Crime News: ಬೆಂಗಳೂರಿನಲ್ಲಿ ಅದೊಂದು ಬೆರಳಚ್ಚು ತೆರೆದಿಟ್ಟಿತು ನೇಪಾಳಿ ಗ್ಯಾಂಗ್​ನ 15 ವರ್ಷದ ಪುರಾಣ

ಬೆಂಗಳೂರಲ್ಲಿ ದೊಡ್ಡ ದೊಡ್ಡ ಮನೆಗಳಿಗೆ ಕನ್ನ ಹಾಕಿ ನೇಪಾಳದಲ್ಲಿ ಎಂಜಾಯ್​ ಮಾಡಿ, ಹೆಸರು ಬದಲಿಸಿಕೊಂಡು ರಾಜ್ಯಕ್ಕೆ ರೀ ಎಂಟ್ರಿ ಕೊಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Crime News: ಬೆಂಗಳೂರಿನಲ್ಲಿ ಅದೊಂದು ಬೆರಳಚ್ಚು ತೆರೆದಿಟ್ಟಿತು ನೇಪಾಳಿ ಗ್ಯಾಂಗ್​ನ 15 ವರ್ಷದ ಪುರಾಣ
Follow us
| Updated By: ವಿವೇಕ ಬಿರಾದಾರ

Updated on:Jan 08, 2023 | 4:05 PM

ಬೆಂಗಳೂರು: ಆ ಗ್ಯಾಂಗ್​ನಲ್ಲಿದವರಿಗೆ ಒಪ್ಪತ್ತಿನ ಊಟಕ್ಕೂ ಕಷ್ಟವಾಗಿತ್ತು. ದೇಶ ಬಿಟ್ಟು ನಮ್ಮ ರಾಜ್ಯಕ್ಕೆ ಬಂದು ಮೈ ಬಗ್ಗಿಸಿ ದುಡಿಯೊದು ಬಿಟ್ಟು ದೊಡ್ಡ ದೊಡ್ಡ ಮನೆಗಳಿಗೆ ಕನ್ನ ಹಾಕೊದೆ ಈ ಗ್ಯಾಂಗ್​ನ ಕಾಯಕವಾಗಿತ್ತು. ಈ ಗ್ಯಾಂಗ್​ ಕಳೆದ 15 ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಓಡುತ್ತಿತ್ತು. ಆದರೆ ನಮ್ಮ ಖಾಕಿ ಪಡೆ ಗ್ಯಾಂಗ್​ನ್ನು ಬೆಂಬಿಡದೆ ಬೆನ್ನಹತ್ತಿ ಇಂದು (ಜ.8) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಈ ಗ್ಯಾಂಗ್​ ಪೊಲೀಸರ ಬಲೆಗೆ ಬಿದ್ದಿರೋದೆ ರೋಚಕ ಕಹಾನಿ. ರಾಜ್ಯದ ಪೊಲೀಸರು ಅಪರಾಧ ಕೃತ್ಯಗಳನ್ನು ಭೇದಿಸುವಲ್ಲಿ ದೇಶದಲ್ಲೇ ಎತ್ತಿದ ಕೈ. ಒಂದು ಸುಳಿವು ಸಿಕ್ಕರೆ ಸಾಕು ಪಾಪಿಗಳ ಜನ್ಮವೇ ಜಾಲಾಡಿ ಬಿಡುತ್ತಾರೆ. ಈ ಇನ್​ಟ್ರೆಸ್ಟಿಂಗ್ ನೇಪಾಳಿ ಗ್ಯಾಂಗ್ ಕಹಾನಿಯಲ್ಲಿ ಆಗಿದ್ದು ಇದೆ. ಇಲ್ಲದೆ ಓದಿ ಖಾಕಿ ಪಡೆಯ ಚಾಣಾಕ್ಷ ನಡೆ.

15 ವರ್ಷದಿಂದ ರಾಜ್ಯದಲ್ಲಿ ಹೆಸರು ಬದಲಿಸಿಕೊಂಡು ಆ್ಯಕ್ಟೀವ್ ಆಗಿದ್ದ ಕುಖ್ಯಾತ ಗ್ಯಾಂಗ್..!

ಕಳೆದ 15 ವರ್ಷಗಳಿಂದ ರಾಜ್ಯದ ಪೊಲೀಸರ ಕೈಗೆ ಸಿಗದೆ ಸಾಲು ಸಾಲು ಮನೆಗಳ್ಳತನ ಕೃತ್ಯ ಎಸಗುತಿದ್ದ ಖತರ್ನಾಕ್ ಗ್ಯಾಂಗ್ ಈಗ ಬಾಣಸವಾಡಿ ಪೊಲೀಸರ ಬಲೆಗೆ ಬಿದ್ದಿದೆ. ಹೌದು, ಈ ಫೋಟೊದಲ್ಲಿ ಕಾಣುತ್ತಿರುವ ಇವರ ಹೆಸರು ಭರತ್ ಬಹದ್ದೂರ್, ಮಂಗಲ್ ಸಿಂಗ್ ಹಾಗೂ ಕುಬೇರ್ ಬಹದ್ದೂರ್. ಮೂಲತಃ ನೇಪಾಳದವರಾದ ಈ ಮೂವರು ಹಲವು ವರ್ಷಗಳ ಹಿಂದೆ ಭಾರತಕ್ಕೆ ಬಂದು ನೆಲೆಸಿದ್ದಾರೆ. ಸಣ್ಣಪುಟ್ಟ ಕೆಲಸ ಅಂತ ಹುಡುಕಿಕೊಂಡು ನಮ್ಮ ರಾಜ್ಯಕ್ಕೆ ಬಂದ ಈ ಐನಾತಿಗಳು ನಿಯತ್ತಾಗಿ ದುಡಿಯೊದು ಬಿಟ್ಟು ಕಂಡ ಕಂಡವರ ಮನೆಗೆ ಕನ್ನ ಹಾಕೊಕೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ಪ್ರೇಯಸಿಯ ಪತಿಯ ಕತ್ತು ಸೀಳಿ ಕೊಲೆ ಮಾಡಿ ದೇಹವ ಸುಟ್ಟು ಹಾಕಿದ ಯುವಕ

