ಬೆಂಗಳೂರು: ಸೈಟ್ ವಿಚಾರಕ್ಕೆ ಗಲಾಟೆ ಮಾಡಿ ಮನೆಗೆ ಹೋಗಿದ್ದ ವ್ಯಕ್ತಿ ಸಾವು; ಮೃತನ ಕುಟುಂಬದಿಂದ ಕೊಲೆ ಆರೋಪ
ಕೊಡಿಗೆಹಳ್ಳಿ(Kodigehalli) ಬಳಿಯ ಎನ್.ಟಿ.ಐ ಲೇಔಟ್ನಲ್ಲಿ ಸೈಟ್ ವಿಚಾರಕ್ಕೆ ಗಲಾಟೆ ಮಾಡಿ ನಂತರ ಮನೆಗೆ ಹೋಗಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಸೈಟ್ ವಿಚಾರವಾಗಿ ಸಾಕಷ್ಟು ದಿನಗಳಿಂದ ನಾಗರಾಜ್ ಮತ್ತು ಪ್ರಕಾಶ್ರವರ ಮಧ್ಯೆ ಈ ವಿಚಾರವಾಗಿ ಗಲಾಟೆಯಾಗುತ್ತಿತ್ತು. ಇಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕೂಡ ಪ್ರಕಾಶ್ , ನಾಗರಾಜ್ ಎಂಬಾತನ ನಡುವೆ ಜಮೀನು ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ.
ಬೆಂಗಳೂರು, ಜ.29: ಸೈಟ್ ವಿಚಾರಕ್ಕೆ ಗಲಾಟೆ ಮಾಡಿ ನಂತರ ಮನೆಗೆ ಹೋಗಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿ(Kodigehalli) ಬಳಿಯ ಎನ್.ಟಿ.ಐ ಲೇಔಟ್ನಲ್ಲಿ ನಡೆದಿದೆ. ಪ್ರಕಾಶ್ ಮೃತ ರ್ದುದೈವಿ. ಪ್ರಕಾಶ್ ಎಂಬುವವರಿಗೆ ಸೇರಿದ ಸೈಟ್ ಎನ್.ಟಿ.ಐ ಕಾಲೋನಿಯಲ್ಲಿದೆ.ಈ ಸೈಟ್ ವಿಚಾರವಾಗಿ ಸಾಕಷ್ಟು ದಿನಗಳಿಂದ ನಾಗರಾಜ್ ಮತ್ತು ಪ್ರಕಾಶ್ರವರ ಮಧ್ಯೆ ಈ ವಿಚಾರವಾಗಿ ಗಲಾಟೆಯಾಗುತ್ತಿತ್ತು. ಇಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕೂಡ ಪ್ರಕಾಶ್ , ನಾಗರಾಜ್ ಎಂಬಾತನ ನಡುವೆ ಜಮೀನು ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಗಲಾಟೆ ಮಾಡಿಕೊಳ್ಳಬೇಡಿ. ಕೋರ್ಟ್ ವಿಚಾರ ಕೋರ್ಟ್ನಲ್ಲಿ ಬಗೆಹರಿಸಿ ಎಂದು ಸೂಚಿಸಿ ವಾಪಸ್ಸು ಕಳಿಸಿದ್ದಾರೆ.
ಆಸ್ಪತ್ರೆ ಬರುವ ಮುಂಚೆಯೇ ಸಾವು ಎಂದ ವೈದ್ಯರು
ಇನ್ನು ಪೊಲೀಸರು ಜಗಳವನ್ನು ಶಾಂತ ಮಾಡಿ ಮನೆಗೆ ಕಳುಹಿಸಿದ್ದಾರೆ. ನಂತರ ಮನೆಗೆ ಹೋದಾಗ ಪ್ರಕಾಶ್ ಅವರು ಎದೆ ನೋವು ಎಂದು ಹೇಳಿಕೊಂಡಿದ್ದಾರೆ. ಕೂಡಲೇ ಹತ್ತಿರದ ಉಮಾಶಂಕರ್ ಎಂಬ ಕ್ಲಿನಿಕ್ಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಇಲ್ಲ ಆಗಲ್ಲ ಎಂದು ಬೇರೊಂದು ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಅದರಂತೆ ಬೇರೆ ಆಸ್ಪತ್ರೆಗೆ ಹೋಗಿದ್ದು, ಇವರು ಇಲ್ಲಿಗೆ ಬರುವ ಮೊದಲೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ಮೂತ್ರವಿಸರ್ಜನೆಗೆ ಹೋದ ವ್ಯಕ್ತಿಯ ಮೇಲೆ ಬಿದ್ದ ಸಿಮೆಂಟ್ ಸ್ಲ್ಯಾಬ್; ಸ್ಥಳದಲ್ಲೇ ಸಾವು
ಪ್ರಕಾಶ್ ಅವರದು ಕೊಲೆ ಎಂದು ಅರೋಪಿಸಿ ದೂರು ನೀಡಿದ ಕುಟುಂಬ
ಇನ್ನು ಯಾವಾಗ ಪ್ರಕಾಶ್ ಸಾವನ್ನಪ್ಪಿರುವ ವಿಷಯ ಕುಟುಂಬಸ್ಥರಿಗೆ ತಿಳಿಯಿತೋ, ಪ್ರಕಾಶ್ನದು ಸಹಜ ಸಾವಲ್ಲ, ಇದು ಕೊಲೆ ಎಂದು ಅರೋಪಿಸಿದ್ದಾರೆ. ಈ ಹಿನ್ನಲೆ ಲಿಖಿತ ದೂರು ನೀಡುವಂತೆ ಪೊಲೀಸರು ಸಂಬಂಧಿಕರಿಗೆ ಸೂಚನೆ ನೀಡಿದ್ದು, ದೂರಿನ ಆಧಾರದ ಮೇಲೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಘಟನೆ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತನಿಖೆಯ ಬಳಿಕ ಕೊಲೆಗೆ ನಿಖರ ಕಾರಣ ತಿಳಿಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