ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯೋ ಅಥವಾ ಅಲ್ ​ಖೈದಾ ಮುಖ್ಯಸ್ಥನಾ? ರಾಜ್ಯದ ಜನರೇ ತೀರ್ಮಾನಿಸಬೇಕು -ಕೆಎಸ್ ಈಶ್ವರಪ್ಪ

ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯೋ ಅಥವಾ ಅಲ್ ​ಖೈದಾ ಮುಖ್ಯಸ್ಥನಾ? ರಾಜ್ಯದ ಜನರೇ ತೀರ್ಮಾನಿಸಬೇಕು -ಕೆಎಸ್ ಈಶ್ವರಪ್ಪ
ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯೋ ಅಥವಾ ಅಲ್ ​ಖೈದಾ ಮುಖ್ಯಸ್ಥನಾ? ರಾಜ್ಯದ ಜನರೇ ತೀರ್ಮಾನ ಮಾಡಬೇಕು - ಸಚಿವ ಈಶ್ವರಪ್ಪ

Al Qaeda: ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯೋ? ಅಥವಾ ಅಲ್​ ಖೈದಾ ಮುಖ್ಯಸ್ಥನಾ? ಇದನ್ನು ರಾಜ್ಯದ ಜನರೇ ತೀರ್ಮಾನ ಮಾಡಬೇಕು ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ

TV9kannada Web Team

| Edited By: sadhu srinath

Apr 08, 2022 | 1:07 PM

ಶಿವಮೊಗ್ಗ: ಮಂಡ್ಯ ವಿದ್ಯಾರ್ಥಿನಿ ಮುಸ್ಕಾನ್​ ಖಾನ್​​ ಹೊಗಳಿ ಅಲ್​ ಖೈದಾ ಮುಖ್ಯಸ್ಥ ವಿಡಿಯೋ ಹರಿಯ ಬಿಟ್ಟ ವಿಚಾರದಲ್ಲಿ RSS​ನವರೇ ಆ ಉಗ್ರ ವಿಡಿಯೋ ಬಿಟ್ಟಿದ್ದಾರೆಂದು ಸಿದ್ದರಾಮಯ್ಯ (Siddaramaiah) ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು (minister KS Eshwarappa) ಈಗ ಯಾರನ್ನು ರಾಷ್ಟ್ರದ್ರೋಹಿ ಎಂದು ಕರೆಯಬೇಕು? ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯೋ? ಅಥವಾ ಅಲ್​ ಖೈದಾ ಮುಖ್ಯಸ್ಥನಾ? (Al Qaeda chief) ಇದನ್ನು ರಾಜ್ಯದ ಜನರೇ ತೀರ್ಮಾನ ಮಾಡಬೇಕು ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ (Mandya Muskan Khan row).

ಮುಸ್ಕಾನ್ ಹೊಗಳಿದ ಅಲ್ ಖೈದಾ ಮುಖ್ಯಸ್ಥ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ವಿಡಿಯೋ ಆರ್ ಎಸ್ ಎಸ್ ಬಿಡುಗಡೆ ಮಾಡಿಸಿದ್ದು ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಸಚಿವ ಈಶ್ವರಪ್ಪ ಅವರು ‘ಮಾಜಿ ಸಿಎಂ ಸಿದ್ದರಾಮಯ್ಯ ಅಲ್​ಖೈದಾ ಮುಖ್ಯಸ್’ ಎಂದು ಹೇಳಿದ್ದು, ಸಚಿವ ಈಶ್ವರಪ್ಪ ಹೇಳಿಕೆ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ. ಈಶ್ವರಪ್ಪ ಬಗ್ಗೆ ಮಾತಾಡಲ್ಲ ಅಂದ್ರು ಯಾಕೆ ಪ್ರಶ್ನೆ ಮಾಡ್ತೀರಾ? ಈಶ್ವರಪ್ಪ ಬಗ್ಗೆ ನಾನು ಮಾತಾಡೋದಿಲ್ಲ ಎಂದು ಸುದ್ದಿಗಾರರ ವಿರುದ್ಧ ಗರಂ ಆದ ಸಿದ್ದರಾಮಯ್ಯ ವೈ ಆರ್ ಯು ಆಸ್ಕಿಂಗ್? ಆ ಎಮ್ ನಾಟ್ ರಿಯಾಕ್ಟಿಂಗ್ ಎಂದು ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ನಿರಾಕರಿಸಿದರು.

ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಶಹಬಾಸ್ ಎಂದ ಅಲ್​ ಖೈದಾ ನಾಯಕನನ್ನು ಎಲ್ರೂ ತರಾಟೆಗೆ ತೆಗೆದುಕೊಂಡಿರುವಾಗ ಸಿದ್ದರಾಮಯ್ಯ ಏನಂದರು ನೋಡಿ!?

Follow us on

Related Stories

Most Read Stories

Click on your DTH Provider to Add TV9 Kannada