ಗಾಂಜಾ ಆರೋಪಿಗಳ ಜೊತೆ ಶಾಮೀಲಾಗಿ ವಾಹನ ಮಾರಾಟ ಆರೋಪ: ಇನ್ಸ್‌ಪೆಕ್ಟರ್‌ ಅಮಾನತು ಆದೇಶ ತಡೆಹಿಡಿದ ಕೆಎಟಿ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 20, 2023 | 8:31 PM

ಗಾಂಜಾ ಆರೋಪಿಗಳ ಜೊತೆ ಶಾಮೀಲಾಗಿ ವಾಹನ ಮಾರಾಟ ಆರೋಪ ಹಿನ್ನೆಲೆ ನಗರದ ಹಲಸೂರು ಇನ್ಸ್‌ಪೆಕ್ಟರ್‌ ಪ್ರಕಾಶ್‌ ಅಮಾನತು ಆದೇಶಕ್ಕೆ ಕರ್ನಾಟಕ‌ ಆಡಳಿತಾತ್ಮಕ ನ್ಯಾಯ ಮಂಡಳಿ(ಕೆಎಟಿ) ತಡೆಯಾಜ್ಞೆ ನೀಡಿದೆ. ಸಬ್‌ ಇನ್ಸ್‌ಪೆಕ್ಟರ್‌ ವಿರುದ್ಧ ತನಿಖೆ ನಡೆಸಿ ಇನ್ಸ್‌ಪೆಕ್ಟರ್‌ನನ್ನು ಹೊಣೆ ಮಾಡಿ ಅಮಾನತು ಆರೋಪ ಮಾಡಲಾಗಿದೆ.  

ಗಾಂಜಾ ಆರೋಪಿಗಳ ಜೊತೆ ಶಾಮೀಲಾಗಿ ವಾಹನ ಮಾರಾಟ ಆರೋಪ: ಇನ್ಸ್‌ಪೆಕ್ಟರ್‌ ಅಮಾನತು ಆದೇಶ ತಡೆಹಿಡಿದ ಕೆಎಟಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಅಕ್ಟೋಬರ್​​​ 20: ನಗರದ ಹಲಸೂರು ಇನ್ಸ್‌ಪೆಕ್ಟರ್‌ ಪ್ರಕಾಶ್‌ ಅಮಾನತು (suspension) ಆದೇಶಕ್ಕೆ ಕರ್ನಾಟಕ‌ ಆಡಳಿತಾತ್ಮಕ ನ್ಯಾಯ ಮಂಡಳಿ(ಕೆಎಟಿ) ತಡೆಯಾಜ್ಞೆ ನೀಡಿದೆ. ಗಾಂಜಾ ಆರೋಪಿಗಳ ಜೊತೆ ಶಾಮೀಲಾಗಿ ವಾಹನ ಮಾರಾಟ ಆರೋಪ ಮಾಡಲಾಗಿತ್ತು. ಇಲಾಖೆ ತನಿಖಾ ವರದಿ ಆಧರಿಸಿ ಕರ್ತವ್ಯಲೋಪ ಆರೋಪದಡಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್‌ ಅಮಾನತು ಮಾಡಿದ್ದರು. ಅಮಾನತು ಆದೇಶ ಪ್ರಶ್ನಿಸಿ ಇನ್ಸ್‌ಪೆಕ್ಟರ್‌ ಪ್ರಕಾಶ್‌ ಕೆಎಟಿ ಮೆಟ್ಟಿಲೇರಿದ್ದರು. ಸಬ್‌ ಇನ್ಸ್‌ಪೆಕ್ಟರ್‌ ವಿರುದ್ಧ ತನಿಖೆ ನಡೆಸಿ ಇನ್ಸ್‌ಪೆಕ್ಟರ್‌ನನ್ನು ಹೊಣೆ ಮಾಡಿ ಅಮಾನತು ಆರೋಪ ಮಾಡಲಾಗಿದೆ.

