ಆಯುಧ ಪೂಜೆಗಾಗಿ ಲಾರಿ ಚಾಲಕರಿಂದ 25 ಸಾವಿರ ರೂ. ವಸೂಲಿ; ತ್ಯಾಮಗೊಂಡ್ಲು ಪೊಲೀಸರ ವಿರುದ್ಧ ದೂರು
ದಸರಾ ಆಯುಧ ಪೂಜೆಗೆ ನೀವು ಕೊಡುವ ಮಾಮುಲಿ ಹಣ ಸಾಲುವುದಿಲ್ಲವಂದು ದರ್ಪ ತೋರಿಸಿ ಕಲ್ಲು ಲಾರಿ ಚಾಲಕರಿಂದ ಒಟ್ಟು 25 ಸಾವಿರ ರೂಪಾಯಿ ವಸೂಲಿ ಮಾಡಿದ ಆರೋಪ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಠಾಣೆ ಪಿಎಸ್ಐ, ಕಾನ್ಸ್‌ಟೇಬಲ್ ವಿರುದ್ಧ ಕೇಳಿಬಂದಿದೆ. ಈ ಬಗ್ಗೆ ಎಸ್ಪಿಗೆ ದೂರು ನೀಡಲಾಗಿದೆ.
ನೆಲಮಂಗಲ, ಅ.19: ದಸರಾ ಆಯುಧ ಪೂಜೆಗೆ ನೀವು ಕೊಡುವ ಮಾಮುಲಿ ಹಣ ಸಾಲುವುದಿಲ್ಲವಂದು ದರ್ಪ ತೋರಿಸಿ ಕಲ್ಲು ಲಾರಿ ಚಾಲಕರಿಂದ ಒಟ್ಟು 25 ಸಾವಿರ ರೂಪಾಯಿ ವಸೂಲಿ ಮಾಡಿದ ಆರೋಪ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನ ತ್ಯಾಮಗೊಂಡ್ಲು ಠಾಣೆ ಪಿಎಸ್ಐ, ಕಾನ್ಸ್‌ಟೇಬಲ್ ವಿರುದ್ಧ ಕೇಳಿಬಂದಿದೆ. ಈ ಬಗ್ಗೆ ಎಸ್ಪಿಗೆ ದೂರು ನೀಡಲಾಗಿದೆ.
ಪಿಎಸ್ಐ ದಿವ್ಯ, ಕಾನ್ಸ್‌ಟೇಬಲ್ ಶ್ರೀನಿವಾಸ್ ವಿರುದ್ಧ ಲಾರಿ ಮಾಲಿಕ ನವೀದ್ ಎಂಬವರು ದೂರು ನೀಡಿದ್ದಾರೆ. ಆಯುಧ ಪೂಜೆಗೆ ಠಾಣೆ ಸಾಮಾಗ್ರಿಗಳನ್ನು ಇಟ್ಟು ಪೂಜೆ ಸಲ್ಲಿಸಲು ಹೆಚ್ಚು ಹಣ ಖರ್ಚು ಆಗುತ್ತದೆ. ಹೀಗಾಗಿ ಮಾಮೂಲು 100 ಕೊಟ್ಟರೆ ಸಾಲುವುದಿಲ್ಲ ಎಂದು ಕಾನ್ಸ್‌ಟೇಬಲ್ ದರ್ಪ ತೋರಿಸಿದ್ದಾಗಿ ಅರೋಪಿಸಿದ್ದಾರೆ.
ಇದನ್ನೂ ಓದಿ: ಒಂಟಿ ಮನೆಯನ್ನೇ ಟಾರ್ಗೆಟ್ ಮಾಡಿ ಲೂಟಿ ಮಾಡ್ತಿದ್ದವರ ಬಂಧನ; 50 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ
ರಸ್ತೆಯಲ್ಲಿ ಕಾನ್ಸ್‌ಟೇಬಲ್ ಲಾರಿಯನ್ನ ತಡೆಯುವ ಅಧಿಕಾರ ಇಲ್ಲದಿದ್ದರೂ ಠಾಣೆ ಬಳಿ ಕರತಂದು ಹಬ್ಬದ ನೆಪದಲ್ಲಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ನಿಯಮ ಉಲ್ಲಂಘನೆ ಮಾಡುತ್ತಿರುವ ಆರೋಪ ಮಾಡಲಾಗಿದೆ. ಗೃಹಮಂತ್ರಿ ಡಾ.ಜಿ. ಪರಮೇಶ್ವರ್ ಕ್ಷೇತ್ರ ಕೊರಟಗೆರೆಯಿಂದ ನೆಲಮಂಗಲ ರಾಮೇನಹಳ್ಳಿ ರೈತ ಮನೆಗೆ ದನದ ಕೊಟ್ಟಿಗೆಗೆಂದು ಕಲ್ಲು ಚಪ್ಪಡಿಗಳನ್ನು ಕೊಡೊಯ್ಯಲಾಗುತ್ತಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:30 am, Thu, 19 October 23