ಬೆಂಗಳೂರು, ಜನವರಿ 09: ಬೆಂಗಳೂರು ಸೇರಿದ್ದಂತೆ ಕರ್ನಾಟಕದಲ್ಲಿನ ವೈದ್ಯಕೀಯ ಕಾಲೇಜುಗಳು ತಾವು ಮಾಡಿದ್ದೆ ಆಟ, ಹೇಳಿದ್ದೆ ಪಾಠ ಎನ್ನುವಂತಾಗಿತ್ತು. ಉತ್ತಮ ಸೌಲಭ್ಯ ನೀಡುವಲ್ಲಿ ಹಿಂದೇಟು ಹಾಕಿದ್ದವು. ಮೂಲಭೂತ ಸೌಕರ್ಯ, ಸಿಬ್ಬಂದಿ ಕೊರತೆ, ಕಳಪೆ ಉಪಕರಣಗಳು, ರೋಗಿಗಳ ದತ್ತಾಂಶಗಳನ್ನು ಸರಿಯಾಗಿ ನಿರ್ವಹಿಸದ ರಾಜ್ಯದ 27 ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಈ ಹಿಂದೆ ದಂಡ ವಿಧಿಸಿ ಶಾಕ್ ನೀಡಿತ್ತು. ಈ ಬೆನ್ನೆಲ್ಲೇ ಇದೀಗ ಮತ್ತೆ ರಾಜ್ಯದ ಮೆಡಿಕಲ್ ಕಾಲೇಜುಗಳಿಗೆ ಚಾಟಿ ಬೀಸಲು ರಾಜೀವ್ ಗಾಂಧಿ ವಿಜ್ಞಾನಗಳ ವಿಶ್ವವಿದ್ಯಾಲಯ (Rajiv Gandhi University) ಮುಂದಾಗಿದೆ.
ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ಹಾಗೂ ವಿಜ್ಞಾನಗಳ ವಿಶ್ವವಿದ್ಯಾಲಯ ಮೂಲಭೂತ ಸೌಕರ್ಯ ಕೊರತೆ ಇರುವ ಕಾಲೇಜುಗಳಿಗೆ ಚಾಟಿ ಬೀಸಲು ಮುಂದಾಗಿದೆ.
ಇದನ್ನೂ ಓದಿ: ರಾಮನಗರ ರಾಜೀವ್ ಗಾಂಧಿ ವಿವಿ ಸ್ಥಳಾಂತರ ಬೇಡ: ಹೆಚ್ಡಿ ಕುಮಾರಸ್ವಾಮಿ
ಮೂಲಭೂತ ಸೌಕರ್ಯ ಕೊರತೆ ಹಾಗೂ ಸರಿಯಾದ ಸೇವೆ ನೀಡದೆ ಕಳ್ಳಾಟವಾಡುತ್ತಿರುವ ಮೆಡಿಕಲ್ ಕಾಲೇಜುಗಳ ವಿರುದ್ಧ ಮತ್ತೆ ಎಂಎನ್ಸಿಗೆ ವರದಿ ನೀಡಲು ಆರೋಗ್ಯ ವಿಶ್ವವಿದ್ಯಾಲಯ ಮುಂದಾಗಿದೆ. ಈ ಹಿಂದೆ ಎಂಎನ್ಸಿಗೆ ರಾಜ್ಯದ 27 ಮೆಡಿಕಲ್ ಕಾಲೇಜಿಗೆ ನೋಟಿಸ್ ನೀಡಿ ದಂಡ ಹಾಕಿತ್ತು. ಈ ಬಳಿಕವು ಕೆಲವು ಮೆಡಿಕಲ್ ಕಾಲೇಜಿಗಳು ಮತ್ತೆ ಕಳ್ಳಾಟವಾಡುತ್ತಿವೆ. ಸಾಕಷ್ಟು ಮೆಡಿಕಲ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಕೊರತೆ, ಸಿಬ್ಬಂದಿ ಕೊರತೆ ಹಾಗೂ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಹೀಗಾಗಿ ಇತಂಹ ಕಾಲೇಜುಗಳ ವರದಿ ಪಡೆಯಲು ಆರೋಗ್ಯ ವಿವಿ ಮುಂದಾಗಿದೆ.
