ಐಸ್ ಕ್ರೀಂ ತಿನ್ನಲೆಂದು ನಿಂತಿದ್ದರಿಂದ ಬಚಾವ್: ಪಹಲ್ಗಾಮ್ ಉಗ್ರ ದಾಳಿಯಿಂದ ಬೆಂಗಳೂರು ನಿವಾಸಿ ಪಾರಾಗಿದ್ದು ಹೀಗಂತೆ!

ಪಹಲ್ಗಾಮ್ ಭಯೋತ್ಪಾದಕ ದಾಳಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಯ ರೋಚಕ ವಿಚಾರಗಳು ಒಂದೊಂದಾಗಿ ಹೊರ ಬರುತ್ತಿವೆ. ಘಟನೆಯಲ್ಲಿ ಕರ್ನಾಟಕದ ಇಬ್ಬರು ಮೃತಪಟ್ಟಿರುವ ಬಗ್ಗೆ ಈವರೆಗೆ ವರದಿಯಾಗಿದ್ದು, ಅನೇಕರು ಪಾರಾಗಿದ್ದಾರೆ. ಬೆಂಗಳೂರ ನಿವಾಸಿಯೊಬ್ಬರು, ದಾಳಿಯಿಂದ ಬಚಾವಾದ ಬಗ್ಗೆ ‘ಟಿವಿ9’ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಐಸ್ ಕ್ರೀಂ ತಿನ್ನಲೆಂದು ನಿಂತಿದ್ದರಿಂದ ಬಚಾವ್: ಪಹಲ್ಗಾಮ್ ಉಗ್ರ ದಾಳಿಯಿಂದ ಬೆಂಗಳೂರು ನಿವಾಸಿ ಪಾರಾಗಿದ್ದು ಹೀಗಂತೆ!
ಪಹಲ್ಗಾಮ್‌ನಲ್ಲಿಭಯೋತ್ಪಾದಕರು ದಾಳಿ ಮಾಡಿದ ನಂತರ ಆ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
Image Credit source: PTI
Updated By: Ganapathi Sharma

Updated on: Apr 23, 2025 | 9:02 AM

ಬೆಂಗಳೂರು, ಏಪ್ರಿಲ್ 23: ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆಸಿದ ದಾಳಿಯಲ್ಲಿ (Pahalgam Terror Attack ಕರ್ನಾಟಕದ ಇಬ್ಬರು ಮೃತಪಟ್ಟಿದ್ದರೆ, ಇನ್ನು ಕೆಲವರು ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಬೆಂಗಳೂರಿನ (Bengaluru) ನ್ಯೂ ತಿಪ್ಪಸಂದ್ರ ಬಡಾವಣೆಯ ನಿವಾಸಿ ಸುಮನಾ ಭಟ್ (Sumana Bhat) ಅವರು ದಾಳಿಯಿಂದ ಪಾರಾದ ಬಗ್ಗೆ ‘ಟಿವಿ9’ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ಐಸ್​ ಕ್ರೀಂ ತಿನ್ನುವುದಕ್ಕೆಂದು ನಮ್ಮ ತಂಡ ನಿಂತಿದ್ದರಿಂದ ಪಹಲ್ಗಾಮ್​ ತಲುಪುವುದು ವಿಳಂಬವಾಯಿತು. ಅದರಿಂದಾಗಿ ಉಗ್ರರ ದಾಳಿಯಿಂದ ಬಚಾವಾದೆವು ಎಂದು ಅವರು ಹೇಳಿಕೊಂಡಿದ್ದಾರೆ.

ಸುಮನಾ ಭಟ್ ಸೇರಿದಂತೆ ಟೈಮೆಕ್ಸ್ ಸಂಸ್ಥೆಯ 17 ಜನ ಉದ್ಯೋಗಿಗಳು ಜಮ್ಮುವಿಗೆ ಹೋಗಿ ಅಲ್ಲಿಂದ ಮಂಗಳವಾರ ಪಹಲ್ಗಾಮ್​ಗೆ ತೆರಳಿದ್ದರು. ಭಯೋತ್ಪಾದಕರ ದಾಳಿ ನಡೆದ ಸ್ಥಳವನ್ನು ನಮ್ಮ ಗೈಡ್ ಮಿನಿ ಸ್ವಿಜರ್ಲೆಂಡ್ ಎಂದು ಬಣ್ಣಿಸಿದ್ದರು ಎಂದು ಸುಮನಾ ಭಟ್ ಹೇಳಿದ್ದಾರೆ.

ಮೂರು ಕಿಮೀ ನಡೆದುಕೊಂಡೇ ಬಂದ ಪ್ರವಾಸಿಗರು!

