AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತಗಳೆಷ್ಟು ? ಇನ್ನೂ ಏಕೆ ದೊರೆತಿಲ್ಲ ಪರಿಹಾರ ? ಇಲ್ಲಿದೆ ಮಾಹಿತಿ

ಬೆಂಗಳೂರಿನ ರಸ್ತೆಗಳಲ್ಲಿ ಕಳೆದ 5 ವರ್ಷಗಳಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ ಶೇ 17 ರಷ್ಟು ಅಪಘಾತಗಳು ಹಾಗೂ ಸಾವು, ಕಳಪೆ ರಸ್ತೆ ಮತ್ತು ಗುಂಡಿಗಳಿಂದ ಸಂಭವಿಸಿವೆ.

ಬೆಂಗಳೂರಿನ ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತಗಳೆಷ್ಟು ? ಇನ್ನೂ ಏಕೆ ದೊರೆತಿಲ್ಲ ಪರಿಹಾರ ? ಇಲ್ಲಿದೆ ಮಾಹಿತಿ
ಸಾಂಧರ್ಬಿಕ ಚಿತ್ರ
TV9 Web
| Edited By: |

Updated on:Oct 17, 2022 | 5:12 PM

Share

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ (Bengaluru) ಇಂದು (ಅ.17) ಸುಜಾತ ಥಿಯೇಟರ್ ಬಳಿ ಹೋಂಡಾ ಆಕ್ಟೀವಾದಲ್ಲಿ ಬರುತ್ತಿದ್ದ ಮಹಿಳೆ ಮೇಲೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಹರಿದು ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.  ಗಂಭೀರವಾಗಿ ಗಾಯಗೊಂಡ ಉಮಾ ಎಂಬುವರು ರಸ್ತೆ ಗುಂಡಿ (Pot hole) ತಪ್ಪಿಸಲು ಹೋಗಿ ಕೆಳಗೆ ಬಿದ್ದಿದ್ದು ಈ ವೇಳೆ ಹಿಂದೆ ಬರುತ್ತಿದ್ದ ಬಸ್ ಮಹಿಳೆಯ ಮೇಲೆ ಹರಿದಿದೆ. ಇವರ ಜೊತೆ ಇದ್ದ ಮಗಳು ವನಿತಾಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಗುಂಡಿಗೆ ಬಿದ್ದು ಬಲಿಯಾಗಿದ್ದು, ಇದೇ ಮೊದಲೇನಲ್ಲ. ಇಂತಹ ಘಟನೆಗಳನ್ನು ಮೇಲಿಂದ ಮೇಲೆ ಕೇಳುತ್ತಿರುತ್ತೇವೆ. ಬೆಂಗಳೂರಿನ ರಸ್ತೆಗಳಲ್ಲಿ ಕಳೆದ 5 ವರ್ಷಗಳಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದು, ಶೇ 17 ರಷ್ಟು ಅಪಘಾತಗಳು ಹಾಗೂ ಸಾವು ಕಳಪೆ ರಸ್ತೆ ಮತ್ತು ಗುಂಡಿಗಳಿಂದ ಆಗಿವೆ. ಕಳೆದ 1 ವರ್ಷದ ಅವಧಿಯಲ್ಲಿ 621 ಅಪಘಾತ ಸಂಭವಿಸಿ ಇದರಲ್ಲಿ 656 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ರಸ್ತೆಗೆ ಗುಂಡಿಯಿಂದಲೇ 10 ಮಂದಿ ಸಾವನ್ನಪ್ಪಿದ್ದಾರೆ.

2019ರಲ್ಲಿ 810 ಅಪಘಾತ ಪ್ರಕರಣಗಳು ಸಂಭವಿಸಿ, 832 ಮಂದಿ ಸಾವನ್ನಪ್ಪಿದ್ದಾರೆ. 2020ರಲ್ಲಿ 632 ಅಪಘಾತ ಸಂಭವಿಸಿ 657 ಜನರು ಸಾವನ್ನಪ್ಪಿದ್ದಾರೆ. 2021ರಲ್ಲಿ 618 ಅಪಘಾತ ಸಂಭವಿಸಿ 651 ಜನರು ಮರಣ ಹೊಂದಿದ್ದಾರೆ. 2022ರಲ್ಲಿ 621 ಅಪಘಾತ ಸಂಭವಿಸಿ 656 ಜನ ಬಲಿಯಾಗಿದ್ದಾರೆ. ಇದರಲ್ಲಿ ಶೇ 17 ರಷ್ಟು ಅಪಘಾತ ರಸ್ತೆ ಗುಂಡಿಯಿಂದ ಸಂಭವಿಸಿವೆ. ವರ್ಷಕ್ಕೆ ಸರಾಸರಿ 30 ಜನ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ.

