ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ಆರೋಪ ಸಾಬೀತು, ಶಿಕ್ಷೆಯ ಪ್ರಮಾಣ?

| Updated By: ಸಾಧು ಶ್ರೀನಾಥ್​

Updated on: Oct 17, 2022 | 4:31 PM

ಆದಾಯ ಮೀರಿ ಶೇ. 122 ರಷ್ಟು ಆಸ್ತಿ ಗಳಿಕೆ ಆರೋಪ KSFIC ಅಧಿಕಾರಿ ಬಿ.ಸಿ. ಶಾಂತಕುಮಾರ್ ಅವರ ಮೇಲಿತ್ತು. ಮೊದಲು, ಅವರ ವಿರುದ್ಧ ಲೋಕಾಯುಕ್ತ ಕೇಸ್ ದಾಖಲಿಸಿತ್ತು. ಜಾರಿ ನಿರ್ದೇಶನಾಲಯ ಕೂಡಾ ಕೇಸ್ ದಾಖಲಿಸಿತ್ತು. ಸಂಪೂರ್ಣ ಆಸ್ತಿ ವಿವರವನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು .

ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ಆರೋಪ ಸಾಬೀತು, ಶಿಕ್ಷೆಯ ಪ್ರಮಾಣ?
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ಆರೋಪ ಸಾಬೀತು, ಶಿಕ್ಷೆಯ ಪ್ರಮಾಣ?
Follow us on

ಬೆಂಗಳೂರು: ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ (Karnataka State Forest Industrial Corporation Limited-KSFIC) ಅಧಿಕಾರಿ ವಿರುದ್ಧ ಜಾರಿ ನಿರ್ದೇಶನಾಲಯ (ED) ದಾಖಲಿಸಿದ್ದ ಭ್ರಷ್ಟಾಚಾರ (Corruption) ಪ್ರಕರಣದಲ್ಲಿ ಆರೋಪ ಸಾಬೀತಾಗಿದೆ. ನಿಗಮದ ಸಹಾಯಕ ವ್ಯವಸ್ಥಾಪಕ ಬಿ.ಸಿ. ಶಾಂತ ಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು. ಮೊದಲು, ಬಿ.ಸಿ. ಶಾಂತಕುಮಾರ್ ವಿರುದ್ಧ ಲೋಕಾಯುಕ್ತ ಕೇಸ್ ದಾಖಲಾಗಿತ್ತು.

ವಿಶೇಷ ನ್ಯಾಯಾಲದಿಂದ ನಾಳೆ ಶಿಕ್ಷೆಯ ಪ್ರಮಾಣ ಪ್ರಕಟ:

ಆದಾಯ ಮೀರಿ ಶೇ. 122 ರಷ್ಟು ಆಸ್ತಿ ಗಳಿಕೆ ಆರೋಪ ಅವರ ಮೇಲಿತ್ತು. ಜಾರಿ ನಿರ್ದೇಶನಾಲಯ ಕೂಡಾ ಕೇಸ್ ದಾಖಲಿಸಿತ್ತು. ಸಂಪೂರ್ಣ ಆಸ್ತಿ ವಿವರವನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು . 84.42 ಲಕ್ಷ ರೂಪಾಯಿ ಆದಾಯ ಮೀರಿ ಆಸ್ತಿ ಗಳಿಕೆಯನ್ನು ಅವರ ವಿರುದ್ಧ ಆರೋಪಿಸಲಾಗಿತ್ತು. ಇ ಡಿ ಪರ ವಿಶೇಷ ಅಭಿಯೋಜಕ ರಾಜೇಶ್ ರೈ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ಸಿಸಿಹೆಚ್ 48ನೇ ವಿಶೇಷ ನ್ಯಾಯಾಲಯ ನಾಳೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.