ಒಂಟಿ ಮನೆಯನ್ನೇ ಟಾರ್ಗೆಟ್ ಮಾಡಿ ಲೂಟಿ ಮಾಡ್ತಿದ್ದವರ ಬಂಧನ; 50 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ
ಒಬ್ಬಂಟಿಯಾಗಿ ಬರುತ್ತಿದ್ದ ಇವರು, ರಾತ್ರಿ ವೇಳೆ ಲೈಟ್ ಆಫ್ ಆಗಿರುವ ಅಥವಾ ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಆರೋಪಿ ಸೈಯದ್ ಮೊದಲಿಗೆ ಮನೆಯ ಕಾಲಿಂಗ್ ಬೆಲ್ ಹೊಡೆದು ಪರಿಶೀಲನೆ ಮಾಡುತ್ತಿದ್ದನಂತೆ. ಈ ವೇಳೆ ಯಾರು ಇಲ್ಲದನ್ನು ಖಚಿತ ಪಡಿಸಿಕೊಂಡು ಬಳಿಕ ಕನ್ನ ಹಾಕುತ್ತಿದ್ದ.
ಬೆಂಗಳೂರು ಗ್ರಾಮಾಂತರ, ಅ.18: ಮಾಹಾನಗರದಲ್ಲಿ ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಕಳ್ಳರ ಕಾಟಕ್ಕೆ ಮಾತ್ರ ಬ್ರೇಕ್ ಹಾಕಲಾಗುತ್ತಿಲ್ಲ. ಅದರಂತೆ ಒಂಟಿ ಮನೆ ಹಾಗೂ ಒಂಟಿ ಮಹಿಳೆಯರನ್ನೇ ಲೂಟಿ ಮಾಡುತ್ತಿದ್ದ ಖದೀಮರನ್ನು (Thieves) ಇದೀಗ ಹೊಸಕೋಟೆ (Hosakote) ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಗಳಿಂದ ಬರೊಬ್ಬರಿ 50 ಲಕ್ಷ ಮೌಲ್ಯದ 800 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಸೈಯದ್ ಮತ್ತು ತಬಸುಮ್ ಬಂಧಿತ ಆರೋಪಿಗಳು.
ಇನ್ನು ಒಬ್ಬಂಟಿಯಾಗಿ ಬರುತ್ತಿದ್ದ ಇವರು, ರಾತ್ರಿ ವೇಳೆ ಲೈಟ್ ಆಫ್ ಆಗಿರುವ ಅಥವಾ ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಆರೋಪಿ ಸೈಯದ್ ಮೊದಲಿಗೆ ಮನೆಯ ಕಾಲಿಂಗ್ ಬೆಲ್ ಹೊಡೆದು ಪರಿಶೀಲನೆ ಮಾಡುತ್ತಿದ್ದನಂತೆ. ಈ ವೇಳೆ ಯಾರು ಇಲ್ಲದನ್ನು ಖಚಿತ ಪಡಿಸಿಕೊಂಡು ಬಳಿಕ ಕನ್ನ ಹಾಕುತ್ತಿದ್ದ. ಅದೇ ರೀತಿ ಬಸ್ ನಿಲ್ದಾಣಗಳಲ್ಲಿ ಒಂಟಿಯಾಗಿ ಬಂದು ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡುತ್ತಿದ್ದ ಆರೋಪಿ ತಬಸುಮ್, ಮಹಿಳೆಯರನ್ನು ಯಾಮಾರಿಸಿ ಮೊಬೈಲ್ ಚಿನ್ನ ಹಾಗೂ ಹಣ ಖದ್ದು ಎಸ್ಕೇಪ್ ಆಗುತ್ತಿದ್ದ. ಇದೇ ರೀತಿ ಹೊಸಕೋಟೆ ಕೆಆರ್ ಪುರ ಸೇರಿದಂತೆ ಹಲವೆಡೆ ಕೈಚಳಕ ತೋರಿಸಿದ ಇಬ್ಬರು, ಮೊಬೈಲ್ ಬಳಸಿದ್ರೆ, ಸಿಕ್ಕಾಕ್ಕೋಳ್ತಿವಿ ಎಂದು ಮೊಬೈಲ್ ಬಳಸದೆ ಕಳ್ಳತನಕ್ಕೆ ಬರುತ್ತಿದ್ದರು. ಇಂತಹ ಖತರ್ನಾಕ್ ಆಸಾಮಿಗಳನ್ನ ಇದೀಗ ಬಂಧಿಸಿ 50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಮೊಬೈಲ್ ಪೋನ್ನ್ನು ವಶಕ್ಕೆ ಪಡೆದಿದ್ದಾರೆ.
ಬ್ಯಾಂಕ್ ಕ್ಯಾಷ್ ಕೌಂಟರ್‌ಗೆ ನುಸುಳಿ ಹಣ ಎಗರಿಸಿಕೊಂಡು ಹೋದ ಖದೀಮ
ಚಾಮರಾಜನಗರ: ಹಾಡುಹಗಲೇ ಖದೀಮನೊಬ್ಬ ಕೆನರಾ ಬ್ಯಾಂಕ್ ಕ್ಯಾಷ್ ಕೌಂಟರ್‌ಗೆ ನುಸುಳಿ ಬರೊಬ್ಬರಿ 5 ಲಕ್ಷ ಹಣ ಎಗರಿಸಿಕೊಂಡು ಹೋದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ನಗರದ ಜೋಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಬ್ಯಾಂಕ್ ಕ್ಯಾಷ್ ಕೌಂಟರ್‌ಗೆ ಸಿಬ್ಬಂದಿ ರೀತಿ ಪ್ರವೇಶ ಮಾಡಿದ್ದ ಆಸಾಮಿ, ಈ ವೇಳೆ ಬ್ಯಾಂಕ್ ಒಳಗೆ ಹಾಗೂ ಹೊರಗೆ ನಿಂತು ಸನ್ನೆ ನೀಡುತ್ತಾ ಮೂವರು ಸಾತ್ ನೀಡಿದ್ದಾರೆ. ಇನ್ನು ಬ್ಯಾಂಕ್ ಸಿಬ್ಬಂದಿ ರೀತಿಯಲ್ಲೇ ಖದೀಮ ವರ್ತಿಸಿದ್ದರಿಂದ ಇತರರಿಗೆ ಅನುಮಾನ ಬಂದಿಲ್ಲ. ಸಂಶಯ ಬಂದು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಚಾಲಾಕಿ ಕಳ್ಳರ ಕರಾಮತ್ತು ಬಯಲಾಗಿದ್ದು, ಕಳ್ಳರ ಕರಾಮತ್ತು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದ್ದು, ಚಾಮರಾಜನಗರದ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