ಕನ್ನಡ ಹಾಡು ಪ್ಲೇ ಮಾಡಿ ಎಂದಿದ್ದಕ್ಕೆ ಹಲ್ಲೆಗೆ ಮುಂದಾದ ಡಿಜೆ; ಕೋರಮಂಗಲದ ಬದ್ಮಾಶ್‌ ಪಬ್‌ನಲ್ಲಿ ತಡರಾತ್ರಿ ಘಟನೆ

| Updated By: ಆಯೇಷಾ ಬಾನು

Updated on: Feb 06, 2022 | 7:56 AM

ಫೆಬ್ರವರಿ 5 ರಂದು ಸುಮಿತಾ ಎಂಬ ಯುವತಿ ಹುಟ್ಟುಹಬ್ಬವಿತ್ತು. ಹಾಗಾಗಿ ಬದ್ಮಾಶ್‌ ಪಬ್ಗೆ ಸಹೋದರರು ಹಾಗೂ ಸ್ನೇಹಿತರ 15 ಜನರ ತಂಡ ತೆರಳಿತ್ತು. ರಾತ್ರಿ 9 ಗಂಟೆಗೆ ಎಲ್ಲರೂ ಪಬ್ಗೆ ಹೋಗಿದ್ದರು ಕನ್ನಡ ಹಾಡು ಪ್ಲೇ ಮಾಡುವಂತೆ ಡಿಜೆ ಬಳಿ ಮನವಿ ಮಾಡಿದ್ದರು.

ಕನ್ನಡ ಹಾಡು ಪ್ಲೇ ಮಾಡಿ ಎಂದಿದ್ದಕ್ಕೆ ಹಲ್ಲೆಗೆ ಮುಂದಾದ ಡಿಜೆ; ಕೋರಮಂಗಲದ ಬದ್ಮಾಶ್‌ ಪಬ್‌ನಲ್ಲಿ ತಡರಾತ್ರಿ ಘಟನೆ
ಕನ್ನಡ ಹಾಡು ಪ್ಲೇ ಮಾಡಿ ಎಂದಿದ್ದಕ್ಕೆ ಹಲ್ಲೆಗೆ ಮುಂದಾದ ಡಿಜೆ; ಕೋರಮಂಗಲದ ಬದ್ಮಾಶ್‌ ಪಬ್‌ನಲ್ಲಿ ತಡರಾತ್ರಿ ಘಟನೆ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪಬ್‌ಗಳಲ್ಲಿ ಕನ್ನಡ ಭಾಷೆ ಕಡೆಗಣನೆ ಆರೋಪ ಕೇಳಿ ಬಂದಿದೆ. ಕನ್ನಡ ಹಾಡು ಹಾಕಿ ಎಂದಿದ್ದಕ್ಕೆ ಡಿಜೆಯಿಂದ ಯುವತಿ, ಸೋದರನ ಮೇಲೆ ಹಲ್ಲೆಗೆ ಯತ್ನ ನಡೆದಿರುವ ಘಟನೆ ನಡೆದಿದೆ. ಕೋರಮಂಗಲದ ಬದ್ಮಾಶ್‌ ಪಬ್‌ನಲ್ಲಿ ತಡರಾತ್ರಿ ಡಿಜೆ ಸಿದ್ದಾರ್ಥ್ ಎಂಬ ವ್ಯಕ್ತಿ ಸುಮಿತಾ, ಸಹೋದರ ನಂದಕಿಶೋರ್‌ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಡಿಜೆ ಬಳಿ ಕನ್ನಡ ಹಾಡು ಹಾಕುವಂತೆ ಮನವಿ ಮಾಡಿದರೆ. ಕನ್ನಡ ಹಾಡು ಬೇಕಾದ್ರೆ ಹೊರಗೆ ಹೋಗಿ ಎಂದು ಡಿಜೆ ಆವಾಜ್ ಹಾಕಿದ್ದಾನಂತೆ. ಅಲ್ಲದೆ ನಂದಕಿಶೋರ್ ಕಾಲರ್ ಹಿಡಿದು ಧಮ್ಕಿ ಹಾಕಿದ ಆರೋಪ ಕೇಳಿ ಬಂದಿದ್ದು ಕನ್ನಡ ಭಾಷೆಯ ಬಗ್ಗೆ ಕೇವಲವಾಗಿ ಮಾತನಾಡಿದ್ದಾನಂತೆ. ಸದ್ಯ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಘಟನೆ ವಿವರ:
ಫೆ. 05ರ ತಡರಾತ್ರಿ 12.30ರ ಸುಮಾರಿಗೆ ಕೋರಮಂಗಲದ ಬದ್ಮಾಶ್‌ ಪಬ್‌ನಲ್ಲಿ ಕನ್ನಡ ಹಾಡು ಹಾಕುವಂತೆ ಮನವಿ ಮಾಡಿದಕ್ಕೆ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಯುವತಿ ಸುಮಿತಾ, ಸಹೋದರ ನಂದಕಿಶೋರ್‌ ಹಾಗೂ ಸ್ನೇಹಿತರು ಪಬ್‌ಗೆ ಹೊಗಿದ್ದರು. ಈ ವೇಳೆ ಕನ್ನಡ ಹಾಡು ಪ್ಲೇ ಮಾಡಿ ಎಂದು ಹೇಳಿದಕ್ಕೆ ಯುವತಿ ಹಾಗೂ ಆತನ ಸಹೋದರ ಮೇಲೆ ಡಿಜೆ ಸಿದ್ಧಾರ್ಥ್ ಹಲ್ಲೆಗೆ ಮುಂದಾದ್ರು ಎಂದು ಸುಮಿತಾ ಮತ್ತು ನಂದಕಿಶೋರ್‌ ಆರೋಪಿಸಿದ್ದಾರೆ. ಫೆಬ್ರವರಿ 5 ರಂದು ಸುಮಿತಾ ಎಂಬ ಯುವತಿ ಹುಟ್ಟುಹಬ್ಬವಿತ್ತು. ಹಾಗಾಗಿ ಬದ್ಮಾಶ್‌ ಪಬ್ಗೆ ಸಹೋದರರು ಹಾಗೂ ಸ್ನೇಹಿತರ 15 ಜನರ ತಂಡ ತೆರಳಿತ್ತು. ರಾತ್ರಿ 9 ಗಂಟೆಗೆ ಎಲ್ಲರೂ ಪಬ್ಗೆ ಹೋಗಿದ್ದರು ಕನ್ನಡ ಹಾಡು ಪ್ಲೇ ಮಾಡುವಂತೆ ಡಿಜೆ ಬಳಿ ಮನವಿ ಮಾಡಿದ್ದರು. 9.30 ರಿಂದ ರಾತ್ರಿ‌ 12.30 ಗಂಟೆವರೆಗೂ ಡಿಜೆ ಬಳಿ ಮನವಿ ಮಾಡಿದ್ದಾರೆ. ಸ್ವತಃ ಯುವತಿ ಸುಮಿತಾ ತೆರಳಿ ಒಂದೇ ಒಂದು ಕನ್ನಡ ಹಾಡು ಹಾಕಿ‌ ಎಂದು ನಾಲ್ಕೈದು ಬಾರಿ ಕೇಳಿದ್ರಂತೆ. ಅಲ್ಲದೇ ಸುಮಿತಾ ಮತ್ತೊಬ್ಬ ಸಹೋದರ ಡಾ.ದೀಪಕ್ ಕೂಡ ಕನ್ನಡ ಹಾಡಿಗೆ ಮನವಿ ಮಾಡಿದ್ದಾರೆ.

