ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಸಿದ್ದರಾಮಯ್ಯ ಆಪ್ತನಿಗೆ ಒಲಿದ ಟಿಕೆಟ್‌

ಮೈಸೂರು ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತನಾಗಿದ್ದ C.N.ಮಂಜೇಗೌಡರಿಗೆ ಈ ಬಾರಿ ಟಿಕಿಟ್ ನೀಡಲಾಗಿದೆ. ನಿನ್ನೆಯಷ್ಟೇ ಮೈಸೂರಿನಲ್ಲಿ ಜೆಡಿಎಸ್ ಸೇರಿದ್ದ ಮಂಜೇಗೌಡರಿಗೆ ಟಿಕೆಟ್ ಒಲಿದು ಬಂದಿದೆ.

ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಸಿದ್ದರಾಮಯ್ಯ ಆಪ್ತನಿಗೆ ಒಲಿದ ಟಿಕೆಟ್‌
ಜೆಡಿಎಸ್


ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸೋಕೆ ಇವತ್ತು ಕೊನೇ ದಿನ. ಈಗಾಗಲೇ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್​ ಬಹುತೇಕ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಸದ್ಯ ಇಂದು ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ.

ಮೈಸೂರು ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತನಾಗಿದ್ದ C.N.ಮಂಜೇಗೌಡರಿಗೆ ಈ ಬಾರಿ ಟಿಕಿಟ್ ನೀಡಲಾಗಿದೆ. ನಿನ್ನೆಯಷ್ಟೇ ಮೈಸೂರಿನಲ್ಲಿ ಜೆಡಿಎಸ್ ಸೇರಿದ್ದ ಮಂಜೇಗೌಡರಿಗೆ ಟಿಕೆಟ್ ಒಲಿದು ಬಂದಿದೆ. ಆದರೆ ಸಂದೇಶ್ ನಾಗರಾಜ್‌ಗೆ ಜೆಡಿಎಸ್‌ ಪಕ್ಷದ ಟಿಕೆಟ್‌ ಕೈತಪ್ಪಿದೆ. ಕೊನೆ ಕ್ಷಣದವರಿಗೂ JDS ಟಿಕೆಟ್‌ಗಾಗಿ ಸಂದೇಶ್ ಸರ್ಕಸ್‌ ನಡೆಸಿದ್ದರು. ನಿನ್ನೆಯೂ ಹೆಚ್‌ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದರು. ಆದರೂ ಸಂದೇಶ್ ನಾಗರಾಜ್‌ಗೆ ಜೆಡಿಎಸ್‌ ಟಿಕೆಟ್‌ ಸಿಕ್ಕಿಲ್ಲ. ಜೆಡಿಎಸ್‌ ಪಕ್ಷ ಅಳೆದು ತೂಗಿ ಮಂಜೇಗೌಡನಿಗೆ ಟಿಕೆಟ್ ನೀಡಿದೆ. ಬಿಜೆಪಿಯ ಟಿಕೆಟ್ ಸಹ ಸಿಗದೆ ಸಂದೇಶ್ ನಾಗರಾಜ್ ಅತಂತ್ರರಾಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸುವ ಕನಸು ಭಗ್ನವಾಗಿದೆ.

ವಿಧಾನ ಪರಿಷತ್ನ ಹಾಲಿ ಜೆಡಿಎಸ್ ಸದಸ್ಯ ಸಂದೇಶ್ ನಾಗರಾಜ್ ಪಕ್ಷದಿಂದ ಒಂದು ಹೆಜ್ಜೆ ಹೊರ ಇಟ್ಟಿದ್ರು. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸೋದಾಗಿ ಘೋಷಣೆಯನ್ನೂ ಮಾಡಿದ್ರು. ಆದ್ರೆ ಬಿಜೆಪಿ ಕಲಿಗಳು ಅದೇಕೋ ಸಂದೇಶ್ಗೆ ಕೈಕೊಟ್ಟಿದ್ದಾರೆ. ಹೀಗಾಗಿ ಸಂದೇಶ್ ಮತ್ತೆ ಜೆಡಿಎಸ್ ಕದ ತಟ್ಟಿದ್ದು, ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಆದ್ರೆ ಈಗ ಜೆಡಿಎಸ್ನಲ್ಲೂ ಟಿಕೆಟ್ ಸಿಗದೆ ಅತಂತ್ರರಾಗಿದ್ದಾರೆ.

7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಜೆಡಿಎಸ್‌ ಪಕ್ಷ
ಮಂಡ್ಯ ಕ್ಷೇತ್ರ-ಅಪ್ಪಾಜಿಗೌಡ
ತುಮಕೂರು ಕ್ಷೇತ್ರ-ಅನಿಲ್ ಕುಮಾರ್‌
ಮೈಸೂರು ಕ್ಷೇತ್ರ-ಸಿ.ಎನ್.ಮಂಜೇಗೌಡ
ಕೋಲಾರ ಕ್ಷೇತ್ರ-ವಕ್ಕಲೇರಿ ರಾಮು
ಬೆಂಗಳೂರು ಗ್ರಾಮಾಂತರ-ಹೆಚ್.ಎಂ.ರಮೇಶ್ ಗೌಡ
ಕೊಡಗು ಕ್ಷೇತ್ರ-ಹೆಚ್‌.ಯು.ಇಸಾಕ್ ಖಾನ್‌
ಹಾಸನ ಕ್ಷೇತ್ರ-ಸೂರಜ್ ರೇವಣ್ಣ

ಇದನ್ನೂ ಓದಿ: Karnataka Congress: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಪ್ರಕಟ

Click on your DTH Provider to Add TV9 Kannada