ಬೆಂಗಳೂರು: ಹಣಕ್ಕಾಗಿ ತೌಹಿದ್ ಎಂಬ ಯುವಕನನ್ನ ಕಿಡ್ನ್ಯಾಪ್ ಮಾಡಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕೋರಮಂಗಲ 100 ಫೀಟ್ ರಸ್ತೆ ಬಳಿಯ ಚೆಕ್ಪೋಸ್ಟ್ ಬ್ಯಾರಿಕೇಡ್ಗೆ ರಾತ್ರಿ 11.40ರ ಸುಮಾರಿನಲ್ಲಿ ಕಾರು ಡಿಕ್ಕಿ ಹೊಡೆದಿದ್ದು, ಯುವಕ ಕಾಪಾಡಿ ಎಂದು ಕೂಗಿದ್ದಾನೆ. ಈ ವೇಳೆ ಆಡುಗೋಡಿ ಇನ್ಸ್ಪೆಕ್ಟರ್ ಮಂಜುನಾಥ್ ಅಲರ್ಟ್ ಆಗಿದ್ದಾರೆ. ಕೂಡಲೇ ಸಿನಿಮಾ ರೀತಿಯಲ್ಲಿ 2 ಕಿ.ಮೀ. ಚೇಸ್ ಮಾಡಿ ವಾಟರ್ ಟ್ಯಾಂಕ್ ಜಂಕ್ಷನ್ ಬಳಿ ಯುವಕನನ್ನ ರಕ್ಷಿಸಿದ್ದಾರೆ. ನಾಲ್ವರಲ್ಲಿ ಓರ್ವ ಆರೋಪಿ ಗೋಪಿ ಎಂಬುವವನನ್ನ ಬಂಧಿಸಲಾಗಿದ್ದು, ಇನ್ನುಳಿದವರಿಗಾಗಿ ಬಲೆ ಪೊಲೀಸರು ಬಲೆ ಬಿಸಿದ್ದಾರೆ.
3 ದಿನದ ಹಿಂದೆ ಬಂಡೆಪಾಳ್ಯ ಬಳಿ ತೌಹಿದ್ನನ್ನ ಕಿಡ್ನಾಪ್ ಮಾಡಿದ್ದ ಕಿಡ್ನ್ಯಾಪರ್ಸ್ ಗೌಪ್ಯ ಸ್ಥಳದಲ್ಲಿರಿಸಿಕೊಂಡು ಕುಟುಂಬಸ್ಥರಿಗೆ 60 ಸಾವಿರ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಇಲ್ಲವಾದರೆ ತೌಹಿದ್ನನ್ನ ಬೀಡುವುದಿಲ್ಲವೆಂದಿದ್ದಾರೆ. ಜೊತೆಗೆ ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿದರೆ ಕೊಲೆ ಮಾಡೋದಾಗಿ ಹೆದರಿಸಿದ್ದಾರೆ. ಹಾಗಾಗಿ ನಿನ್ನೆ ಸಂಜೆ 4.30 ಕ್ಕೆ ತೌಹಿದ್ ತಾಯಿ 35 ಸಾವಿರ ಹಣ ನೀಡಿದ್ದಾರೆ. ಹಣ ಕೊಟ್ಟ ಮೇಲೂ ಆರೋಪಿಗಳು ತೌಹಿದ್ನನ್ನ ಬಿಟ್ಟಿಲ್ಲ. ನಂತರ ಈ ಬಗ್ಗೆ ದೂರು ನೀಡಲು ಮಡಿವಾಳ ಠಾಣೆಗೆ ಬಂದಿದ್ದ ಕುಟುಂಬ ಅಷ್ಟರಲ್ಲಾಗಲೇ ಆರೋಪಿಯನ್ನು ಬಂಧಿಸಿದ್ದ ಪೊಲೀಸರು. ಪ್ರಕರಣ ಬಂಡೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹೀಗಾಗಿ ಪ್ರಕರಣವನ್ನ ಬಂಡೆಪಾಳ್ಯ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