ಕನ್ನಡ ಸಾಂಗ್ ಹಾಕಲಿಕ್ಕೆ ಆಗಲ್ಲ, ಕನ್ನಡ ಸಾಂಗ್ ಕೇಳೋದಾದ್ರೆ ಹೊರಗ್ ಹೋಗಿ ಅಂತ ಡಿಕೆ ಅವಾಜ್ ಹಾಕಿದ್ದಾನಂತೆ. ಈ ವೇಳೆ ಪದೆ ಪದೆ ಕನ್ನಡ ಹಾಡು ಕೇಳ್ತಿದ್ದಾಗ ಸುಮಿತಾ ಸ್ನೇಹಿತರು ಮತ್ತು ಸಹೋದರರಿದ್ದ ಟೇಬಲ್ ಬಳಿ ಬಂದ ಡಿಜೆ ಸುಮಿತಾ ಸಹೋದರ ನಂದ ಕಿಶೋರ್ ಕಾಲರ್ ಹಿಡಿದು ಅವಾಜ್ ಹಾಕಿದ್ದಾನೆ. ಈ ವೇಳೆ ಬದ್ಮಾಶ್‌ ಪಬ್‌ನಲ್ಲಿ ವಾಗ್ವಾದ ನಡೆದಿದೆ. ಅಲ್ಲದೆ ರಾತ್ರಿ ಎರಡು ಗಂಟೆವರೆಗೂ ಪಬ್ ಬಾಗಿಲು ಓಪನ್ ಇದ್ರೂ ಕೋರಮಂಗಲ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತ ಕನ್ನಡ ಹಾಡಿಗಾಗಿ ರಾಧ್ದಾಂತ ಮಾಡಿಕೊಂಡವರು ಡಿಜೆ ಮೇಲೆ ಕೆಂಡಾಮಂಡಲರಾಗಿದ್ದಾರೆ.

ಇದನ್ನೂ ಓದಿ: Petrol Diesel Rate Today: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತ; ನಿಮ್ಮೂರಿನಲ್ಲಿ ಇಂಧನ ದರ ಎಷ್ಟಿದೆ?