Karnataka Weather: ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ಹವಾಮಾನದಲ್ಲಿ ಬದಲಾವಣೆ ಗಾಳಿ; ಮಳೆಗೆ ಕೊಂಚ ಬಿಡುವು

| Updated By: Skanda

Updated on: Aug 08, 2021 | 6:50 AM

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಮತ್ತು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

Karnataka Weather: ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ಹವಾಮಾನದಲ್ಲಿ ಬದಲಾವಣೆ ಗಾಳಿ; ಮಳೆಗೆ ಕೊಂಚ ಬಿಡುವು
ಹವಾಮಾನ ವರದಿ
Follow us on

ಬೆಂಗಳೂರು: ಕರ್ನಾಟಕ ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಅಬ್ಬರಿಸುತ್ತಿದ್ದ ಆಶ್ಲೇಷಾ ಮಳೆ ನಿನ್ನೆಯಿಂದ (ಆಗಸ್ಟ್​ 07) ಕೊಂಚ ಬಿಡುವು ನೀಡುತ್ತಿದೆ. ಪೂರ್ಣ ಪ್ರಮಾಣದಲ್ಲಿ ಮಳೆ (Karnataka Rains) ನಿಂತಿಲ್ಲವಾದರೂ ಮೂರ್ನಾಲ್ಕು ದಿನಗಳ ಹಿಂದೆಯಿದ್ದ ವಾತಾವರಣ (Karnataka Weather) ಸಾಕಷ್ಟು ಬದಲಾಗಿದೆ. ಜುಲೈ ತಿಂಗಳ ಭೀಕರ ಮಳೆಯನ್ನು (Heavy Rain) ನೋಡಿ ಕಂಗಾಲಾಗಿದ್ದ ಜನ ಸಾವರಿಸಿಕೊಳ್ಳುವಷ್ಟರಲ್ಲಿ ಆಶ್ಲೇಷಾ ಮಳೆ ಅಬ್ಬರಿಸಲಾರಂಭಿಸಿ ಆತಂಕ ಮೂಡಿಸಿತ್ತು. ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೃಷಿಯನ್ನೇ ಬದುಕಿಗೆ ಆಧಾರವಾಗಿರಿಸಿಕೊಂಡವರು ಮಳೆಗೆ ಹಿಡಿಶಾಪ ಹಾಕುವಂತಾಗಿತ್ತು. ಅಲ್ಲದೇ, ಇನ್ನೊಂದು ವಾರ ಮಳೆ ವಾತಾವರಣ ಮುಂದುವರೆದರೂ ಈ ವರ್ಷದ ಫಸಲು ಕೈಗೆ ಬರುವುದು ಕಷ್ಟ ಎನ್ನುವಂತಹ ಪರಿಸ್ಥಿತಿಯೂ ತಲೆದೋರಿದ್ದು, ಇದೀಗ ಮಳೆ ಕಡಿಮೆಯಾಗುವ ಲಕ್ಷಣ ಕಾಣಿಸಿರುವುದು ರೈತರಿಗೆ ಸಮಾಧಾನ ತಂದಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಮಳೆ ಮುನ್ಸೂಚನೆ ವರದಿ ಪ್ರಕಾರ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಮತ್ತು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಈ ಬಾರಿ ಹೆಚ್ಚೂಕಡಿಮೆ ಮೇ ತಿಂಗಳಿನಿಂದಲೇ ಮಳೆಗಾಲದ ವಾತಾವರಣ ಆವರಿಸಿಕೊಂಡಿತ್ತಾದ್ದರಿಂದ ಅಲ್ಲಿನ ಕೃಷಿಕರಿಗೆ ಮಳೆ ಅಡ್ಡಪರಿಣಾಮ ಬೀರಲಾರಂಭಿಸಿದೆ. ಇದೀಗ ಮಳೆ ನಿಲ್ಲುವುದೇ ಅವರಿಗೆ ಶುಭಸೂಚನೆ ಎಂಬಂತಾಗಿದೆ.

ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ತಕ್ಕಮಟ್ಟಿಗೆ ಮಳೆಯಾಗುತ್ತಿದ್ದು ಇಂದು ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಕಳೆದೊಂದು ವಾರದಿಂದ ಆರ್ಭಟಿಸುತ್ತಿರುವ ಮಳೆ ಇಂದಿನಿಂದ (ಆಗಸ್ಟ್​ 8) ಕೊಂಚ ಸುಧಾರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:
ಭಾರಿ ಮಳೆಗೆ ಕುಸಿದುಬಿದ್ದ ಸೇತುವೆ; ಎರಡು ಗ್ರಾಮಗಳ‌ ಮಧ್ಯೆ ಸಂಪರ್ಕ ಕಡಿತ 

Rain : ಮಳೆ ಬಂತು ಮಳೆ ; ಅಲಲಲಲಾ ಎಂಥ ಆಟ ಅದೆಂಥ ಆವೇಶ ಈ ‘ಮನಬಂದ ರಾಯ’ನದು!

(Karnataka Weather Today Monsoon 2021 likely to be slowdown in state)

Published On - 6:49 am, Sun, 8 August 21