ಮೈಸೂರು, ಬೆಂಗಳೂರು ಅಂತ ಹಲವು ಕಡೆ ತಮ್ಮ ಕೈಚಳಕ ಶುರು ಮಾಡಿದ ಆಸಾಮಿಗಳು ಸಾಲು ಸಾಲು ಮನೆಗಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದರು. ಆರೋಪಿಗಳಿಗಾಗಿ ಪೊಲೀಸರು 2007 ರಿಂದ ಹುಡುಕಾಟ ನಡೆಸುತಿದ್ದು, ಕೊನೆಗೂ ಈ ಐನಾತಿ ಖದೀಮರು ನಗರದ ಬಾಣಸವಾಡಿ ಪೊಲೀಸರಿಗೆ ತಗಲಾಕಿಕೊಂಡಿದ್ದಾರೆ.

ಕಳೆದ ತಿಂಗಳು (ಡಿ.24/2022) ರ ಮಿಡ್ ನೈಟ್ ಬೀಟ್​ನಲ್ಲಿದ್ದ ಬಾಣಸವಾಡಿ ಪೊಲೀಸ್ ಸಿಬ್ಬಂದಿಗಳು ವಾಹನ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಪರಿಶೀಲನೆ ನಡೆಸುತಿದ್ದರು. ಈ ವೇಳೆ ಎಂಟ್ರಿ ಕೊಟ್ಟ ಮೂವರಿಂದ ಗ್ಯಾಂಗ್ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ. ಇದರಿಂದ ಅವರನ್ನು ಪರಿಶೀಲಿಸಿದ ಪೊಲೀಸರಿಗೆ ಖದೀಮರು ಕನ್ನ ಹಾಕಲು ಬಳಸುವ ಟೂಲ್ಸ್ ಇರುವುದು ಪತ್ತೆಯಾಗಿವೆ. ಇದರಿಂದ ಖಾಕಿ, ಪೊಲೀಸ್​ ಭಾಷೆಯಲ್ಲಿ ವಿಚಾರಿಸಿದಾಗ ಚಿನ್ನದಂಗಡಿಗೆ ಕನ್ನ ಹಾಕಲು ಸಕಲ ಸಿದ್ದತೆಯಲ್ಲಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: ಗುಟಕಾ ತಿಂದು ಉಗಿದ ಎಂಬ ಕಾರಣಕ್ಕೆ ವ್ಯಕ್ತಿಯ ಬರ್ಬರ ಕೊಲೆ

ಬಳಿಕ ಪೊಲೀಸರು ಆರೋಪಿಗಳ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ನುಡುವೆ ಎಂಸಿಟಿಎನ್ ಎಸ್ ಆ್ಯಪ್ ಮುಖಾಂತರ ಫಿಂಗರ್ ಸ್ಯಾಂಪಲ್ ಪಡೆಯಲಾಯ್ತು. ಆಗಲೇ ಓಪನ್​ ಆಯ್ತು ಖದೀಮರ ದುಷ್ಕೃತ್ಯಗಳ ಗಂಟು.

 ಕಳ್ಳತನದ ಇತಿಹಾಸ ಕಕ್ಕಿದ ಖದೀಮರು

ಪೊಲೀಸರ ವಿಚಾರಣೆ ವೇಳೆ ಕಳ್ಳರು ಸಾಲು ಸಾಲು ಕಳ್ಳತನದ ಬಳಿಕ ಚಿನ್ನ, ನಗದು ಸಮೇತ ನೇಪಾಳಕ್ಕೆ ಎಸ್ಕೇಪ್ ಆಗಿ, ಮೋಜು ಮಾಡುತಿದ್ದರು. ಬಳಿಕ ಸೈಲೆಂಟ್ ಆಗಿ ರಾಜ್ಯಕ್ಕೆ ವಾಪಸ್​ ಬಂದು ಹೆಸರು ಬದಲಿಸಿಕೊಳ್ಳುತಿದ್ದರು. ಆದರೆ ಕೊನೆಗೂ ಆರೋಪಿಗಳು 15 ವರ್ಷಗಳ ಬಳಿಕ ಜೈಲು ಸೇರಿಸಿದ್ದಾರೆ.

ವರದಿ-ಜಗದೀಶ ಟಿವಿ9 ಬೆಂಗಳೂರು

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:02 pm, Sun, 8 January 23