ಬೆಂಗಳೂರಿನಲ್ಲಿ ನೀರಿನ ದಾಹ ತಣಿಸಲು 128 ವರ್ಷಗಳ ಹಳೆಯದಾದ ಸೋಲದೇವನಹಳ್ಳಿ ಪಂಪ್ ಸ್ಟೇಷನ್ಗೆ ಮರು ಜೀವ
ಬೆಂಗಳೂರು ನೀರು ಸರಬರಾಜು ಮತ್ತು ಒಳಚಂಡಿ ಮಂಡಳಿ ಸೋಲದೇವನಹಳ್ಳಿಯಲ್ಲಿರುವ 128 ವರ್ಷಗಳ ಹಳೆಯದಾದ ಪಂಪ್ ಸ್ಟೇಷನ್ ಅನ್ನು ಮರು ಪ್ರಾರಂಭಿಸಲು ನಿರ್ಧರಿಸಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಏಪ್ರಿಲ್ 20 ರಂದು ಪಂಪ ಸ್ಟೇಷನ್ ಕಾರ್ಯಾರಂಭ ಮಾಡಲಿದೆ.
ಬೆಂಗಳೂರು, ಏಪ್ರಿಲ್ 15: ನೀರಿಗಾಗಿ ಬೆಂಗಳೂರಿನ (Bengaluru) ಜನರು ಪರದಾಡುತ್ತಿದ್ದಾರೆ. ಉದ್ಭವವಾಗಿರುವ ನೀರಿನ ಸಮಸ್ಯೆಯನ್ನು ಬಗೆಹರಲಿಸಲು ಸರ್ಕಾರ ಸಾಕಷ್ಟು ಪ್ರಯತ್ನ ಪಡುತ್ತಿದೆ. ಈ ಪ್ರಯತ್ನದ ಒಂದು ಭಾಗವೆಂಬಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚಂಡಿ ಮಂಡಳಿ (BWSSB) ಸೋಲದೇವನಹಳ್ಳಿಯಲ್ಲಿರುವ 128 ವರ್ಷಗಳ ಹಳೆಯದಾದ ಪಂಪ್ ಸ್ಟೇಷನ್ (Soladevanahalli Pump Station) ಅನ್ನು ಮರು ಪ್ರಾರಂಭಿಸಲು ನಿರ್ಧರಿಸಿದೆ.
ಅಂದುಕೊಂಡಂತೆ ಎಲ್ಲವು ನಡೆದರೆ ಏಪ್ರಿಲ್ 20 ರಂದು ಪಂಪ ಸ್ಟೇಷನ್ ಕಾರ್ಯಾರಂಭ ಮಾಡಲಿದೆ. ಈ ಪಂಪ ಸ್ಟೇಷನ್ ಮುಖಾಂತರ ಹೇಸರಗಟ್ಟ ಕೆರೆಯಿಂದ 0.3 ಟಿಎಂಸಿ ನೀರನ್ನು ನಗರಕ್ಕೆ ಸರಬರಾಜು ಮಾಡಬಹುದು.
ಬೆಂಗಳೂರು ಸುಸಜ್ಜಿತ ನೀರು ಸರಬರಾಜು ವ್ಯವಸ್ಥೆ ಹೊಂದಿರುವ ದೇಶದ ಎರಡನೇ ನಗರವಾಗಿದೆ. 1873ರಲ್ಲಿ ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ 1857-77 ಎರಡೂವರೆ ವರ್ಷಗಳ ಕಾಲ ಆವರಿಸಿದ ಬರಗಾಲದಿಂದ ನೀರಿನ ಮೂಲಗಳು ಬತ್ತಿ ಹೋದವು.
ಇದನ್ನೂ ಓದಿ: ಈ ಸಣ್ಣ ವಿಧಾನ ಅನುಸರಿಸಿ ದಿನಕ್ಕೆ 600 ಲೀಟರ್ ನೀರು ಉಳಿಸಿ: ಬೆಂಗಳೂರು ವೈದ್ಯೆಯ ಸಲಹೆ ಈಗ ವೈರಲ್
ಈ ಸಮಯದಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕೆ ಶೇಶಾದ್ರಿ ಅಯ್ಯರ ಅವರು ಒಂದು ಒಳ್ಳೆಯ ಯೋಜನೆಯನ್ನು ರೂಪಿಸಿದರು. ಅರ್ಕಾವತಿ ನದಿಯಿಂದ ಹೇಸರಘಟ್ಟ ಕೆರೆಗೆ ನೀರು ಹರಿಸಲು ನಿರ್ಧರಿಸಿದರು. ಈ ಯೋಜನೆಗೆ ಮಹರಾಜ ಚಾಮರಾಜೇಂದ್ರ ಒಡೆಯರ ಅವರ ಹೆಸರು ಇಡಲಾಯಿತು.
ಪ್ರಸ್ತುತ ಹೇಸರಘಟ್ಟ ಕೆರೆಯಲ್ಲಿ 0.3 ಟಿಎಂಸಿ ನೀರು ಲಭ್ಯವಿದೆ. ಹೀಗಾಗಿ ಸೋಲದೇವನಹಳ್ಳಿ ಪಂಪಿಂಗ್ ಸ್ಟೇಷನ್ನಲ್ಲಿ ನೀರನ್ನು ಸಂಸ್ಕರಿಸಿ ಎಂಇಐ ಲೇಔಟ್ನಲ್ಲಿರುವ ಹೇಸರಘಟ್ಟ ಕೆರೆಯಲ್ಲಿ ಸಂಗ್ರಹಿಸಲಾಗುವುದು. ಬಳಿಕ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುವುದು. 128 ವರ್ಷಗಳು ಹಳೆಯದಾದ ಪಂಪಿಂಗ್ ಸ್ಟೇಷನ್ ಅನ್ನು ಏಪ್ರಿಲ್ 20 ರಂದು ಮರು ಪ್ರಾರಂಭಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ವಿ ರಾಮಪ್ರಸಾತ್ ಮನೋಹರ್ ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:45 am, Mon, 15 April 24