ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರದಿಂದ ಗುಡ್​​​ ನ್ಯೂಸ್​​: ವೇತನ ಹಿಂಬಾಕಿ ಪಾವತಿಗೆ 450 ಕೋಟಿ ರೂ. ಬಿಡುಗಡೆ!

ರಾಜ್ಯ ಸರ್ಕಾರವು ದೀರ್ಘಕಾಲದಿಂದ ಬಾಕಿ ಇದ್ದ ಸಾರಿಗೆ ನೌಕರರ 26 ತಿಂಗಳ ವೇತನ ಹಿಂಬಾಕಿಯ ಮೊದಲ ಹಂತವಾಗಿ 450 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಒಟ್ಟು 1,271.92 ಕೋಟಿ ರೂ. ಪಾವತಿಸಬೇಕಿದ್ದು, KSRTC, BMTC, NWKRTC, ಮತ್ತು KKRTC ನಿಗಮಗಳಿಗೆ ಹಣ ಹಂಚಿಕೆ ಮಾಡಲಾಗಿದೆ. ಈ ನಡೆ ನೌಕರರಿಗೆ ತಾತ್ಕಾಲಿಕ ಸಮಾಧಾನ ತಂದಿದ್ದರೂ, ಉಳಿದ 821.92 ಕೋಟಿ ರೂ. ಬಿಡುಗಡೆಗಾಗಿ ನೌಕರರ ಒಕ್ಕೂಟಗಳು ಒತ್ತಾಯಿಸುತ್ತಿವೆ.

ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರದಿಂದ ಗುಡ್​​​ ನ್ಯೂಸ್​​: ವೇತನ ಹಿಂಬಾಕಿ ಪಾವತಿಗೆ 450 ಕೋಟಿ ರೂ.  ಬಿಡುಗಡೆ!
ಸಾಂದರ್ಭಿಕ ಚಿತ್ರ
Image Credit source: AI image
Edited By:

Updated on: Apr 29, 2026 | 3:55 PM

ಬೆಂಗಳೂರು, ಏ.29: ಹಲವು ದಿನಗಳಿಂದ ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವೆ ಹಲವು ಬೇಡಿಕೆಗಳ ಕುರಿತು ಭಾರೀ ಗೊಂದಲಗಳು ಉಂಟಾಗಿದೆ. ಇದಕ್ಕಾಗಿ ಪ್ರತಿಭಟನೆಗಳನ್ನು ಕೂಡ ನಡೆಸಿದರು. ಆದರೆ ಇದೀಗ ಸಾರಿಗೆ ನೌಕರರಿಗೆ ಬಿಗ್​​​​​ ಗುಡ್​​ ನ್ಯೂಸ್​ ನೀಡಿದೆ. ದೀರ್ಘಕಾಲದ ಕಾಯುವಿಕೆಯ ನಂತರ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಬಾಕಿ ಇರುವ ವೇತನ ಹಿಂಬಾಕಿಯನ್ನು (Arrears) ಪಾವತಿಸಲು ಮೊದಲ ಹಂತದಲ್ಲಿ 450 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಸಾರಿಗೆ ಸಂಸ್ಥೆಯ ನೌಕರರಿಗೆ ಕಳೆದ 26 ತಿಂಗಳ ವೇತನ ಹಿಂಬಾಕಿಯಾಗಿ ಒಟ್ಟು 1,271.92 ಕೋಟಿ ರೂ. ಬಿಡುಗಡೆ ಮಾಡಬೇಕಿತ್ತು. ಆದರೆ, ಪ್ರಸ್ತುತ ಹಣಕಾಸಿನ ಲಭ್ಯತೆಯ ಆಧಾರದ ಮೇಲೆ ಮೊದಲ ಹಂತವಾಗಿ ಸರ್ಕಾರ ₹450 ಕೋಟಿಯನ್ನು ಬಿಡುಗಡೆ ಮಾಡಿದೆ.

ನಿಗಮವಾರು ಹಣ ಹಂಚಿಕೆ ಹೇಗೆ?

KSRTC (ಕೆಎಸ್‌ಆರ್‌ಟಿಸಿ): 143.85 ಕೋಟಿ ರೂ.

BMTC (ಬಿಎಂಟಿಸಿ): 137.24 ಕೋಟಿ ರೂ.

NWKRTC (ವಾಯುವ್ಯ ಕರ್ನಾಟಕ ಸಾರಿಗೆ): 87.00 ಕೋಟಿ ರೂ.

KKRTC (ಕಲ್ಯಾಣ ಕರ್ನಾಟಕ ಸಾರಿಗೆ): 81.91 ಕೋಟಿ ರೂ.

ಇದನ್ನೂ ಓದಿ: ಬಿಎಂಟಿಸಿ, ಮೆಟ್ರೋದಲ್ಲಿ ಸಂಚಾರ ಮಾಡಲು ಒಂದೇ ಸ್ಮಾರ್ಟ್ ಕಾರ್ಡ್ ಸಾಕು! ಶೀಘ್ರದಲ್ಲೇ ಹೊಸ ವ್ಯವಸ್ಥೆ

ಈ ಅನುದಾನವು ಸಾರಿಗೆ ನೌಕರರ ಆರ್ಥಿಕ ಸಂಕಷ್ಟವನ್ನು ಸ್ವಲ್ಪಮಟ್ಟಿಗೆ ನೀಗಿಸಲಿದ್ದು, ಬಾಕಿ ಇರುವ ಉಳಿದ ಮೊತ್ತವನ್ನು ಮುಂದಿನ ಹಂತಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಮೊದಲ ಹಂತದ ಬಿಡುಗಡೆಯನ್ನು ಸ್ವಾಗತಿಸಿದರೂ, ಬಾಕಿ ಇರುವ ಸುಮಾರು 821.92 ಕೋಟಿ ರೂ. ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ನೌಕರರ ಒಕ್ಕೂಟಗಳು ಒತ್ತಾಯಿಸುತ್ತಿವೆ. ಸರ್ಕಾರವು ಸಮಯ ಮಿತಿಯೊಳಗೆ ಪೂರ್ಣ ಹಣ ಬಿಡುಗಡೆ ಮಾಡದಿದ್ದರೆ ಮತ್ತೆ ಪ್ರತಿಭಟನೆ ಮಾಡಲಾಗುವುದು ಎಂಬ ಮಾತುಗಳು ಕೇಳಿ ಬಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Wed, 29 April 26

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us