ಕೆಎಸ್ಆರ್ಟಿಸಿ ಬಸ್ಗಳಲ್ಲಿ ಗಾಂಜಾ ಮಾರುತ್ತಿದ್ದ ಬಿಎಂಟಿಸಿ ಚಾಲಕ, ನಿರ್ವಾಹಕ ಅರೆಸ್ಟ್
ಬಂಧಿತರು ವಿಜಯಪುರ, ಕಲಬುರಗಿಯಿಂದ ಗಾಂಜಾ ತಂದು ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದು, ಆರೋಪಿಗಳ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರು: ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಆರೋಪದಡಿ ಬಿಎಂಟಿಸಿ ಬಸ್ ಚಾಲಕ, ನಿರ್ವಾಹಕರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ವಿಠ್ಠಲ್ ಭಜಂತ್ರಿ ಮತ್ತು ಶರಣಬಸಪ್ಪ ಎಂಬುವವರೇ ಬಂಧಿತರು ಬಂಧಿತರಿಂದ 9.800 ಕೆಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕಳೆದ ಮೂರು ವರ್ಷಗಳಿಂದ ಕೆಂಗೇರಿ ಬಳಿ ತುರಹಳ್ಳಿ ಅರಣ್ಯ ಪ್ರದೇಶದಲ್ಲಿಯೂ ಗಾಂಜಾ ಮಾರಾಟ ಮಾಡುತ್ತಿದ್ದರು. ಬಂಧಿತರು ವಿಜಯಪುರ, ಕಲಬುರಗಿಯಿಂದ ಗಾಂಜಾ ತಂದು ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎಂಟಿಸಿ ಯಲ್ಲಿ ಚಾಲಕ ಮತ್ತು ನಿರ್ವಾಹಕರಾಗಿ ಕೆಲಸ ಮಾಡ್ತಿದ್ದ ಆರೋಪಿಗಳು. ಸರ್ಕಾರಿ ಬಸ್ ಗಳಲ್ಲಿ ಮುಕ್ತ ಓಡಾಟಕ್ಕೆ ಅವಕಾಶವನ್ನು ಬಂಧಿತರು ದುರ್ಬಳಕೆ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಗಲಕೋಟೆ ವರದಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ನಾಗರಾಳ ಗ್ರಾಮದ ಹೊವೊಂದರಲ್ಲಿ ಅಕ್ರಮವಾಗಿ ಬೆಳೆದಿದ್ದ 20 ಕೆಜಿ ಹಸಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಗರಾಳ ಗ್ರಾಮದಲ್ಲಿ ಸಿದ್ದಪ್ಪ ದಡ್ಡೆನವರ್ ಹೊಲದಲ್ಲಿ ಜಪ್ತಿ ಮಾಡಲಾಗಿದ್ದು, ಆರೋಪಿ ಸಿದ್ದಪ್ಪನನ್ನು ವಶಕ್ಕೆ ಅಬಕಾರಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುಧೋಳ ಅಬಕಾರಿ ಠಾಣೆಯಲ್ಲಿ ಎನ್ಡಿಪಿಎಸ್ ಌಕ್ಟ್‌ನಡಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ:
ಉಡುಪಿ ಜನರು ಹೃದಯ ವೈಶಾಲ್ಯವುಳ್ಳವರು; ಕಷ್ಟಕ್ಕೆ ಪರಿಹಾರ ಕೇಳುವರೇ ವಿನಃ ವೈಯಕ್ತಿಕವಾಗಿ ಏನೂ ಕೇಳಲ್ಲ: ಸಿಎಂ ಬೊಮ್ಮಾಯಿ
Vijay Prakash: ‘ಉಡುಪಿ ಹೋಟೆಲು, ಮೂಲೆ ಟೇಬಲು’ ಎನ್ನುತ್ತಾ ಧನಂಜಯ್ ಬರೆದ ಹಾಡಿಗೆ ದನಿಯಾಗಿದ್ದಾರೆ ವಿಜಯ್ ಪ್ರಕಾಶ್
(KSRTC BMTC driver and conductor Arrested for sell marijuana in buses)
Published On - 9:59 pm, Thu, 12 August 21