AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಘವೇಂದ್ರ ಶೆಟ್ಟಿ ವಿರುದ್ಧ 31 ಕ್ರಿಮಿನಲ್ ಕೇಸ್, 15 ವಾರಂಟ್ ಇದೆ! ಇಂತಹವರಿಗೆ ಆ ಹುದ್ದೆ ಯಾಕೆ ಕೊಟ್ರೊ ಗೊತ್ತಿಲ್ಲ-ಐಪಿಎಸ್ ರೂಪಾ ವಿಷಾದ

ರಾಘವೇಂದ್ರ ಶೆಟ್ಟಿ ತಪ್ಪು ಪಾನ್ ಕಾರ್ಡ್ ನೀಡಿದ್ದರು. ಅದರಿಂದ ನಮ್ಮ ನಿಗಮಕ್ಕೆ ಪೆನಾಲ್ಟಿ ಬಂದಿದೆ. ಅದರ ಜಾಡು ಹಿಡಿದು ನಾವು ಹೊರಟಿದ್ವಿ. ಇದರಿಂದ DIN ಡಿಸ್ಕ್ವಾಲಿಫೈ ಆಗಿರೋದು ಗೊತ್ತಾಯ್ತು. ಅದು ರದ್ದಾದರೆ ಯಾವುದೇ ಕಂಪನಿಯಲ್ಲಿ ನಿರ್ದೇಶಕರಾಗಲು ಸಾಧ್ಯವಿಲ್ಲ -ಐಪಿಎಸ್ ರೂಪಾ

ರಾಘವೇಂದ್ರ ಶೆಟ್ಟಿ ವಿರುದ್ಧ 31 ಕ್ರಿಮಿನಲ್ ಕೇಸ್, 15 ವಾರಂಟ್ ಇದೆ! ಇಂತಹವರಿಗೆ ಆ ಹುದ್ದೆ ಯಾಕೆ ಕೊಟ್ರೊ ಗೊತ್ತಿಲ್ಲ-ಐಪಿಎಸ್ ರೂಪಾ ವಿಷಾದ
ರಾಘವೇಂದ್ರ ಶೆಟ್ಟಿ ವಿರುದ್ಧ 31 ಕ್ರಿಮಿನಲ್ ಕೇಸ್, 15 ವಾರಂಟ್ ಇದೆ! ಇಂತಹವರಿಗೆ ಆ ಹುದ್ದೆ ಯಾಕೆ ಕೊಟ್ರೊ ಗೊತ್ತಿಲ್ಲ-ಡಿ. ರೂಪಾ ವಿಷಾದ
TV9 Web
| Edited By: |

Updated on:Oct 17, 2022 | 6:34 PM

Share

ಬೆಂಗಳೂರು: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ (Karnataka State Handicrafts Development Corporation Limited -KSHDCL) ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ (Dr Beloor Raghavendra Shetty) ವಿರುದ್ಧ FIR ದಾಖಲಾಗಿರುವ ಬೆನ್ನಿಗೆ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ಡಿ. ರೂಪಾ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮೇಲೆ FIR ಆಗಿದೆ. ಸರ್ಕಾರ ನೇಮಕ ಮಾಡಿದಾಗ DIN ಡಿಸ್ಕ್ವಾಲಿಫೈ (ಡೈರೆಕ್ಟರ್ ಐಡೆಂಟಿಪೀಕೇಷನ್ ನಂಬರ್ DIN disqualification) ಆಗಿದೆ ಎಂದು ಹೇಳಬೇಕಿತ್ತು. ಅದು ಗೊತ್ತಿದ್ದೂ ಹುದ್ದೆ ಅಲಂಕರಿಸಿ ಒಂದು ವರ್ಷ ಎಂಟು ತಿಂಗಳು ಸಂಬಳ ಪಡೆದಿದ್ದಾರೆ. ಸುಮಾರು 40 ಲಕ್ಷ ರೂಪಾಯಿಯಷ್ಟು ಹಣ ಪಡೆದುಕೊಂಡಂತಾಗಿದೆ. ನಿಗಮದಿಂದ ಎನ್ ಓ ಸಿ ಪಡೆದು ಕೈಗೊಂಡ ದುಬೈ ಪ್ರವಾಸ, ಸಂಬಳ ಸೇರಿ 40 ಲಕ್ಷ ರೂ ಹಣ ಪಡೆದಂತಾಗಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿ ರೂಪಾ (IPS D Roopa) ಹೇಳಿದ್ದಾರೆ.

ರಾಘವೇಂದ್ರ ಶೆಟ್ಟಿ ತಪ್ಪು ಪಾನ್ ಕಾರ್ಡ್ ನೀಡಿದ್ದರು. ಅದರಿಂದ ನಮ್ಮ ನಿಗಮಕ್ಕೆ ಪೆನಾಲ್ಟಿ ಬಂದಿದೆ. ಅದರ ಜಾಡು ಹಿಡಿದು ನಾವು ಹೊರಟಿದ್ವಿ. ಇದರಿಂದ DIN ಡಿಸ್ಕ್ವಾಲಿಫೈ ಆಗಿರೋದು ಗೊತ್ತಾಯ್ತು. ಅದು ರದ್ದಾದರೆ ಯಾವುದೇ ಕಂಪನಿಯಲ್ಲಿ ನಿರ್ದೇಶಕರಾಗಲು ಸಾಧ್ಯವಿಲ್ಲ. ಇದರಿಂದಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ವಿವರಣೆ ನೀಡಿದರು.