ಗೈಡ್​ಗಳು ನೀಡಿದ ಮಾಹಿತಿಯಿಂದ ಪಹಲ್​ಗಾಮ್ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಹೀಗಾಗಿ ನಾವೂ ಭಾರೀ ಕೌತುಕದಿಂದಲೇ ಕುದುರೆ ಮೇಲೆ ಅಲ್ಲಿಗೆ ಹೊರಟಿದ್ದೆವು. ನಾವು ಐಸ್‌ಕ್ರೀಂ ತಿನ್ನುತ್ತಾ ನಿಂತಿದ್ದರಿಂದ ನಮ್ಮೊಂದಿಗಿದ್ದ ಬೇರೆ ಪ್ರವಾಸಿಗರು ಮುಂದೆ ಹೋಗಿದ್ದರು. ಆ ಸ್ಥಳ ಇನ್ನೇನು ಮೂರು ಕಿಲೋ ಮೀಟರ್ ಇರುವಾಗ ಫೋಡಾವಾಲಾಗಳು ಕುದುರೆಯಿಂದ ನಮ್ಮನ್ನು ಇಳಿಸಿದರು. ವಾಪಸ್ ಹೋಗುವಂತೆ ಹೇಳಿ ಅವರೆಲ್ಲ ಅಲ್ಲಿಂದ ಓಡಿಹೋದರು. ನಾವು ಜೀವ ಭಯದಲ್ಲೇ ಮೂರು ಕಿಲೋ ಮೀಟರ್ ನಡೆದುಕೊಂಡು ಪಹಲ್ಗಾಮ್​ನ ನಮ್ಮ ಹೋಟೆಲ್‌ಗೆ ಬಂದೆವು. ಅಲ್ಲಿ ಲಗೇಜ್ ತೆಗೆದುಕೊಂಡು ಭಾರತೀಯ ಸೇನೆಯ ವಾಹನಗಳಲ್ಲಿ ಜಮ್ಮುವಿಗೆ ಮರಳಿದೆವು ಎಂದು ಸುಮನಾ ಭಟ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ
ಕಾಶ್ಮೀರದಲ್ಲಿ ಕನ್ನಡಿಗರ ರಕ್ಷಣೆಗೆ ಅಧಿಕಾರಿಗಳ ತಂಡ ದೌಡು
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ: ಮತ್ತೊಬ್ಬ ಕನ್ನಡಿಗ ಬಲಿ
ಪಹಲ್ಗಾಮ್‌ ಉಗ್ರರ ದಾಳಿ, ಕನ್ನಡಿಗರ ನೆರವಿಗೆ ಅಧಿಕಾರಿಗಳನ್ನ ಕಳುಹಿಸಿದ ಸಿಎಂ

ನಮ್ಮ ಹುಡುಗನನ್ನು ಟೆರರಿಸ್ಟ್ ನಾಯಿಗಳು ಹೊಡೆದಿದ್ದಾರೆ: ನಿವೃತ್ತ ಪ್ರೊಫೆಸರ್ ಆಕ್ರೋಶ

ಪಹಲ್ಗಾಮ್ ದಾಳಿಯಲ್ಲಿ ಬೆಂಗಳೂರಿನ ಭೂಷಣ್ ಮೃತಪಟ್ಟ ಬಗ್ಗೆ ನಿವೃತ್ತ ಪ್ರೊಫೆಸರ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೂಷಣ್ ನಮ್ಮ ಹುಡುಗ, ಎಲ್ಲರ ಜೊತೆ ಸ್ನೇಹದಿಂದ ಮಾತನಾಡಿ ಖುಶಿಯಾಗಿ ಬೆಳೆದಿದ್ದ. ಇನ್ನಷ್ಟು ಸಾಧನೆ ಮಾಡಬೇಕಿದ್ದ ಹುಡುಗನನ್ನು ಟೆರರಿಸ್ಟ್ ನಾಯಿಗಳು ಹೊಡೆದಿದ್ದಾರೆ. ಹಿಂದುವೇ ಎಂದು ಕೇಳಿ ಹೊಡೆದಿದ್ದಾರೆ. ಇದಕ್ಕೆ ನಮ್ಮ ಸರ್ಕಾರ ಮುಸ್ಲಿಂರನ್ನ ಓಲೈಕೆ ಮಾಡುತ್ತಿರುವುದೇ ಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಶಿವಮೊಗ್ಗ ಉದ್ಯಮಿ ಬಲಿ

ಮತ್ತೊಂದೆಡೆ, ಶಿವಮೊಗ್ಗದಲ್ಲಿ ಮೃತ ಮಂಜುನಾಥ್ ಮನೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಮಂಜುನಾಥ ಅವರ ಪಾರ್ಥಿವ ಶರೀರ ಗುರುವಾರ ಬೆಳಿಗ್ಗೆ ಶಿವಮೊಗ್ಗಕ್ಕೆ ಆಗಮಿಸಲಿದೆ. ಪಟ್ಟಿಯಲ್ಲಿ 19 ನೇ ಹೆಸರು ಮಂಜುನಾಥ್ ಅವರದ್ದು ಇದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:01 am, Wed, 23 April 25