Siddu Nija Kanasugalu Book: ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ತಡೆಯುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಕೆಪಿಸಿಸಿ

‘ಸಿದ್ದು ನಿಜ ಕನಸು’ ಎನ್ನುವ ಪುಸ್ತಕ ಬಿಡುಗಡೆಯನ್ನು ತಡೆಯುವಂತೆ ಕೆಪಿಸಿಸಿ ಕಾನೂನು ವಿಭಾಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Siddu Nija Kanasugalu Book: ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ ತಡೆಯುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಕೆಪಿಸಿಸಿ
‘ಸಿದ್ದು ನಿಜ ಕನಸು’ ಪುಸ್ತಕ
Updated By: ರಮೇಶ್ ಬಿ. ಜವಳಗೇರಾ

Updated on: Jan 08, 2023 | 11:33 PM

ಬೆಂಗಳೂರು: ಸಿದ್ದರಾಮಯ್ಯರನ್ನೇ ಗುರಿಯಾಗಿಸಿ ಬರೆಯಲಾಗಿರುವ ‘ಸಿದ್ದು ನಿಜ ಕನಸು’ ಎನ್ನುವ ಪುಸ್ತಕ (Siddu Nija Kanasugalu Book) ಬಿಡುಗಡೆಯನ್ನು ತಡೆಯುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್​ನ (ಕೆಪಿಸಿಸಿ) ಕಾನೂನು ಘಟಕ ದೂರು ನೀಡಿದೆ. ಬೆಂಗಳೂರಿನ ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಗೆ ಕೆಪಿಸಿಸಿ ಕಾನೂನು ವಿಭಾಗದ ಪರವಾಗಿ ಸೂರ್ಯ ಮುಕುಂದರಾಜ್ ದೂರು ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿಯಿಂದ ಮತ್ತೆ ಸಿದ್ದರಾಮಯ್ಯ ಟಾರ್ಗೆಟ್: ಜ.09 ರಂದು ಬೆಂಗಳೂರಿನಲ್ಲಿ ‘ಸಿದ್ದು ನಿಜ ಕನಸು’ ಪುಸ್ತಕ ಬಿಡುಗಡೆ

ನಾಳೆ ಬೆಂಗಳೂರಿನ ಪುರಭವನದಲ್ಲಿ ಸಿದ್ದು ನಿಜ ಕನಸು ಪುಸ್ತಕ ಬಿಡುಗಡೆಯಾಗಲಿದೆ. ಆದ್ರೆ, ಈ ಪುಸ್ತಕ ಬಿಡುಗಡೆ ಹಿಂದೆ ದುರುದ್ದೇಶವಿದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪುಸ್ತಕ ಬಿಡುಗಡೆ ರದ್ದುಪಡಿಸಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೆಲ‌ ದಿನಗಳ ಹಿಂದೆಯಷ್ಟೇ ಟಿಪ್ಪು ನಿಜ ಕನಸು ಎಂಬ ಪುಸ್ತಕ ಹಾಗೂ ನಾಟಕ ಬಿಡುಗಡೆಯಾಗಿತ್ತು. ಟಿಪ್ಪುವಿನ ಹಿಂದೂ ದ್ವೇಷವೇ ಪುಸ್ತಕದ ಕಥಾ ವಸ್ತುವಾಗಿತ್ತು. ಇದೀಗ ಅದೇ ತರ ಸಿದ್ದರಾಮಯ್ಯನವರನ್ನು ಗುರಿಯಾಗಿಸಿ ಸಿದ್ದು ನಿಜ ಕನಸು ಹೆಸರಿನಲ್ಲಿ ಪುಸ್ತಕ ಸಿದ್ಧಪಡಿಸಲಾಗಿದ್ದು. ನಾಳೆ ಬೆಂಗಳೂರಿನ ಪುರಭವನದಲ್ಲಿ ಸಿದ್ದು ನಿಜ ಕನಸು ಪುಸ್ತಕವನ್ನು ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಹಿಂದೂ ಸಮಾಜವನ್ನ ನಡೆಸಿಕೊಂಡ ರೀತಿಯನ್ನೇ ಹೈಲೈಟ್ ಮಾಡಿ ಪುಸ್ತಕ ಬರೆದಿರುವ ನಿರೀಕ್ಷೆ ಇದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಗಲಾಟೆ ಸೃಷ್ಠಿ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಟಿಪ್ಪು ನಿಜ ಕನಸು ಎಂಬ ಪುಸ್ತಕವನ್ನು ಬಿಡುಗಡೆ ಮಾಡದಂತೆ ಕೋರ್ಟ್​ನಿಂದ ತಡೆಯಾಜ್ಞೆ ತರಲಾಗಿತ್ತು. ಬಳಿಕ ಕೋರ್ಟ್ ಆ ತಡೆಯಾಜ್ಞೆಯನ್ನು ರದ್ದುಗೊಳಿಸಿ ಟಿಪ್ಪು ನಿಜ ಕನಸು ಎಂಬ ಪುಸ್ತಕ ಬಿಡುಗಡೆಗೆ ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಇನ್ನು ಸಿದ್ದು ಜನ ಕನಸುಗಳು ಪುಸ್ತಕದ ಬಗ್ಗೆ ಕೆಪಿಸಿಸಿ ಕಾನೂನು ಘಟಕ ದೂರು ನೀಡಿದ್ದು, ಪೊಲೀಸರು ಪುಸ್ತಕ ಬಿಡುಗಡೆಯನ್ನು ತಡೆಯುತ್ತಾರೋ ಅಥವಾ ಬಿಡುಗಡೆಗೆ ಅವಕಾಶ ಮಾಡಿಕೊಡುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ.