ನೀತಿ ಸಂಹಿತೆ ಜಾರಿ ಸಮಸ್ಯೆ: ಕೆಸಿಇಟಿ ಫಲಿತಾಂಶ 2024 ಗೊಂದಲಕ್ಕೆ ತೆರೆ ಎಳೆದ ಕೆಇಎ ನಿರ್ದೇಶಕ

ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶದ್ವಾರವಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET-2024) ಫಲಿತಾಂಶವನ್ನು ಪತ್ರಿಕಾ ಪ್ರಕಟಣೆ ನೀಡಿ‌, ಸುದ್ದಿಗೋಷ್ಠಿ ಮಾಡದೇ ಏಕಾಏಕಿ ಫಲಿತಾಂಶ ಪ್ರಕಟಿಸಿತ್ತು. ಈ ಬೆನ್ನಲ್ಲೇ ವ್ಯಾಪಕ ಆಕ್ರೋಶ ಹಾಗೂ ಗೊಂದಲ ಸೃಷ್ಟಿಯಾಗಿತ್ತು. ಸದ್ಯ ಕೆಇಎಯಲ್ಲಿ ನಿರ್ದೇಶಕ ಪ್ರಸನ್ನ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಬಳಿ ಮುಂದೆ ಈ ರೀತಿ ಆಗದೇ ಇರುವ ಹಾಗೆ ಜವಾಬ್ದಾರಿ ವಹಿಸೋದಾಗಿ ಹೇಳಿಕೆ ನೀಡಿದ್ದಾರೆ.

ನೀತಿ ಸಂಹಿತೆ ಜಾರಿ ಸಮಸ್ಯೆ: ಕೆಸಿಇಟಿ ಫಲಿತಾಂಶ 2024 ಗೊಂದಲಕ್ಕೆ ತೆರೆ ಎಳೆದ ಕೆಇಎ ನಿರ್ದೇಶಕ
ಕೆಇಎ ನಿರ್ದೇಶಕ ಪ್ರಸನ್ನ
Follow us
| Updated By: ಆಯೇಷಾ ಬಾನು

Updated on: Jun 03, 2024 | 10:00 AM

ಬೆಂಗಳೂರು, ಜೂನ್.03: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET-2024) ಫಲಿತಾಂಶವನ್ನು ಪತ್ರಿಕಾ ಪ್ರಕಟಣೆ ನೀಡಿ‌, ಸುದ್ದಿಗೋಷ್ಠಿ ಮಾಡದೇ ಏಕಾಏಕಿ ಪ್ರಕಟಿಸಲಾಗಿತ್ತು. ಇದು ಭಾರೀ ಆಕ್ರೋಶ, ಗೊಂದಲಕ್ಕೆ ಕಾರಣವಾಗಿತ್ತು. ಸದ್ಯ ಈಗ ನಿರ್ದೇಶಕ ಪ್ರಸನ್ನ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನೀತಿ ಸಂಹಿತೆ ಜಾರಿ ಇರುವುದರಿಂದ ಈ ಗೊಂದಲವಾಗಿದೆ ಎಂದು ತಿಳಿಸಿದ್ದಾರೆ. ಹಾಗೆ ಮುಂದೆ ಈ ರೀತಿಯ ತಪ್ಪು ನಡೆಯುವುದಿಲ್ಲ ಎಂದಿದ್ದಾರೆ.

ಔಟ್ ಆಫ್ ಸಿಲೆಬಸ್ ವಿಚಾರವಾಗಿ ಸಾಕಷ್ಟು ಗೊಂದಲ ಗದ್ದಲ ಎದುರಾಗಿತ್ತು. ಇದೇ ಕಾರಣಕ್ಕೆ ಕೆಇಎ ಕಾರ್ಯನಿರ್ವಾಹಕಿ ರಮ್ಯಾ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದರ ಜೊತೆಗೆ ಕೆಇಎ ಮೊನ್ನೆ ದೀಢಿರ್ ಆಗಿ ಸಿಇಟಿ ಫಲಿತಾಂಶ ಘೋಷಿಸಿ ಮತ್ತೆ ಎಡವಟ್ಟು ಮಾಡಿತ್ತು. ಸುದ್ದಿಗೋಷ್ಠಿ ಕರೆಯದೇ ಪತ್ರಿಕಾ ಪ್ರಕಟಣೆ ಹೊರಡಿಸಿ ಫಲಿತಾಂಶ ಘೋಷಿಸಲಾಗಿತ್ತು. ನಿನ್ನೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕ ಹೆಚ್ ಪ್ರಸನ್ನ ಪತ್ರಿಕಾಗೋಷ್ಠಿ ನಡೆಸಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ದರಿಂದ ಫಲಿತಾಂಶ ಪ್ರಕಟಣೆ ಮಾಡಲಾಗಿದ್ದು ಪತ್ರಿಕಾಗೋಷ್ಠಿ ಮಾಡದೇ ರಿಸಲ್ಟ್ ಅನೌನ್ಸ್ ಮಾಡಲಾಗಿದೆ. ಫಲಿತಾಂಶ ವಿಚಾರವಾಗಿ ಸಾಕಷ್ಟು ಒತ್ತಡವಿತ್ತು. ಈ ಹಿನ್ನೆಲೆ ಫಲಿತಾಂಶವನ್ನು ಬೇಡ ಬಿಡುವ ನಿಟ್ಟಿನಲ್ಲಿ ಎಡವಟ್ಟಾಗಿದೆ. ನಂತರದಲ್ಲಿ ನಮಗೆ ಅರಿವಾಯ್ತು ಸಾಕಷ್ಟು ಗೊಂದಲ ಆಯ್ತು ಇನ್ಮುಂದೆ ಸರಿಯಾಗಿ ನಿಯಮಗಳನ್ನು ಫಾಲೋ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನೂ ಈ ವರ್ಷ 3,49,653 ಅಭ್ಯರ್ಥಿಗಳ ಪೈಕಿ 3,10,314 ಮಂದಿ ಪರೀಕ್ಷೆ ಬರೆದು ರ್‍ಯಾಂಕಿಂಗ್​ಗೆ ಅರ್ಹರಾಗಿದ್ದಾರೆ. ಅರ್ಹ ವಿದ್ಯಾರ್ಥಿಗಳ ಪೈಕಿ 1,39,274 ವಿದ್ಯಾರ್ಥಿಗಳು ಮತ್ತು 1,71,040 ವಿದ್ಯಾರ್ಥಿನಿಯರಿದ್ದಾರೆ. ಈ ವರ್ಷ ಒಟ್ಟು 2,74,595 ವಿದ್ಯಾರ್ಥಿಗಳು ಎಂಜಿನಿಯರಿಂಗ್‌ಗೆ ಅರ್ಹರಾಗಿದ್ದಾರೆ. ಎಂಜಿನಿಯರಿಂಗ್‌ನಲ್ಲಿ 9 ವಿದ್ಯಾರ್ಥಿಗಳು ಮತ್ತು ಒಬ್ಬ ವಿದ್ಯಾರ್ಥಿನಿ ಹೆಚ್ಚು ಅಂಕ ಗಳಿಸುವ ಮೂಲಕ ಬೆಂಗಳೂರಿನ ವಿದ್ಯಾರ್ಥಿಗಳು ಟಾಪ್ 10 ರ ರ್‍ಯಾಂಕ್‌ಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ.