Also Read:

‘ಎತ್ತಿಕೊಂಡು ಹೋದ’ ಕಲಾಕೃತಿಗಳ ವೆಚ್ಚ ಭರಿಸುವಂತೆ ಬೇಳೂರು ರಾಘವೇಂದ್ರ ಶೆಟ್ಟಿಗೆ ನೋಟಿಸ್ ಕಳಿಸಿದ ರೂಪಾ ಮೌದ್ಗಿಲ್

ಇವರ ಮೇಲೆ 31 ಕ್ರಿಮಿನಲ್ ಕೇಸ್, 15 ಜಾಮೀನುರಹಿತ ವಾರಂಟ್ ಇದೆ. ಇಂತಹವರಿಗೆ ಆ ಹುದ್ದೆ ಯಾಕೆ ಕೊಟ್ಟರೋ ಗೊತ್ತಿಲ್ಲ. ದಾಖಲೆಗಳನ್ನು ಯಾರಿಗೆಲ್ಲ ಕಳುಹಿಸಬೇಕೊ ಕಳಿಸಿದ್ದೇನೆ. ನಿಗಮದ ಸೆಕ್ರೆಟರಿ‌ ಮೇಲೆ ಕೂಡ ದೂರು ದಾಖಲಿಸಲಾಗಿದೆ. ಸೆಕ್ರೆಟರಿ‌ ಇದರಲ್ಲಿ ಶಾಮೀಲಾಗಿ, ವಿಷಯವನ್ನು ಮುಚ್ಚಿಡಲಾಗಿದೆ ಎಂದು ದೂರು ನೀಡಿದ್ದೇವೆ ಎಂದು ಐಪಿಎಸ್ ರೂಪಾ ಹೇಳಿದರು.

ಇದಕ್ಕೆಲ್ಲಾ ಹೆದರುವ ಜಾಯಮಾನ ನಮ್ಮದಲ್ಲ:ಬೇಳೂರು ರಾಘವೇಂದ್ರ ಶೆಟ್ಟಿ ಹೇಳಿಕೆ

ಪ್ರಕರಣ ಸಂಭಂದ ಬೇಳೂರು ರಾಘವೇಂದ್ರ ಶೆಟ್ಟಿ ಹೇಳಿಕೆ ನಿಡಿದ್ದು, ತನ್ನ ವಿರುದ್ದ ಮಹಿಳಾ ಅಧಿಕಾರಿ ಪಿತೂರಿ ನಡೆಸುತಿದ್ದಾರೆ. ಅವರೆ ಕಚೇರಿಗೆ ಸರಿಯಾದ ಸಮಯಕ್ಕೆ ಬರುವುದಿಲ್ಲಾ. ಕಾನೂನು ಪ್ರಕಾರ ಡಿಐನ್ ನಂಬರ್ ಇರಲೇ ಬೇಕು ಎಂದೇನೂ ಇಲ್ಲಾ. ನಾನು ಈ ಹಿಂದೆ ಪುರುಷ ಟೈಪಿಸ್ಟ್ ಬೇಕು ಎಂದು ಕೇಳಿದ್ದೆ. ಅದಕ್ಕೆ ಅವ್ರು ಮಹಿಳಾ ಪಿಎ ಬೇಕು ಎಂದು ಕೇಳಿದ್ದಾರೆ ಎಂದು ಅರೋಪ ಮಾಡಿದ್ದರು.

ಇದಕ್ಕೆಲ್ಲಾ ಹೆದರುವ ಜಾಯಮಾನ ನಮ್ಮದಲ್ಲ. ನಾನು ಆಕೆಯ ವಿರುದ್ದ ಕೇಸ್ ಹಾಕಲಿದ್ದೇನೆ, ಅದಕ್ಕೆ ಈ ರೀತಿ ಮಾಡ್ತಿದ್ದಾರೆ. ಆಕೆಗೆ ಕಾಮನ್ ಸೆನ್ಸ್ ಇಲ್ಲದಂತೆ ಈ ಕೆಲಸ ಮಾಡ್ತಿದ್ದಾರೆ. ಐಪಿಎಸ್ ಅನ್ನೋ ಕಾರಣಕ್ಕೆ ಎಲ್ಲರೂ ಅವರಿಗೆ ಮಹತ್ವ ಕೊಡ್ತಾರೆ. ನಿಗಮದ ಎಂಡಿ ಅಗಿದ್ದಾರೆ ಅಂದ್ರೆ ಅವರ ಕೆಲಸ ಹೇಗಿದೆ? ನಾನು ಇದೆಲ್ಲದಕ್ಕೂ ಕಾನೂನು ಮೂಲಕ ಉತ್ತರ ಕೊಡ್ತೀನಿ. ಅವರಿಗೆ ತಾಕತ್ ಇದ್ರೆ ಕಾನೂನು ಮೂಲಕ ಫೈಟ್ ಮಾಡಲಿ ಎಂದು ವಿವರಣೆ ಕೊಟ್ಟಿದ್ದಾರೆ.

Published On - 6:30 pm, Mon, 17 October 22

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್