ಲವ್ ಪ್ರಕರಣದಲ್ಲಿ ನಿರ್ಲಕ್ಷ್ಯ: ಪಿಎಸ್​ಐ ಅಮಾನತು

ಗದಗ: ಪ್ರೇಮ ಪ್ರಕರಣವೊಂದರಲ್ಲಿ ನಿರ್ಲಕ್ಷ್ಯ ತೋರಿದ ನರೇಗಲ್ ಠಾಣೆಯ ಪಿಎಸ್​ಐಯನ್ನು ಅಮಾನತುಗೊಳಿಸಿ ಗದಗ ಎಸ್​ಪಿ ಆದೇಶ ಹೊರಡಿಸಿದ್ದರು. ಅದೇ ರೀತಿ, ಇಸ್ಪೀಟ್ ದಂಧೆಯಲ್ಲಿ ಸಿಕ್ಕಿ ಬಿದ್ದ ಪೊಲೀಸ್ ಕಾನ್ಸ್‌ಟೇಬಲ್ ಚಂದ್ರಶೇಖರ್​ ಅವರನ್ನು ಅಮಾನತುಗೊಳಿಸಿ ಚಿಕ್ಕಮಗಳೂರು ಎಸ್​ಪಿ ಇತ್ತೀಚೆಗೆ ಆದೇಶ ಹೊರಡಿಸಿದ್ದರು.

ಇಸ್ಪೀಟ್ ದಂಧೆಯಲ್ಲಿ ಸಿಕ್ಕಿ ಬಿದ್ದ ಪೊಲೀಸ್ ಕಾನ್ಸ್‌ಟೇಬಲ್ ಅಮಾನತು

ಚಿಕ್ಕಮಗಳೂರು: ಇಸ್ಪೀಟ್ ದಂಧೆಯಲ್ಲಿ ಸಿಕ್ಕಿ ಬಿದ್ದ ಚಂದ್ರಶೇಖರ್ ಬಣಕಲ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿ ಎಸ್​ಪಿ ವಿಕ್ರಂ ಅಮಾಟೆ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಆಯುಧ ಪೂಜೆಗಾಗಿ ಲಾರಿ ಚಾಲಕರಿಂದ 25 ಸಾವಿರ ರೂ. ವಸೂಲಿ; ತ್ಯಾಮಗೊಂಡ್ಲು ಪೊಲೀಸರ ವಿರುದ್ಧ ದೂರು

ಚಿಕ್ಕಮಗಳೂರು ತಾಲೂಕಿನ ಕಾಡುಮಲ್ಲಿಗೆ ಎಸ್ಟೇಟ್​ನಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಸೆನ್ ಪೊಲೀಸ್ ಠಾಣೆಯ ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಲಾಗಿತ್ತು. ಈ ವೇಳೆ ಕಾನ್​ಸ್ಟೇಬಲ್ ಚಂದ್ರಶೇಖರ್ ಸಿಕ್ಕಿಬಿದ್ದಿದ್ದಾರೆ. ಸದ್ಯ ಚಂದ್ರಶೇಖರ್ ಸೇರಿದಂತೆ ದಾಳಿ ವೇಳೆ ಸಿಕ್ಕಿಬಿದ್ದ 13 ಜನರ ಮೇಲೆ ಪ್ರಕರಣ ದಾಖಲಾಗಿದೆ.

ಮೊಬೈಲ್​​ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ವ್ತಕ್ತಿ

ರಾಯಚೂರು: ಮಾನ್ವಿ ಪಟ್ಟಣದಲ್ಲಿ‌ ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿ ಒಬ್ಬ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಅಮ್ಜದ್​​ ಖಾನ್​​ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಅಮ್ಜದ್​ಖಾನ್ ಸಹೋದರ ಶೋಯಲ್​ ನಡುವೆ ಗಲಾಟೆ‌ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ವ್ಯಕ್ತಿಯನ್ನ ಮನವೊಲಿಸಿದ ಮಾನ್ವಿ ಪೊಲೀಸರು ಟವರ್​​ನಿಂದ ಇಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.