ಇದನ್ನೂ ಓದಿ: Election Results 2024 Live: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕೌಂಟ್​ ಡೌನ್, ಕ್ಷಣ ಕ್ಷಣದ ಅಪ್ಡೇಟ್ಸ್​ ಇಲ್ಲಿದೆ

ಸಹಕಾರ ನಗರದ ನಾರಾಯಣ ಒಲಂಪಿಯಾಡ್ ಶಾಲೆಯ ಹರ್ಷ ಕಾರ್ತಿಕೇಯ ವುಟುಕುರಿ ಇಂಜಿನಿಯರಿಂಗ್ ಸಿಇಟಿಯಲ್ಲಿ ಅಗ್ರ ರ್‍ಯಾಂಕ್ ಪಡೆದರೆ, ಮಾರತ್ತಹಳ್ಳಿಯ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಮನೋಜ್ ಸೋಹನ್ ಗಾಜುಲ ಮತ್ತು ಜೆ.ಪಿ.ನಗರದ ನೆಹರು ಸ್ಮಾರಕ ವಿದ್ಯಾಲಯದ ಅಭಿನವ್ ಪಿ.ಜೆ ದ್ವಿತೀಯ ರ್‍ಯಾಂಕ್ ಗಳಿಸಿದ್ದಾರೆ. ಯಾವ ವಿಧ್ಯಾರ್ಥಿಗಳಿಗೆ ರ್‍ಯಾಂಕ್ ಹಂಚಿಕೆಯಲ್ಲಿ ಗೊಂದಲವಿದೆಯೋ‌ ಹಾಗೂ ದ್ವೀತಿಯ ಪಿಯು ಮಾರ್ಕ್ಸ್ ಸೇರಿಸಲಾಗಿಲ್ಲ ಅನ್ನೋ ಸಮ್ಯಸೆ ಇದ್ರೆ ಸೋಮವಾರ ಬೆಳಗ್ಗೆ 11 ರಿಂದ‌ ಕೆಇಎ ವೈಬ್ಸೈಟ್ನಲ್ಲಿ ಮತ್ತೊಮ್ಮೆ ತಮ್ಮ ಪಿಯುಸಿ ಬೋರ್ಡ್ನಿಂದ ನೀಡಲಾಗಿರೋ ಯೂನಿಕ್ ಐಡೆಂಟಿ ನಂಬರ್ ಸರಿಯಾಗಿ ನಮೂದಿಸಲು ಹೇಳಿದೆ. ಯೂನಿಕ್ ಐಡೆಂಟಿ‌ ನಂಬರ್ ತಪ್ಪಾಗಿ ಹಾಕಿರೋ ಕಾರಣ 3 ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳ ಸಮ್ಯಸೆಯಾಗಿದೆ ಅಂತಾ ಸ್ಪಷ್ಟನೆ ನೀಡಿದರು.

ಒಟ್ಟಿನಲ್ಲಿ ನೀಟ್ ಪರೀಕ್ಷೆ ಫಲಿತಾಂಶ ಇನ್ನೂ ಬಂದಿಲ್ಲ. ಸೀಟ್ ಮ್ಯಾಟ್ರಿಕ್ಸ್ ಕುರಿತು ಶಿಕ್ಷಣ ಇಲಾಖೆ ಅದನ್ನ ಪ್ಲಬೀಷ್ ಮಾಡುತ್ತೆ. ನೀಟ್ ರಿಸಲ್ಟ್ ಬಂದ ಬಳಿಕ ನಾವು ಸೀಟು ಹಂಚಿಕೆ ಮಾಡ್ತಿವಿ. ಪೋಷಕರು ಆತುರದಲ್ಲಿ ಗಾಬರಿ ಪಡುವ ಅಗತ್ಯವಿಲ್ಲ ಅಂತ ಕೆ‌ಇ‌ಎ ಪೋಷಕರಿಗೆ ಅಭಯ ನೀಡಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್