ಮೂಲಭೂತ ಸೌಕರ್ಯ ಕೊರತೆ ಇರುವ ಕಾಲೇಜುಗಳ ಮೆಡಿಕಲ್ ಸೀಟ್ ಕಡಿತಕ್ಕೆ MNC ಗೆ ವರದಿ ನೀಡಲು ಕೂಡಾ ಪ್ಲಾನ್ ಮಾಡಿದೆ. ಮೂಲಭೂತ ಸೌಕರ್ಯ, ಸಿಬ್ಬಂದಿ ಕೊರತೆ, ಕಳಪೆ ಉಪಕರಣಗಳು, ರೋಗಿಗಳ ದತ್ತಾಂಶಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಈ ಹಿನ್ನಲೆ ರಾಜ್ಯದ ಮೆಡಿಕಲ್ ಕಾಲೇಜುಗಳ ಸಂಪೂರ್ಣ ಮಾಹಿತಿಯನ್ನ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಪಡೆಯಲು ಮುಂದಾಗಿದೆ. ಒಂದೊಮ್ಮೆ ಮತ್ತೆ ಮೆಡಿಕಲ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಕೊರತೆ ಸಮಸ್ಯೆ ಕಂಡು ಬಂದರೆ NMC ಮೆಡಿಕಲ್ ಕಾಲೇಜುಗಳ ಸೀಟ್ಗಳಿಗೂ ಕತ್ತರಿ ಹಾಕಲಿದ್ದು, ಸದ್ಯ ಆರೋಗ್ಯ ವಿವಿ ಎಲ್ಲಾ ಮೆಡಿಕಲ್ ಕಾಲೇಜುಗಳ ಮಾಹಿತಿ ಕಲೆ ಹಾಕುತ್ತಿದೆ.
ಇದನ್ನೂ ಓದಿ: ರಾಯಚೂರಿನಲ್ಲಿ ಬಾಣಂತಿಯರ ಸರಣಿ ಸಾವು: ರಿಮ್ಸ್ ಆಸ್ಪತ್ರೆಗೆ ಜೆಡಿಎಸ್ ನಿಯೋಗ ಭೇಟಿ, ರಿಯಾಲಿಟಿ ಚೆಕ್
ಸರ್ಕಾರಿ ಮೆಡಿಕಲ್ ಕಾಲೇಜು ಸೇರಿ ಹಲವು ಖಾಸಗಿ ಕಾಲೇಜುಗಳು ಕನಿಷ್ಠ ಮಾನದಂಡ ಪಾಲನೇ ಮಾಡುತ್ತಿಲ್ಲ. ಹೀಗಾಗಿ ಈಗ ರಾಜೀವ್ ಗಾಂಧಿ ಹೆಲ್ತ್ ವಿಶ್ವವಿದ್ಯಾಲಯ ಕೂಡಾ ಈ ಬಗ್ಗೆ ವೈದ್ಯಕೀಯ ಕಾಲೇಜುಗಳಿಗೆ ಚಾಟಿ ಬೀಸಿದೆ. ಇನ್ನಾದ್ರೂ ಸರ್ಕಾರ ವೈದ್ಯಕೀಯ ಕಾಲೇಜುಗಳಲ್ಲಿ ಎಲ್ಲೆಲ್ಲಿ ಖಾಲಿ ಹುದ್ದೆ ಇದೆ ಅದನ್ನ ಭರ್ತಿ ಮಾಡಬೇಕಿದ್ದು, ಖಾಸಗಿ ವೈದ್ಯಕೀಯ ಕಾಲೇಜುಗಳು ಇನ್ನಾದ್ರೂ ಉತ್ತಮ ಮೂಲಭೂತ ಸೌಕರ್ಯದ ಕಡೆ ಗಮನಕೊಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.