ಬಿಬಿಎಂಪಿಯಿಂದ ಪರಿಹಾರ

ರಸ್ತೆಗೆ ಬಲಿಯಾದರೆ ಮೃತ ಕುಟುಂಬಕ್ಕೆ 3 ಲಕ್ಷ, ಗಂಭೀರ ಗಾಯಗೊಂಡರೆ 15 ಸಾವಿರ, ಮೂರು ದಿನಕ್ಕಿಂತ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ 10 ಸಾವಿರ ಮತ್ತು ಸಣ್ಣ ಗಾಯಗಳಾದರೆ 5 ಸಾವಿರ ನೀಡುವುದಾಗಿ ಬಿಬಿಎಂಪಿ ತಿಳಿಸಿತ್ತು. ಆದರೆ ರಸ್ತೆ ಗುಂಡಿಗೆ ಬಲಿಯಾದವರ ಕುಟುಂಬಸ್ಥರು ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಮಾಡಿಲ್ಲ.

ಅರ್ಜಿ ಸಲ್ಲಿಸೋದು ಹೇಗೆ..?

ಅಪಘಾತ ನಡೆದ 30 ದಿನದಲ್ಲಿ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ಅರ್ಜಿ ಸಲ್ಲಿಸಬೇಕು. ಒಂದು ತಿಂಗಳ ನಂತರದಲ್ಲಿ ಬರುವ ಮನವಿಯನ್ನು ಬಿಬಿಎಂಪಿ ಸ್ವೀಕರಿಸುವುದಿಲ್ಲ. . ಅರ್ಜಿ ಸಲ್ಲಿಸಿದ 7 ದಿನಗಳ ಒಳಗಾಗಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಅರ್ಜಿದಾರ ನೀಡಿದ ದಾಖಲೆಗಳು ಸರಿಯಾಗಿದ್ದರೆ, ಪಾಲಿಕೆ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಅಪಘಾತಕ್ಕೆ ಪಾಲಿಕೆ ಅಸಮರ್ಪಕ ನಿರ್ವಹಣೆ ಕಾರಣ ಎಂಬುದು ದೃಢಪಟ್ಟರೆ ಪಾಲಿಕೆಯಿಂದ ಪರಿಹಾರ ನೀಡಲಾಗುತ್ತದೆ.

ಗುಂಡಿಯಿಂದ ಅಪಘಾತಕ್ಕೆ ಒಳಗಾದ ಪ್ರಕರಣಗಳು ಆಗಸ್ಟ್ 11-2022

ಬೆಂಗಳೂರಿನ ಕೆ.ಆರ್‌.ಪುರದಲ್ಲಿ ಹದಗೆಟ್ಟ ರಸ್ತೆಯಿಂದಾಗಿ ನಡೆದ ಅವಘಾತದಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ಪುತ್ರನೋರ್ವ ಸಾವನ್ನಪ್ಪಿದ್ದರು. ತಂದೆ ಸಂತೋಷ್‌ ಅವರ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ಬಾಲಕ ಜೀವನ್‌ (10) ಮೃತ ದುರ್ದೈವಿ. ಮೃತ ಬಾಲಕನ ತಂದೆ ಸಂತೋಷ್‌ ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್‌ ಆಗಿದ್ದು, ಈ ಹಿಂದೆ ಕೆ.ಆರ್‌.ಪುರ ಠಾಣೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು.

ಮಾರ್ಚ್ 12-2022. ಎಂ.ಎಸ್. ಪಾಳ್ಯದ ಮುನೇಶ್ವರ ಲೇಔಟ್‌ನಲ್ಲಿ ಜಲಮಂಡಳಿ ಅಗೆದಿದ್ದ ರಸ್ತೆಗುಂಡಿಗೆ ಬಿದ್ದು ಅಶ್ವಿನ್‌ ಎಂಬವರಿಗೆ ಗಾಯವಾಗಿತ್ತು. ನಂತರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಶ್ವಿನ್ (27) ಸಾವನ್ನಪ್ಪಿದ್ದರು.

ಜನವರಿ 30-2022

ಬ್ಯಾಡರಹಳ್ಳಿ ಮುಖ್ಯ ರಸ್ತೆಯಲ್ಲಿದ್ದ ಗುಂಡಿಯಿಂದ ಸಂಭವಿಸಿದ ಅಪಘಾತದಲ್ಲಿ ಶಿಕ್ಷಕಿ ಶರ್ಮಿಳಾ ಮೃತಪಟ್ಟಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Mon, 17 October 22