ಶಕ್ತಿ ಯೋಜನೆ ಮಧ್ಯೆಯೂ ಬಿಎಂಟಿಸಿಗೆ ಭರ್ಜರಿ ಆದಾಯ, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳ

| Updated By: Ganapathi Sharma

Updated on: Aug 21, 2024 | 7:05 AM

BMTC Income Raise: ಮಹಿಳೆಯರಿಗೆ ಉಚಿತ ಟಿಕೆಟ್ ಭಾಗ್ಯದ ನಡುವೆಯೂ ಬಿಎಂಟಿಸಿ ಭರ್ಜರಿ ಆದಾಯದಲ್ಲಿದೆ. ಶಕ್ತಿ ಯೋಜನೆಯ ಮುಂಚೆ ತಿಂಗಳಿಗೆ ನಾಲ್ಕುವರೆ ಕೋಟಿ ರೂಪಾಯಿ ಆದಾಯವಿದ್ದ ಬಿಎಂಟಿಸಿ, ಇದೀಗ ಹೆಚ್ಚುವರಿ ಬಸ್​​ಗಳಿಂದ ಇನ್ನಷ್ಟು ಕೋಟಿ ರೂಪಾಯಿಗಳನ್ನು ನಿಗಮದ ಬೊಕ್ಕಸಕ್ಕೆ ತುಂಬಿಸಿಕೊಳ್ಳುತ್ತಿದೆ.

ಶಕ್ತಿ ಯೋಜನೆ ಮಧ್ಯೆಯೂ ಬಿಎಂಟಿಸಿಗೆ ಭರ್ಜರಿ ಆದಾಯ, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳ
ಬಿಎಂಟಿಸಿ ಬಸ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು, ಆಗಸ್ಟ್ 21: ಬೆಂಗಳೂರಿನ ಸಂಚಾರನಾಡಿ ಬಿಎಂಟಿಸಿಗೆ ಭರ್ಜರಿ ಆದಾಯದಿಂದಾಗಿ ಖಜಾನೆ ತುಂಬಿ ತುಳುಕುತ್ತಿದೆ. ಶಕ್ತಿ ಯೋಜನೆ ಮಧ್ಯೆಯೂ ಬಿಎಂಟಿಸಿಯಲ್ಲಿ ಸಂಚಾರ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಈ ಹಿಂದೆ ತಿಂಗಳಿಗೆ ನಾಲ್ಕೂವರೆ ಕೋಟಿ ರೂಪಾಯಿ ಆದಾಯ ನಿಗಮಕ್ಕೆ ಬರುತ್ತಿತ್ತು. ಅದರೆ ಶಕ್ತಿ ಯೋಜನೆ ಬಳಿಕ ಹಾಗೂ ಹೆಚ್ಚುವರಿ ಬಸ್​​ಗಳ ಸೇವೆಯಿಂದಾಗಿ ಇದೀಗ ಪ್ರತಿ ತಿಂಗಳು 6 ಕೋಟಿ ರೂಪಾಯಿ ಆದಾಯ ಬರುತ್ತಿದೆ.

ಪ್ರಯಾಣಿಕರ ಸಂಖ್ಯೆ ಏರಿಕೆ ಕಂಡಂತೆ, ನಗರದ ಹಲವು ಏರಿಯಾಗಳಿಗೆ ಹೆಚ್ಚುವರಿ 200 ಹೊಸ ಬಸ್​ಗಳನ್ನುಬಿಡಲಾಗಿದೆ. ಅವುಗಳು ಹೆಚ್ಚುವರಿ ಮಾರ್ಗವಾಗಿ ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ. ಈ ಹಿನ್ನೆಲೆ ನಿಗಮದ ಖಜಾನೆಯೂ ತುಂಬಿತಿದೆ.

ಹೆಚ್ಚುವರಿ ಬಸ್​ಗಳು 2 ಸಾವಿರಕ್ಕೂ ಅಧಿಕ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು, ಪಾಸ್, ಫ್ರೀ ಟಿಕೆಟ್ ಹೊರತುಪಡಿಸಿ, ದಿನಕ್ಕೆ 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಹಣ ಕೊಟ್ಟು ಸಂಚಾರ ಮಾಡುತ್ತಿದ್ದಾರೆ ಎಂದು ಬಿಎಂಟಿಸಿಯ ಕಾರ್ಯಾಚರಣೆ ವಿಭಾಗದ ಮುಖ್ಯ ‌ಸಂಚಾರ ವ್ಯವಸ್ಥಾಪಕ ಪ್ರಭಾಕರ್ ತಿಳಿಸಿದ್ದಾರೆ.

ಬಿಎಂಟಿಸಿಯ 50 ಡಿಪೋಗಳಿಂದ, ನಗರದಲ್ಲಿ ನಿತ್ಯ 5 ಸಾವಿರದ 700 ಬಸ್ ಗಳು ಕಾರ್ಯಾಚರಣೆ ಮಾಡುತ್ತಿವೆ. 1 ಲಕ್ಷ ಕಿಲೋ ಮೀಟರ್ ವ್ಯಾಪ್ತಿಯ ತನಕ ಸೇವೆ ನೀಡುತ್ತಿವೆ. ಸುಮಾರು 50 ಲಕ್ಷಕ್ಕೂ ಹೆಚ್ಚು ಜನ ಬಿಎಂಟಿಸಿಗೆ ಬಸ್​​ಗಳಲ್ಲಿ ಓಡಾಡುತ್ತಿದ್ದು. ದಿನದಿಂದ ದಿನಕ್ಕೆ ನಿಗಮದ ಖಜಾನೆ ತುಂಬುತ್ತಿದೆ. ಇದು ಶಕ್ತಿ ಯೋಜನೆಗೆ ಇನ್ನಷ್ಟು ಪುಷ್ಠಿ ನೀಡುತ್ತಿದೆ. ಈ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವಕನ ಮರ್ಮಾಂಗ ಕತ್ತರಿಸಿ ಲಿಂಗ ಪರಿವರ್ತಿಸಿದ ಮಂಗಳಮುಖಿಯರು!

ಒಟ್ಟಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ನಡುವೆಯೂ ಭರ್ಜರಿ ಆದಾಯ ಬರುತ್ತಿರುವುದು ನಿಗಮದ ಅಧಿಕಾರಿಗಳಿಗೆ ಖುಷಿ ತಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