ಬೆಂಗಳೂರು: ರಾಜ್ಯದಲ್ಲಿ ಮನೆ ಮನೆಗೆ ಗಂಗೆ ಯೋಜನೆ ಜಾರಿಗೆ ತರುತ್ತಿದ್ದೇವೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ. ಈ ಮೊದಲು ಶೇ.25ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಇತ್ತು. ಈಗ ಶೇ.46ರಷ್ಟು ಮನೆಗಳಿಗೆ ನಲ್ಲಿ ನೀರು ವ್ಯವಸ್ಥೆ ಮಾಡಿದ್ದೇವೆ. ಮುಂದಿನ 1 ವರ್ಷದಲ್ಲಿ ಎಲ್ಲಾ ಮನೆಗಳಿಗೂ ನೀರಿನ ಸಂಪರ್ಕ ಆಗಲಿದೆ. ರಾಜ್ಯ 97 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ದೊರೆಯಲಿದೆ. 50,000ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಗಂಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಮನೆಮನೆಗೆ ಗಂಗೆ ಯೋಜನೆಯಲ್ಲಿ ಹಳೆಯ ನಲ್ಲಿ, ಪೈಪ್ ಬಳಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಹಳೆಯ ಪೈಪ್, ನಲ್ಲಿ ಚೆನ್ನಾಗಿದ್ದರೆ ಅದನ್ನೇ ಬಳಸುತ್ತೇವೆ. ಇಲ್ಲದಿದ್ದರೆ ಹೊಸದು ಹಾಕುತ್ತೇವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಕರ್ನಾಟಕ ಈ ಬಾರಿಯೂ ದಾಖಲೆ ಪ್ರಗತಿಯನ್ನು ಸಾಧಿಸಿದೆ. ಮನ್ರೇಗಾ ಕಾರ್ಯಕ್ರಮದ ಅನುಷ್ಠಾನದಲ್ಲಿ ದಾಖಲೆ ಪ್ರಗತಿ ಸಾಧಿತವಾಗಿದೆ. 21-22 ರಲ್ಲಿ 13 ಕೋಟಿ ಮಾನವ ದಿನಗಳ ಗುರಿ ನೀಡಲಾಗಿತ್ತು. ಆ ಗುರಿ ಡಿಸೆಂಬರ್ ಅಂತ್ಯಕ್ಕೆ ಮುಟ್ಟಲಾಯಿತು. ಹೆಚ್ಚುವರಿ 3 ಕೋಟಿ ದಿನಗಳ ಗುರಿಯನ್ನು ನೀಡಲಾಯಿತು. ಮಾರ್ಚ್ ಅಂತ್ಯಕ್ಕೆ 3.13 ಕೋಟಿ ಮಾನವ ದಿನ ಸೃಷ್ಟಿ ಮಾಡಿ, ಗುರಿ ಮೀರಿದ ಸಾಧನೆ ಮತ್ತೊಮ್ಮೆ ಮಾಡಲಾಗಿದೆ. ರಾಜ್ಯದ 32 ಲಕ್ಷ ಕುಟುಂಬಗಳು ಈ ಯೋಜನೆಯಲ್ಲಿ ಭಾಗಿ ಆಗಿವೆ. 3,957.45 ಕೋಟಿ ಹಣ ಕೂಲಿ ರೂಪದಲ್ಲಿ ನೀಡಲಾಗಿದೆ ಎಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಕಾರಿಣಿಗೂ ಮುನ್ನ ಸಚಿವರಿಗೆ ಟಾಸ್ಕ್ ನೀಡಲಾಗಿದೆ. ತಮ್ಮ ಇಲಾಖೆಗಳ ಸಾಧನೆ ಜನರಿಗೆ ತಲುಪಿಸಲು ಸೂಚನೆ ಕೊಡಲಾಗಿದೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಪಕ್ಷದ ಮೂಲಕ ಸಾಧನೆ ಜನರಿಗೆ ತಲುಪಿಸುವಂತೆ ಸೂಚನೆ ನೀಡಲಾಗಿದೆ. ಪ್ರತಿ ದಿನ ಒಂದೊಂದು ಇಲಾಖೆಗಳ ಸಾಧನೆ ತಿಳಿಸಬೇಕು. ಸುದ್ದಿಗೋಷ್ಠಿ ಮೂಲಕ ಇಲಾಖೆ ಸಾಧನೆ ತಿಳಿಸಲು ಸೂಚನೆ ನೀಡಲಾಗಿದೆ. ಈ ಹಿನ್ನೆಲೆ, ನಿನ್ನೆಯಿಂದ ಸಚಿವರ ಸುದ್ದಿಗೋಷ್ಠಿಗಳು ಆರಂಭವಾಗಿದೆ.
ಸಿಎಂ ಕ್ಲಾಸ್ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳ ಮಹತ್ವದ ಸಭೆ?
ನಗರದ ರಸ್ತೆ, ಮೂಲಸೌಕರ್ಯಗಳ ಬಗ್ಗೆ ಐಟಿ ತಜ್ಞ ಮೋಹನ್ ದಾಸ್ ಪೈ ಟ್ವೀಟ್ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದು ಇದೀಗ ಸಿಎಂ ಕ್ಲಾಸ್ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ್ದಾರೆ. ಮೂಲಸೌಕರ್ಯ, ರಸ್ತೆ ವಿಭಾಗದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಅಧಿಕಾರಿಗಳ ಜೊತೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸಭೆ ನಡೆಸಿದ್ದಾರೆ. ನಗರದ ರಸ್ತೆ, ಮೂಲಸೌಕರ್ಯದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ರಸ್ತೆ, ಮೂಲಸೌಕರ್ಯ ಕುರಿತು ಮೋಹನ್ ದಾಸ್ ಪೈ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆ, ಅಧಿಕಾರಿಗಳು ಸಭೆ ನಡೆಸಿದ್ದಾರೆ.
ಆದರೆ, ಈ ಸಭೆಗೂ ಮೋಹನ್ ದಾಸ್ ಟ್ವೀಟ್ಗೂ ಸಂಬಂಧ ಇಲ್ಲ ಎಂದು ಸಭೆಗೂ ಮುನ್ನ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ. ಮೂಲಸೌಕರ್ಯ, ರಸ್ತೆ ವಿಭಾಗದ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತಿದೆ. ಐಟಿ ತಜ್ಞ ಮೋಹನ್ ದಾಸ್ ಪೈ ಜತೆ ಸಿಎಂ ಮಾತಾಡಿದ್ದಾರೆ. ಈ ಸಭೆಗೂ ಮೋಹನ್ ದಾಸ್ ಟ್ವೀಟ್ಗೂ ಸಂಬಂಧ ಇಲ್ಲ ಎಂದು ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯೋ ಅಥವಾ ಅಲ್ ಖೈದಾ ಮುಖ್ಯಸ್ಥನಾ? ರಾಜ್ಯದ ಜನರೇ ತೀರ್ಮಾನಿಸಬೇಕು -ಕೆಎಸ್ ಈಶ್ವರಪ್ಪ
Published On - 12:19 pm, Sat, 9 April 22