಾರುಕಟ್ಟೆಯಲ್ಲಿ ಆಭರಣದ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ (Bangalore Gold Price)

ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 46,300 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,63,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 5,100 ರೂಪಾಯಿ ಇಳಿಕೆ ಆಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 50,510 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,05,100 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 5,500 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿ ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 68,600 ರೂಪಾಯಿ ದಾಖಲಾಗಿದೆ. ಸುಮಾರು 1,200 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.

ಚೆನ್ನೈನಲ್ಲಿ ಚಿನ್ನ, ಬೆಳ್ಳಿ ದರ (Chennai Gold Price)

ಚೆನ್ನೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 46,950 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,69,500 ರೂಪಾಯಿ ನಿಗದಿಯಾಗಿದೆ. ಸುಮಾರು 2,000 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 51,220 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,12,200 ರೂಪಾಯಿ ನಿಗದಿಯಾಗಿದೆ. ಸುಮಾರು 2,200 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಚೆನ್ನೈನಲ್ಲಿ ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದು ಕೆಜಿ ಬೆಳ್ಳಿಗೆ 68,600 ರೂಪಾಯಿ ನಿಗದಿಯಾಗಿದೆ. ಸುಮಾರು 1,200 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.

ಹೈದರಾಬಾದ್​ನಲ್ಲಿ ಚಿನ್ನ, ಬೆಳ್ಳಿ ದರ (Hyderabad Gold Price)

ಹೈದರಾಬಾದ್​ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 46,300 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,63,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 5,100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 50,510 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,05,100 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 5,500 ರೂಪಾಯಿ ಇಳಿಕೆ ಆಗಿದೆ. ಅದೇ ರೀತಿ ಬೆಳ್ಳಿ ದರದಲ್ಲಿ ಇಂದು ಕೊಂಚ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 68,600 ರೂಪಾಯಿ ನಿಗದಿಯಾಗಿದೆ. ಸುಮಾರು 1,200 ರೂಪಾಯಿಯಷ್ಟು ಏರಿಕೆ ಆಗಿದೆ.

ಮುಂಬೈನಲ್ಲಿ ಚಿನ್ನ, ಬೆಳ್ಳಿ ದರ (Mumbai Gold price)

ಮುಂಬೈನಲ್ಲಿ ಇಂದು 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 46,300 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,63,000 ರೂಪಾಯಿ ನಿಗದಿಯಾಗಿದೆ. ಸುಮಾರು 5,100 ರೂಪಾಯಿಯಷ್ಟು ಇಳಿಕೆ ಆಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 50,510 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,05,100 ರೂಪಾಯಿ ನಿಗದಿಯಾಗಿದೆ. ಸುಮಾರು 5,500 ರೂಪಾಯಿಯಷ್ಟು ಇಳಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಕೊಂಚ ಏರಿಕೆ ಕಂಡಿದ್ದು, ಕೆಜಿ ಬೆಳ್ಳಿಗೆ 63,800 ರೂಪಾಯಿ ನಿಗದಿಯಾಗಿದೆ. ಸುಮಾರು 800 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.

ಇದನ್ನೂ ಓದಿ: Gold and Silver Rate: ಬೆಂಗಳೂರು, ಚೆನ್ನೈ ಸೇರಿ ಭಾರತದ ಪ್ರಮುಖ ನಗರಗಳಲ್ಲಿ ಫೆಬ್ರವರಿ 14ರ ಚಿನ್ನ, ಬೆಳ್ಳಿ ದರಗಳು ಇಲ್ಲಿದೆ

Gold and Silver Price: ಪ್ರೀತಿಪಾತ್ರರಿಗಾಗಿ ಚಿನ್ನದ ಉಂಗುರ ಕೊಳ್ಳುವ ಪ್ಲಾನ್​ ಇದೆಯೇ? ಇಲ್ಲಿದೆ ಇಂದಿನ ಚಿನ್ನ, ಬೆಳ್ಳಿ ದರ

Published On - 7:27 am, Tue, 15 February 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